ಬೆಳಗಾವಿ: ಕಾರ್ಯಕರ್ತರ ಅಭಿಪ್ರಾಯ ಪಡೆದು ನಾಳೆ ಎಂಎಲ್ ಸಿ ಸ್ಥಾನಕ್ಕೆ ಮತ್ತು ಬಿಜೆಪಿಗೆ ರಾಜೀನಾಮೆ ನೀಡುತ್ತೇನೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಘೋಷಿಸಿದ್ದಾರೆ.
ಅಥಣಿ ಕ್ಷೇತ್ರದ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದು, ಈ ಕುರಿತು ಇಂದು ಮಾತನಾಡಿದ ಅವರು, ಸಿಎಂ ಬೊಮ್ಮಾಯಿ ಗಟ್ಟಿಯಾಗಿ ನನ್ನ ಪರ ನಿಂತಿದ್ರೆ ಟಿಕೆಟ್ ಸಿಗುತಿತ್ತು. ನನ್ನನ್ನು ಡಿಸಿಎಂ ಮಾಡಿ ಅರ್ಧಕ್ಕೆ ತೆಗೆದರು ಏನು ಅಪರಾಧ ಮಾಡಿದೆ ಅಂತಾ ಸ್ಥಾನ ಕಿತ್ತುಕೊಂಡರು ಎಂದು ಪ್ರಶ್ನಿಸಿದರು.
ಬೊಮ್ಮಾಯಿ ನನ್ನ ಪರ ಗಟ್ಟಿಯಾಗಿ ನಿಲ್ಲಿಲ್ಲ. ಸಿಎಂ ಬೊಮ್ಮಾಯಿ ಒತ್ತಡ ಹೇರಿದ್ರೆ ಟಿಕೆಟ್ ಸಿಗುತ್ತಿತ್ತು. ಅಣ್ಣಾ ಸಾಹೇಬ್ ಸ್ನೇಹಿತರಾಗಿ ಭೇಟಿ ನೀಡಿದ್ದರು. ಈಗ ಸಂದಾಯ ಸಮಯ ಮುಗಿದಿದೆ . ಕ್ಷೇತ್ರದ ಜನರೇ ನನ್ನ ಹೈಕಮಾಂಡ್ ಎಂದು ಹೇಳಿದರು.
Saval TV on YouTube