ಮನೆ ರಾಜಕೀಯ ತಾಂತ್ರಿಕ ಸಭೆ ಅನುಮತಿ ನೀಡಿದರೆ ಶಾಲೆ ಆರಂಭ: ಸಚಿವ ಬಿ.ಸಿ.ನಾಗೇಶ್

ತಾಂತ್ರಿಕ ಸಭೆ ಅನುಮತಿ ನೀಡಿದರೆ ಶಾಲೆ ಆರಂಭ: ಸಚಿವ ಬಿ.ಸಿ.ನಾಗೇಶ್

0

ಬೆಂಗಳೂರು: ಕೊರೊನಾ ವೈರಸ್ ಮತ್ತು ಓಮೈಕ್ರಾನ್  ಹೆಚ್ಚುತ್ತಲೇ ಇರುವ ಕಾರಣದಿಂದಾಗಿ ಶಾಲೆಗಳನ್ನು  ಬಂದ್ ಮಾಡಲಾಗಿದ್ದು, ತಾಂತ್ರಿಕ ಸಭೆ ಅನುಮತಿ ನೀಡಿದರೆ ಶಾಲೆ ಆರಂಭ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಹಿತಿ ನೀಡಿದರು.

ಇಂದು ಶಾಲೆಗಳನ್ನು ಪುನರಾರಂಭಿಸುವ ಕುರಿತು ಸಭೆ ನಡೆಸಿ ಮಾತನಾಡಿದ ಸಚಿವರು, ಮಾಡುವ ಕುರಿತು ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿಯನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಗಳಿಗೆ ನೀಡಲಾಗಿದೆ. ರಾಜ್ಯದಲ್ಲಿ ತಾಲೂಕುವಾರು ಶಾಲೆಗಳನ್ನು ಬಂದ್ ಮಾಡಲಾಗಿದೆ. ಇತ್ತ ಬೆಂಗಳೂರಿನಲ್ಲಿ ಜನವರಿ 31 ರವರೆಗೆ 1 ರಿಂದ 9ನೇ ತರಗತಿಗಳನ್ನು ಬಂದ್ ಮಾಡಿ, ಆನ್ ಲೈನ್ ಕ್ಲಾಸ್ ಗೆ ಉತ್ತೇಜನ ನೀಡಲಾಗಿದೆ ಎಂದರು.

ಮೂರು ಡಿಜಿಟ್ ಇದ್ದ ಪಾಸಿಟಿವ್ ಪ್ರಕರಣಗಳ ಸಂಖ್ಯೆ ನಾಲ್ಕು ಡಿಜಿಟ್ ಆಗಿದೆ. ಇಲ್ಲಿಯವರೆಗೂ ಮಕ್ಕಳ ಮೇಲೆ ‌ಗಂಭೀರ ಪರಿಣಾಮ ಬೀರಿಲ್ಲ. ಅನೇಕ ‌ಶಾಲೆಗಳಲ್ಲಿ ಪೂರ್ಣ ಪರೀಕ್ಷೆ ಮಾಡಿಸಲಾಗಿದೆ. ಮಕ್ಕಳಲ್ಲಿ ಕಲಿಯಬೇಕು ಎನ್ನುವ ಆಸಕ್ತಿ ಇದೆ. ನಾಳೆ ನಡೆಯುವ ಸಭೆಯಲ್ಲಿ ಮುಖ್ಯಮಂತ್ರಿಗಳು ಅನುಮತಿ ನೀಡಿದರೆ ಮಹಾನಗರಗಳಲ್ಲೂ ಶಾಲೆ ಆರಂಭಿಸಲಾಗುವುದು.  ತಾಂತ್ರಿಕ ಸಲಹಾ ಸಮಿತಿ ಮುಂದೆ ಕೂಡ ನಾವು ಶಾಲೆಗಳ ಸ್ಥಿತಿಗತಿ ಬಗ್ಗೆ ವಿವರ ನೀಡುತ್ತೇವೆ. ಈಗಾಗಲೇ ಶಾಲೆಗಳಲ್ಲಿ ಶೇ.80ರಷ್ಟು ಪಠ್ಯವನ್ನು ಪೂರ್ಣಗೊಳಸಲಾಗಿದೆ ಎಂದು ತಿಳಿಸಿದರು.

1 ರಿಂದ 10 ನೇ ತರಗತಿಯಲ್ಲಿ ನಿನ್ನೆ 1,250 ಮಕ್ಕಳಿಗೆ ಕೊರೊನಾ ಸೋಂಕು ತಗುಲಿದ್ದು, ಸದ್ಯ 6,752 ಸಕ್ರಿಯ ಪ್ರಕರಣಗಳಿವೆ. ಬುಧವಾರ ಪಿಯುಸಿಯ 166 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದ್ದು, 892 ಸಕ್ರಿಯ ಪ್ರಕರಣಗಳಿವೆ.

48 ಸಾವಿರ ಶಾಲೆಗಳ ಪೈಕಿ ಇದುವರೆಗೂ 146 ಶಾಲೆಗಳು ಕ್ಲೋಸ್ ಆಗಿವೆ. ಹಾವೇರಿ, ಗುಲಬರ್ಗಾ, ರಾಯಚೂರು, ಬೀದರ್, ಮಧುಗಿರಿ ಜಿಲ್ಲೆಗಳಲ್ಲಿ ಒಂದೇ ಒಂದು ಶಾಲೆ ಕ್ಲೋಸ್ ಆಗಿಲ್ಲ ಎಂದು ತಿಳಿಸಿದರು.