ವಿಜಯಪುರ : ನಾನು ಸಿಎಂ ಆಗಿ ಮೊದಲ ಕ್ಯಾಬಿನೆಟ್ನಲ್ಲೇ ಮುಸ್ಲಿಂಮರನ್ನು ಅಲ್ಪಸಂಖ್ಯಾತ ಪಟ್ಟಿಯಿಂದ ಹೊರಾಹಾಕ್ತೇನೆ. ರಾಜ್ಯದಲ್ಲಿ ಯೋಗಿ ಆದಿತ್ಯನಾಥ ಆಡಳಿತ ನಡೆಸುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಹನುಮ ಜಯಂತಿ. ಆಂಜನೇಯನ ಸನ್ನಿಧಾನದಲ್ಲಿ ನಿಂತು ಹೇಳುತ್ತೇನೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರಿಸಿಕೊಳ್ಳಿ ಅಂತ ಹೇಳಲ್ಲ. ಅವರಾಗಿಯೇ ಅಪ್ಪ, ಮಗನ ಕೈ ಬಿಟ್ಟು ನನ್ನನ್ನು ಬಿಜೆಪಿಗೆ ಬನ್ನಿ ಅಂತಾ ಕರೆಯುತ್ತಾರೆ.
ಬಳಿಕ ಸಿಎಂ ಆಗಿ ರಾಜ್ಯದಲ್ಲಿ ಯೋಗಿ ಆದಿತ್ಯನಾಥ ತರಹ ರಾಜ್ಯಭಾರ ಮಾಡುತ್ತೇನೆ. ಸಿಎಂ ಆದ ಮೊದಲ ಕ್ಯಾಬಿನೆಟ್ ಸಭೆಯಲ್ಲೇ ಅಲ್ಪಸಂಖ್ಯಾತ ಪಟ್ಟಿಯಿಂದ ಮುಸ್ಲಿಮರನ್ನು ಹೊರಹಾಕುತ್ತೇನೆ. ಇವರ ಹೊರತಾಗಿ ಮರಾಠರು, ಬ್ರಾಹ್ಮಣರು, ಕ್ಷತ್ರಿಯರು ಸೇರಿದಂತೆ ಅನೇಕರು ಅಲ್ಪಸಂಖ್ಯಾತರು ಇದ್ದಾರೆ. ಅವರಿಗೆಲ್ಲ ಅಲ್ಪಸಂಖ್ಯಾತ ಸ್ಥಾನಮಾನ ಕೊಡ್ತೆನೆ ಎಂದಿದ್ದಾರೆ.
ವೀರಣ್ಣ ಚರಂತಿಮಠ ಅವರು ನನ್ನ ಆತ್ಮೀಯರು. ಬಾಗಲಕೋಟೆಯಲ್ಲಿ ಬಿಜೆಪಿ ಕಾರ್ಯಕರ್ತರು ನನ್ನನ್ನ ಪ್ರಚಾರಕ್ಕೆ ಕರೆದಿದ್ದಾರೆ. ಅದಕ್ಕೆ ನಾನು ಚರಂತಿಮಠ ಅವರ ಪ್ರಚಾರಕ್ಕೆ ಹೊರಟಿದ್ದೇನೆ. ಯಾವುದೇ ನಾಟಕ ಮಾಡಿ ಬಿಜೆಪಿ ಸೇರುವ ಅವಶ್ಯಕತೆ ನನಗಿಲ್ಲ. ಸಚಿವ ಎಂ.ಬಿ ಪಾಟೀಲ್ ಸ್ವಾಭಿಮಾನದ ಮಾತುಗಳನ್ನ ಆಡ್ತಾರೆ.
ಅವರಿಗೆ ಸ್ವಾಭಿಮಾನ ಇದ್ರೆ, ಬಾಗೇವಾಡಿಗೆ ಹೋಗಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡೋದನ್ನ ಬಿಡಲಿ. ಬಾಗೇವಾಡಿ ಕಾಂಗ್ರೆಸ್ ಅಭ್ಯರ್ಥಿ ಮುಸುಕಿನಲ್ಲಿ ರಾತ್ರಿ ಬಂದು ಎಂ.ಬಿ ಪಾಟೀಲ್ ವಿರುದ್ಧ ಪ್ರಚಾರ ಮಾಡಿ ಹೋಗುತ್ತಾನೆ ಎಂದು ಟಾಂಗ್ ಕೊಟ್ಟಿದ್ದಾರೆ.















