ಮನೆ ಸುದ್ದಿ ಜಾಲ ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿಗೆ ತರಲು ಕೇಂದ್ರಕ್ಕೆ ಒತ್ತಡ; ಏ.29ರಂದು ರಾಜ್ಯಮಟ್ಟದ...

ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿಗೆ ತರಲು ಕೇಂದ್ರಕ್ಕೆ ಒತ್ತಡ; ಏ.29ರಂದು ರಾಜ್ಯಮಟ್ಟದ ಚಿಂತನ-ಮಂಥನ

0

ಮೈಸೂರು (Mysuru)-ರೈತರ ಉತ್ಪನ್ನಗಳಿಗೆ ಶಾಸನಬದ್ಧ ಖಾತರಿ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಲಾಗುವುದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ (Kuruburu Shantakumar) ಹೇಳಿದ್ದಾರೆ.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ಏ.29ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಚಿಂತನ-ಮಂಥನ ನಡೆಸಲಾಗುತ್ತಿದೆ. ವಿಶ್ರಾಂತ ನ್ಯಾಯಮೂರ್ತಿ ನಾಗಮೋಹನದಾಸ್ ಸಭೆಯನ್ನು ಉದ್ಘಾಟಿಸಲಿದ್ದಾರೆ ಎಂದರು.

ಕಬ್ಬು ಬೇಸಾಯ, ಸಕ್ಕರೆ ಉತ್ಪಾದನೆ, ಹಣ ಪಾವತಿಗೆ ರಾಜ್ಯದಲ್ಲಿ ಡಿಜಿಟಲ್-ಗಣಕೀಕರಣ ವ್ಯವಸ್ಥೆ ಜಾರಿಗೆ ತರುವಂತೆ ಆಗ್ರಹಿಸಿದ್ದಾರೆ. ಉತ್ತರ ಪ್ರದೇಶದಲ್ಲಿ “ಈ-ಗನ್ನ ಆಪ್ ಮೂಲಕ ಕಟ್ಟು ಬೆಳೆದ ರೈತ ಕಬ್ಬಿನ ಪ್ರದೇಶ ಸರ್ವೆ, ಸಮೀಕ್ಷೆ ಮಾಡಿ ಆಪ್ ಮೂಲಕ ನೊಂದಣಿ ಮಾಡಲಾಗುತ್ತಿದೆ. ಈ ಪ್ರಕಾರವೇ ರೈತರಿಗೆ ಕಟ್ಟು ಕಟಾವು ಅನುಮತಿಯನ್ನು ಮೊಬೈಲ್ ಮೂಲಕವೇ ತಿಳಿಸಲಾಗುತ್ತದೆ. ನಂತರ ಕಬ್ಬು ಕಟಾವು ಸಾಗಾಣಿಕೆ ಮಾಡಿದ 14 ದಿನದೊಳಗಾಗಿ ಕಬ್ಬು ಸರಬರಾಜು ರೈತನ ಖಾತೆಗೆ ಸರ್ಕಾರದ ವತಿಯಿಂದ ಹಣ ಡಿಜಿಟಲ್ ಪೇಮೆಂಟ್ ಮೂಲಕ ಪಾವತಿಯಾಗುತ್ತದೆ. ಇದರಿಂದ ಯಾವುದೇ ವಂಚನೆ, ವಿಳಂಬ ಇರುವುದಿಲ್ಲ. ರೈತರು ಕಬ್ಬಿನ ಹಣಕ್ಕಾಗಿ ಅಲೆದಾಡುವುದು, ವಿಳಂಬವಾಗಿ ಕಟಾವು ಮಾಡುವುದು, ಕಾರ್ಖಾನೆಗಳಲ್ಲಿ ಕಬ್ಬಿನ ಲಾರಿಗಳು ಕಟ್ಟು ಅರೆಯಲು ವಿಳಂಬವಾಗುತ್ತಿರುವುದು ತಪ್ಪುತ್ತದೆ. ಇದರಿಂದ ಸಕ್ಕರೆ ಕಾರ್ಖಾನೆಗಳಿಗೆ ಸಕ್ಕರೆ ಇಳುವರಿ ಏರಿಕೆಯಾಗಲು ಸಹಕಾರಿಯಾಗುತ್ತದೆ ಎಂದಿದ್ದಾರೆ.

ಕಬ್ಬು ಬೆಳೆಯುವ ಎಲ್ಲಾ ರೈತರಿಗೂ ಮೊಬೈಲ್ ಆಪ್ ಮೂಲಕವೇ ಈ ಕಾರ್ಯ ನಡೆಸುವಂತಾದರೆ ಸರ್ಕಾರಕ್ಕಾಗಲಿ, ಕಾರ್ಖಾನೆಗಳಿಗೆಯಾಗಲಿ, ರೈತರಿಗಾಗಲಿ ಹೆಚ್ಚು ಸಮಸ್ಯೆಗಳು ಉದ್ಭವಿಸುವುದಿಲ್ಲ. ಹೀಗಾಗಿ ಉತ್ತರ ಪ್ರದೇಶ ಸರ್ಕಾರ ಹಣ ಪಾವತಿ ಇ-ಪೇಮೆಂಟ್ ಮೂಲಕ ಮಾಡಲು ವಿಶೇಷ ಆ್ಯಪ್ ಬಳಸಲು ಸರ್ಕಾರ ಮುಂದಾಗಬೇಕು ಎಂದು ಹೇಳಿದ್ದಾರೆ.

ಸಕ್ಕರೆ ಕಾರ್ಖಾನೆಗಳು ಸಕ್ಕರೆ, ವಿದ್ಯುತ್, ಎಥನಾಲ್, ಮೊಲಾಸಿಸ್ ಮಾರಾಟ ಮಾಡಿದ ಹಣದಿಂದ ಶೇ.80ರಷ್ಟು ಸರ್ಕಾರದ ಖಜಾನೆಗೆ  ಬರುತ್ತದೆ. ಇದರಿಂದ ಕಬ್ಬು ಬೆಳೆಗಾರರಿಗೆ ಸುಲಭವಾಗಿ ಹಣ ಪಾವತಿಸುವುದು ಸಾಧ್ಯವಾಗುತ್ತದೆ. ರಾಜ್ಯದಲ್ಲಿ ಎಥನಾಲ್ ಘಟಕ ಆರಂಭಿಸಲು ರಹದಾರಿ ನೀಡುವ ಮಾನದಂಡ ಸರಳಿಕರಣಗೊಳಿಸಬೇಕು ಎಂದರು.

ಹಿಂದಿನ ಲೇಖನಕಾಂಗ್ರೆಸ್‌ ವಕ್ತಾರ ಎಂ.ಲಕ್ಷ್ಮಣ್‌ ಗೆ ಲೀಗಲ್‌ ನೋಟಿಸ್‌ ನೀಡಿದ ಸಿ.ಟಿ.ರವಿ
ಮುಂದಿನ ಲೇಖನಕೊರೊನಾ 4ನೇ ಅಲೆ ಭೀತಿ: ವಿಮಾನ ನಿಲ್ದಾಣ, ಗಡಿ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ; ಸಿಎಂ ಬೊಮ್ಮಾಯಿ ಸುಳಿವು