ಮನೆ ಕ್ರೀಡೆ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ : ಭಾರತದ ವಿರುದ್ಧ ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ

ಐಸಿಸಿ ಮಹಿಳಾ ಟಿ20 ವಿಶ್ವಕಪ್‌ : ಭಾರತದ ವಿರುದ್ಧ ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ

0

ಕೇಪ್‌’ಟೌನ್‌: ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಭಾರತದ ಟಾಸ್‌ ಗೆದ್ದಿರುವ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್‌ ಆಯ್ದುಕೊಂಡಿದೆ.

ಲೀಗ್‌ ಹಂತದಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರು ಜಯ ಹಾಗೂ ಒಂದು ಸೋಲು ಕಂಡಿರುವ ಭಾರತಕ್ಕೆ, ಸೋಲಿನ ರುಚಿ ಕಾಣದ ಆಸ್ಟ್ರೇಲಿಯಾ ಕಠಿಣ ಸವಾಲಾಗಲಿದೆ.

ಭಾರತ ಪರ ಸ್ಮೃತಿ ಮಂದಾನ, ಶಫಾಲಿ ವರ್ಮಾ ಮತ್ತು ರಿಚಾ ಘೋಷ್‌ ಅವರು ಮಾತ್ರ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ.

ಜೆಮಿಮಾ ರಾಡ್ರಿಗಸ್‌ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಬೇಕಿದೆ. ಟೂರ್ನಿಯಲ್ಲಿ ಇದುವರೆಗೆ ಮಿಂಚಲು ವಿಫಲವಾಗಿರುವ ನಾಯಕಿ ಹರ್ಮನ್‌ ಪ್ರೀತ್‌ ಕೌರ್ ಒತ್ತಡದಲ್ಲಿದ್ದಾರೆ. ತಂಡವನ್ನು ಫೈನಲ್‌’ನತ್ತ ಮುನ್ನಡೆಸುವ ಜತೆಗೆ, ವೈಯಕ್ತಿಕ ಕೊಡುಗೆ ನೀಡುವ ಸವಾಲೂ ಅವರ ಮುಂದಿದೆ.

ಬೌಲಿಂಗ್‌’ನಲ್ಲಿ ರೇಣುಕಾ ಸಿಂಗ್‌ ಮತ್ತು ದೀಪ್ತಿ ಶರ್ಮಾ ಅವರನ್ನು ಹೊರತುಪಡಿಸಿದರೆ, ಇತರರಿಂದ ಪ್ರಭಾವಿ ಪ್ರದರ್ಶನ ಮೂಡಿಬಂದಿಲ್ಲ. ಇಂಗ್ಲೆಂಡ್‌ ವಿರುದ್ಧ 15 ರನ್‌’ಗಳಿಗೆ ಐದು ವಿಕೆಟ್‌ ಪಡೆದಿದ್ದ ರೇಣುಕಾ ಒಟ್ಟು ಏಳು ವಿಕೆಟ್‌ ಗಳಿಸಿದ್ದಾರೆ.

ಸ್ಪಿನ್ನರ್‌ ದೀಪ್ತಿ ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡಿದ್ದಾರೆ. ಪೂಜಾ ವಸ್ತ್ರಕರ್‌, ರಾಜೇಶ್ವರಿ ಗಾಯಕವಾಡ್‌ ಮತ್ತು ರಾಧಾ ಯಾದವ್‌ ಅವರು ಬಲಿಷ್ಠ ಬ್ಯಾಟಿಂಗ್‌ ಕ್ರಮಾಂಕ ಹೊಂದಿರುವ ಆಸ್ಟ್ರೇಲಿಯಾ ವಿರುದ್ಧ ಶಿಸ್ತಿನಿಂದ ಬೌಲಿಂಗ್‌ ಮಾಡಬೇಕಿದೆ.