ಮನೆ ರಾಜ್ಯ ಸ್ಪಷ್ಟವಾದ ಸಿದ್ಧಾಂತಗಳೊಂದಿಗೆ ಶ್ರಮ ವಹಿಸಿದರೆ ಸಾಧನೆ ಸಾಧ್ಯ: ಎಸ್ ಪಿ ಸೀಮಾ ಲಾಟ್ಕರ್

ಸ್ಪಷ್ಟವಾದ ಸಿದ್ಧಾಂತಗಳೊಂದಿಗೆ ಶ್ರಮ ವಹಿಸಿದರೆ ಸಾಧನೆ ಸಾಧ್ಯ: ಎಸ್ ಪಿ ಸೀಮಾ ಲಾಟ್ಕರ್

0

ಮೈಸೂರು: ಬದುಕಿನಲ್ಲಿ ಅಡೆತಡೆಗಳು ಬರುವುದು ಸಹಜ. ಆದರೆ ಅಸಾಧ್ಯ ಎನ್ನುವುದು ಯಾವುದೂ ಇಲ್ಲ. ನಾವು ಧೈರ್ಯದಿಂದ ಮುನ್ನುಗಿದರೆ ಯಾವುದೇ ಸಾಹಸವನ್ನು ಮಾಡಲು ಸಾಧ್ಯವಾಗುತ್ತದೆ. ಸ್ಪಷ್ಟವಾದ ಸಿದ್ಧಾಂತಗಳೊಂದಿಗೆ ಶ್ರಮ ವಹಿಸಿದರೆ ಸಾಧನೆಯ ನಮ್ಮದಾಗುತ್ತದೆ ಎಂದು ಮೈಸೂರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಅವರು  ಹೇಳಿದರು. 

ಅವರು ಇಂದು ಮೈಸೂರಿನ ಮಹಾರಾಣಿ ಕಲಾ ಕಾಲೇಜಿನಲ್ಲಿ ಸಾಹಸಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ನಾನು ವಿದ್ಯಾರ್ಥಿನಿಯಾಗಿದ್ದಾಗ ಹಾಸ್ಟೆಲ್ ನಲ್ಲಿ ಇದ್ದು ವ್ಯಾಸಂಗ ಮಾಡಿದ್ದೆ.  ನನಗೂ ಸಹ ಅನೇಕ ಅಡೆತಡೆಗಳು ಎದುರಾಗಿದ್ದವು.  ಆದರೆ ಅದೆಲ್ಲವನ್ನು ಎದುರಿಸಿದ್ದಕ್ಕೆ ಇಂದು ನಾನು ಪೊಲೀಸ್ ವರಿಷ್ಠಾಧಿಕಾರಿಯಾಗಲು ಸಾಧ್ಯವಾಗಿದೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಬಿ ವಿ ವಸಂತ್ ಕುಮಾರ್ ಅವರು ವಹಿಸಿಕೊಂಡಿದ್ದರು. 

ವಿದ್ಯಾರ್ಥಿನಿಯರು ಬದುಕಿನಲ್ಲಿ ಆಕಾಶದೆತ್ತರಕ್ಕೆ ಏರಲಿ ಎಂಬ ಆಶಯದೊಂದಿಗೆ ಬಲೂನ್ಗಳನ್ನು ಗಾಳಿಗೆ ತೂರಿ ಬಿಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಸಾಹಸ ಕೂಟದ ಸಂಯೋಜಕರಾದ ಡಾಕ್ಟರ್ ನಾಗವೇಣಿ ಟಿ ಹಾಗೂ ಐಕ್ಯುಎಸಿ ಸಂಯೋಜಕರಾದ ಡಾಕ್ಟರ್ ಪ್ರಕಾಶ್ ಎನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.