ಮನೆ ಸುದ್ದಿ ಜಾಲ ರಷ್ಯಾ ಜೊತೆಗಿನ ಒಡಂಬಡಿಕೆ ಮರುಪರಿಶೀಲಿಸುವಂತೆ ಉಕ್ರೇನ್ ಸಂಸದ ಒತ್ತಾಯ

ರಷ್ಯಾ ಜೊತೆಗಿನ ಒಡಂಬಡಿಕೆ ಮರುಪರಿಶೀಲಿಸುವಂತೆ ಉಕ್ರೇನ್ ಸಂಸದ ಒತ್ತಾಯ

0

ಕೀವ್: ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆ ಮುಂದುವರಿದಿರುವ ಬೆನ್ನಲ್ಲೇ ಉಕ್ರೇನ್‌ನ ಕಿರಿಯ ಸಂಸತ್ ಸದಸ್ಯ ಸ್ವಿಯಾಟೊಸ್ಲಾವ್ ಯುರಾಶ್, ರಷ್ಯಾ ಜೊತೆಗಿನ ಒಡಂಬಡಿಕೆಯನ್ನು ಮರುಪರಿಶೀಲಿಸುವಂತೆ ಭಾರತವನ್ನು ಒತ್ತಾಯಿಸಿದ್ದಾರೆ.

‘ಭಾರತವು ರಷ್ಯಾದೊಂದಿಗೆ ಹಲವು ಒಪ್ಪಂದಗಳನ್ನು ಮಾಡಿಕೊಂಡಿದೆ. ಅವುಗಳನ್ನು ಈಗ ಮರುಪರಿಶೀಲಿಸಬೇಕಾಗಿದೆ. ರಷ್ಯಾ ಎಲ್ಲಾ ಅಂತರರಾಷ್ಟ್ರೀಯ ನಿಯಮಗಳು ಮತ್ತು ವಾಗ್ದಾನಗಳನ್ನು ಮುರಿದಿದೆ. ಹೀಗಾಗಿ ರಷ್ಯಾದೊಂದಿಗೆ ಅಂತರ ಕಾಯ್ದುಕೊಳ್ಳುವ ಬಗ್ಗೆ ಯಾವುದೇ ನಡೆಯನ್ನು ಕೂಡ ಸ್ವಾಗತಿಸಬೇಕು. ರಷ್ಯಾವನ್ನು ಈಗ ಶಿಕ್ಷಿಸಬೇಕಾಗಿದೆ’ ಯುರಾಶ್ ಹೇಳಿದ್ದಾರೆ.

ನಮ್ಮ ಪ್ರಧಾನಿಗೆ ಕರೆ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು. ಭಾರತ ಮಾಡುತ್ತಿರುವ ಮಾನವೀಯ ನೆರವುಗಳಿಗೆ ನಾವು ಆಭಾರಿಯಾಗಿದ್ದೇವೆ’ ಎಂದು ತಿಳಿಸಿದ್ದಾರೆ.

ಹಿಂದಿನ ಲೇಖನಹನುಮನ ಜನ್ಮಸ್ಥಳ ಅಯೋಧ್ಯದಿಂದ ಅಂಜನಾದ್ರಿ ಬೆಟ್ಟಕ್ಕೆ ಸಂಪರ್ಕ: ಸಚಿವೆ ಶಶಿಕಲಾ ಜೊಲ್ಲೆ
ಮುಂದಿನ ಲೇಖನಅಡುಗೆ ಎಣ್ಣೆ ಲೀಟರ್ ಗೆ 50 ರೂ. ಏರಿಕೆ; ಖರೀದಿಗೆ ಮಿತಿ