ಮನೆ ಆರೋಗ್ಯ ಕೊಲೆಸ್ಟ್ರಾಲ್ ಹೆಚ್ಚಾದರೆ ಕೈ ಬೆರಳು ಹಾಗೂ ಕಾಲು ಬೆರಳುಗಳಲ್ಲಿ ಈ ಲಕ್ಷಣ ಕಂಡುಬರುತ್ತದೆ

ಕೊಲೆಸ್ಟ್ರಾಲ್ ಹೆಚ್ಚಾದರೆ ಕೈ ಬೆರಳು ಹಾಗೂ ಕಾಲು ಬೆರಳುಗಳಲ್ಲಿ ಈ ಲಕ್ಷಣ ಕಂಡುಬರುತ್ತದೆ

0

ನಮ್ಮ ಮಧ್ಯೆ ಬಿಪಿ ಮತ್ತು ಶುಗರ್ ಇರುವವರು ದಿನೇ ದಿನೇ ಹೆಚ್ಚುತ್ತಾ ಹೋಗುತ್ತಿದ್ದಾರೆ. ಮೇಲ್ನೋಟಕ್ಕೆ ಇವರಿಗೆ ಈ ಕಾಯಿಲೆಗಳು ಕಂಡರೆ, ಒಳಗಡೆ ಕೊಲೆಸ್ಟ್ರಾಲ್ ಮತ್ತು ಬೊಜ್ಜು ಜೊತೆಗೆ ಇನ್ನಿತರ ಲಿಪಿಡ್ ಅಂಶಗಳು ಏರಿಕೆಯಾಗಿರುತ್ತವೆ.

ರಕ್ತ ಪರೀಕ್ಷೆ ಮಾಡಿದಾಗ ಮಾತ್ರ ಇದು ಬೆಳಕಿಗೆ ಬರುತ್ತದೆ. ಆದರೆ ಸಾಮಾನ್ಯ ಜನರಿಗೆ ಇದರ ಅರಿವಿರುವುದಿಲ್ಲ. ಸುಮ್ಮನೆ ಬಿಪಿ, ಶುಗರ್ ಮಾತ್ರೆಗ ಳನ್ನು ತೆಗೆದುಕೊಂಡು ಜೀವನ ಸಾಗಿಸುತ್ತಿರುತ್ತಾರೆ. ಆದರೆ ಕೊಲೆಸ್ಟ್ರಾಲ್ ಕಂಟ್ರೋಲ್ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಒಂದು ವೇಳೆ ದೇಹದಲ್ಲಿ ಅಧಿಕ ಕೊಲೆಸ್ಟ್ರಾಲ್ ಆದರೆ ಏನೆಲ್ಲಾ ತೊಂದರೆ ಆಗಬಹುದು ಎಂಬುದನ್ನು ಇಲ್ಲಿ ತಿಳಿಸಿಕೊಡಲಾಗಿದೆ.

ದೇಹದಲ್ಲಿ ಕೊಲೆಸ್ಟ್ರಾಲ್ ಯಾಕೆ ಹೆಚ್ಚಾಗುತ್ತದೆ?

• ಮನುಷ್ಯನ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ ಕೆಲವೊಂದು ಕಾಯಿಲೆಗಳು ಬರುತ್ತವೆ. ಆದರೆ ಇಂತಹ ಕೊಲೆಸ್ಟ್ರಾಲ್ ದೇಹದಲ್ಲಿ ಬರಲು ಹಲವಾರು ಕಾರಣಗಳಿವೆ.

• ಉದಾಹರಣೆಗೆ ನಾವು ತಿನ್ನುವ ಆಹಾರ, ದುರಭ್ಯಾಸ ಗಳಾದ ಧೂಮಪಾನ ಮತ್ತು ಮಧ್ಯಪಾನ, ವ್ಯಾಯಾಮ ಮಾಡದೇ ಇರುವುದು, ದೇಹದ ತೂಕ ಹೆಚ್ಚಾಗಿರುವುದು ಇವೆಲ್ಲವೂ ಸಹ ರಕ್ತನಾಳಗಳಲ್ಲಿ ಸರಿಯಾದ ರಕ್ತ ಸಂಚಾರ ಆಗದಂತೆ ಮಾಡಿ ಹೃದಯಕ್ಕೆ ತೊಂದರೆ ದಾಯಕವಾಗಿರುತ್ತವೆ.

ಕೈ ಬೆರಳು ಹಾಗೂ ಕಾಲು ಬೆರಳುಗಳಲ್ಲಿ ನೋವು

• ಯಾರಿಗೆ ಅತಿ ಹೆಚ್ಚಿನ ಕೊಲೆಸ್ಟ್ರಾಲ್ ಇರುತ್ತದೆ ಅವರಿಗೆ ಇದ್ದಕ್ಕಿ ದ್ದಂತೆ ಕೈಕಾಲಿನ ಬೆರಳುಗಳಲ್ಲಿ ನೋವು ಪ್ರಾರಂಭ ವಾಗುತ್ತದೆ.

• ಏಕೆಂದರೆ ಕೈಗಳಲ್ಲಿ ಮತ್ತು ಕಾಲುಗಳಲ್ಲಿ ಇರುವ ರಕ್ತನಾಳ ಗಳಲ್ಲಿ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ.

• ಇದು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಏರಿಕೆ ಮಾಡುತ್ತದೆ ಮತ್ತು ಕೈಕಾಲುಗಳ ಬೆರಳುಗಳಲ್ಲಿ ಮುಳ್ಳು ಚುಚ್ಚಿದ ಅನುಭವ ಉಂಟಾಗುತ್ತದೆ.

ಕಣ್ಣುಗಳ ಮೇಲೆ ಹಳದಿ ಮತ್ತು ಕಿತ್ತಳೆ ಬಣ್ಣದ ಗುಳ್ಳೆಗಳು

• ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ ಈ ರೀತಿ ಕೂಡ ಆಗುತ್ತದೆ. ಅದೇನೆಂದರೆ ಕಣ್ಣುಗಳ ಭಾಗದಲ್ಲಿ ಹಳದಿ ಮತ್ತು ಕಿತ್ತಳೆ ಬಣ್ಣದಲ್ಲಿ ಸಣ್ಣ ಸಣ್ಣ ಗುಳ್ಳೆಗಳು ಕಂಡು ಬರುತ್ತವೆ. ಮುಖ್ಯವಾಗಿ ಕಣ್ಣುಗಳ ರೆಪ್ಪೆಯ ಮೇಲಿನ ಭಾಗದಲ್ಲಿ ಈ ರೀತಿ ಕಾಣಿಸಿಕೊಳ್ಳುತ್ತದೆ.

• ಅಂಗೈಯಲ್ಲಿ ಹಾಗೂ ಪಾದಗಳ ಭಾಗದಲ್ಲಿ ಸಹ ಕಂಡು ಬರುತ್ತದೆ. ಯಾವಾಗ ದೇಹದಲ್ಲಿ ಟ್ರೈಗ್ಲಿಸರಾಯ್ಡ್ ಪ್ರಮಾಣ ಏರಿಕೆಯಾಗುತ್ತದೆ, ಆಗ ಕೊಬ್ಬಿನ ಶೇಖರಣೆ ಗುಳ್ಳೆಗಳ ರೀತಿ ಚರ್ಮದ ಭಾಗದಲ್ಲಿ ಉಂಟಾಗುತ್ತದೆ ಎಂಬುದು ಆರೋಗ್ಯ ತಜ್ಞರ ಮಾತು.

• ಇದು ಮುಂದಿನ ದಿನಗಳಲ್ಲಿ ನರನಾಡಿಗೆ ಸಂಬಂಧ ಪಟ್ಟಂತೆ ಕಾಯಿಲೆಗಳನ್ನು ತಂದುಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.

ಅಂಗೈಯಲ್ಲಿ ಹಳದಿ ಕೊಲೆಸ್ಟ್ರಾಲ್ ಶೇಖರಣೆ

• ಡಾಕ್ಟರ್ ಹೇಳುವ ಪ್ರಕಾರ ಯಾರಿಗೆ ಅಧಿಕ ಕೊಲೆಸ್ಟ್ರಾಲ್ ಪ್ರಮಾಣ ಇರುತ್ತದೆ ಅವರಿಗೆ ಕೈಗಳ ಅಂಗೈ ಭಾಗದಲ್ಲಿ ಹಳದಿ ಬಣ್ಣದ ಶೇಖರಣೆ ಕಂಡು ಬರುತ್ತದೆ.

• ಕೆಲವೊಮ್ಮೆ ಕಣ್ಣುಗಳ ಭಾಗದಲ್ಲಿ ಕೂಡ ಹೀಗಾಗುತ್ತದೆ. ಇನ್ನು ಕೆಲವರಿಗೆ ಕಾಲುಗಳ ಪಾದದ ಭಾಗದಲ್ಲಿ ಈ ರೀತಿ ಲಕ್ಷಣಗಳು ಕಾಣಿಸುತ್ತವೆ. ಆದರೆ ಅಧಿಕ ಕೊಲೆಸ್ಟ್ರಾಲ್ ಇರುವವರಿಗೆ ಬೆರಳು ತುದಿಯಲ್ಲಿ ಮರಗಟ್ಟಿದ ಅನುಭವ ಆಗುವುದಿಲ್ಲ ಎಂಬುದು ವೈದ್ಯರ ಮಾತು.

ಗಮನಿಸಿ

• ನಿಯಮಿತವಾದ ವ್ಯಾಯಾಮ, ಉತ್ತಮ ಆಹಾರ ಪದ್ಧತಿ ಮತ್ತು ಒಳ್ಳೆಯ ಜೀವನ ಶೈಲಿ ಇವುಗಳು ಆರೋಗ್ಯವನ್ನು ಕಾಪಾಡುತ್ತವೆ.

• ಹಾಗಾಗಿ ಒಂದು ವೇಳೆ ನಿಮ್ಮ ಕೊಲೆಸ್ಟ್ರಾಲ್ ಸಮಸ್ಯೆ ತುಂಬಾ ಗಂಭೀರ ಪ್ರಮಾಣದಲ್ಲಿ ಇದ್ದರೆ, ಡಾಕ್ಟರ್ ಬಳಿ ಸಲಹೆ ಮತ್ತು ಚಿಕಿತ್ಸೆ ಪಡೆದುಕೊಂಡು ಔಷಧಿಗಳನ್ನು ತಪ್ಪದೆ ತೆಗೆದುಕೊಳ್ಳಿ ಮತ್ತು ನಿಮ್ಮನ್ನು ನೀವು ಕಾಪಾಡಿಕೊಳ್ಳಿ.

ಹಿಂದಿನ ಲೇಖನಕರ್ನಾಟಕವನ್ನು ದಕ್ಷಿಣ ಭಾರತದಲ್ಲಿ ನಂಬರ್ ಒನ್ ಮಾಡುತ್ತೇವೆ: ಅಮಿತ್ ಶಾ
ಮುಂದಿನ ಲೇಖನಜೈಲಿನಲ್ಲಿ 1.5 ಲಕ್ಷದ ಚಪ್ಪಲಿ ಧರಿಸಿದ್ದ ಸುಕೇಶ್ ಚಂದ್ರಶೇಖರ್‌