ಮನೆ ಮನೆ ಮದ್ದು ಅನ್ನದಲ್ಲಿ ವಿಷ ಬೆರೆಸಿದರೆ

ಅನ್ನದಲ್ಲಿ ವಿಷ ಬೆರೆಸಿದರೆ

0

1. ಎಲ್ಲಾದರೂ ಊಟಕ್ಕೆ ಹೋದಾಗ ಊಟದಲ್ಲಿ ವಿಷ ಬೆರೆಸುವವರು ಎಂಬ ಸಂದೇಹ ಇದ್ದರೆ ಊಟಕ್ಕೆ ಮುಂಚೆ ಏಲಕ್ಕಿಯನ್ನು ಸೇವಿಸುವುದರಿಂದ ವಿಷದ ಪ್ರಭಾವ, ಪರಿಣಾಮ  ಏನೇನೂ ಸಂಭವಿಸದು.

Join Our Whatsapp Group

2. ವಿಷ ಪ್ರಾಶನದ ಸಮಯದಲ್ಲಿ ಸಾಸುವೆಯ ಪುಡಿಯನ್ನು ಬೆಚ್ಚನೆಯ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದಲೂ ವಾಂತಿಯಾಗಿ ವಿಷ ಹೊರ ಬರುವುದು.

 ಆಸನಾಗ್ರರದಲ್ಲಿ ಉರಿ :

1. ಏಳು ದಿನಗಳ ಕಾಲ ಬೆಂಡೆಕಾಯಿ ಪಲ್ಯವನ್ನು ಬರಿ ಹೊಟ್ಟೆಯಲ್ಲಿ ತಿನ್ನುತ್ತಿದ್ದರೆ ಅಸನಾಗ್ರರದಲ್ಲಿ ಆಗುವ ಉರಿ ಕಡಿಮೆ ಆಗುವುದು.

2. ಬೇವಿನ ಸೊಪ್ಪಿನ ಕಷಾಯವನ್ನು ಉಗುರು ಬೆಚ್ಚಗೆ ಮಾಡಿ,ಆಗಾಗ ಆಸನಾಗ್ರಹ ಭಾಗವನ್ನು ತೊಳೆಯುತ್ತಿದ್ದರೆ ಯೋನಿಯ  ರೋಗಾಣುಗಳು ನಾಶ ಆಗುವವು.

 ಅಪಸ್ಮಾರ, (ಮೂರ್ಛೆರೋಗ )

 ಬಾಳೆದಿಂಡಿನಿಂದ ರಸ ತೆಗೆದು ಆ ರಸವನ್ನು ನೀರಿನಲ್ಲಿ ಮಿಶ್ರ ಮಾಡಿ,ದೀರ್ಘಾವಧಿಯವರೆಗೆ ಸೇವಿಸುತ್ತಿದ್ದಾರೆ ಅಪಸ್ಮಾರ ಕಾಯಿಲೆಯು ದಿನಕ್ರಮೇಣ ಕಡಿಮೆ ಆಗುವುದು.

 ಉಳುಕಿದಾಗ :

1. ಹಳೆಯ ಬೆಲ್ಲವನ್ನು ಹುಣಸೆ ಹಣ್ಣಿನೊಂದಿಗೆ ಬಿಸಿಮಾಡಿ, ಉಳಿಕಿದ ಜಾಗವನ್ನು ಕಾವು ಕೊಟ್ಟರೆ ಕಡಿಮೆ ಆಗುವುದಲ್ಲದೆ ಬೇರ್ಪಟ್ಟ ಕೀಲುಗಳು ಸರಿಜಾಗದಲ್ಲಿ ಸೇರುವವು.

2. ತುಪ್ಪದೊಂದಿಗೆ ಬೆಲ್ಲವನ್ನು ಬಿಸಿ ಮಾಡಿ, ಉಳುಕಿರುವ ಜಾಗದಲ್ಲಿ ಲೇಪಿಸುವುದರಿಂದ ನೋವು ಕಡಿಮೆ ಆಗುವುದಲ್ಲದೆ, ಗುಣಮುಖ ಎನಿಸುವುದು.

3. ಉಳುಕಿರುವ ಹಾಗೂ ಊದಿರುವ ಜಾಗಕ್ಕೆ ಬಿಸಿನೀರು ಕಾವು ಕೊಡುವುದರಿಂದ ಉಳುಕಿದುದರ ನೋವು ಕಡಿಮೆ ಆಗುವುದು ಊತವೂ ಇಳಿಯುವುದು.

4. ಬಿಸಿ ಮಾಡಿದ್ದ ಹುಣಸೆ ಗೊಜ್ಜನ್ನು ಉಳುಕಿರುವ ಹಾಗೂ ಊತ ಇರುವ ಭಾಗದಲ್ಲಿ ಲೇಪಿಸುವುದರಿಂದ ನೋವು ಕಡಿಮೆ ಆಗುವುದರೊಂದಿಗೆ ಆಯಾ ಭಾಗದ ಕೀಲುಗಳ ಕೆಲಸ ನಡೆಯುವುದು.