ಮನೆ ಅಪರಾಧ ಮದುವೆಯಾಗಿ ಮಕ್ಕಳಿದ್ದ ಪ್ರಿಯತಮೆಯೊಂದಿಗೆ ಸಂಬಂಧ: ಯುವಕನಿಗೆ ಧರ್ಮದೇಟು

ಮದುವೆಯಾಗಿ ಮಕ್ಕಳಿದ್ದ ಪ್ರಿಯತಮೆಯೊಂದಿಗೆ ಸಂಬಂಧ: ಯುವಕನಿಗೆ ಧರ್ಮದೇಟು

0

ಮೈಸೂರು: ಮದುವೆಯಾಗಿ ಎರಡು ಮಕ್ಕಳ ತಾಯಿ ಆಗಿರುವ ಪ್ರಿಯತಮೆಯೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದ ಯುವಕನಿಗೆ ಗ್ರಾಮಸ್ಥರು ಧರ್ಮದೇಟು ನೀಡಿರುವ ಘಟನೆ ನಂಜನಗೂಡು ತಾಲೂಕಿನ ಹಳ್ಳಿದಿಡ್ಡಿ ಗ್ರಾಮದಲ್ಲಿ ನಡೆದಿದೆ.

ಗೊಂತ್ತಗಾಲ ಗ್ರಾಮದ ಯುವಕ ಮಹೇಶ್ ಕುಮಾರ್ ಹಲ್ಲೆಗೆ ಒಳಗಾದವನಾಗಿದ್ದು, ತೀವ್ರ ಗಾಯಗೊಂಡ ಯುವಕನನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿವರ:  ಪಿಯುಸಿ ಓದುತ್ತಿದ್ದ ವೇಳೆ ಮಹೇಶ್ ಕುಮಾರ್ ಗೆ ಗ್ರಾಮದ ಯುವತಿಯೊಬ್ಬಳ ಜೊತೆ ಪ್ರೀತಿ ಹುಟ್ಟಿದೆ. ಇಬ್ಬರೂ ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ಈ ವಿಚಾರ ಯುವತಿಯ ಮನೆಗೆ ತಿಳಿದಿದ್ದು, ಕೂಡಲೇ ಹಳ್ಳಿದಿಡ್ಡಿ ಗ್ರಾಮದ  ಯುವಕನೊಂದಿಗೆ ಯುವತಿಯನ್ನು ಮದುವೆ ಮಾಡಿಕೊಟ್ಟಿದ್ದಾರೆ. ಈ ಮಧ್ಯೆ ಎರಡು ಮಕ್ಕಳ ತಾಯಿ ಆಗಿದ್ದರೂ ಪ್ರಿಯಕರನ ಜೊತೆ ಸಂಪರ್ಕ ಬೆಳೆಸಿದ್ದಾಳೆ. ಆಗಾಗ ಮನೆಗೆ ಬಂದು ಹೋಗುತ್ತಿದ್ದ ಎಂದೂ ಹೇಳಲಾಗಿದೆ. ಈ ವಿಚಾರ ಪತಿಗೆ ತಿಳಿದಿದೆ. ಪ್ರಿಯಕರನಿಗೆ ಬುದ್ದಿ ಕಲಿಸಬೇಕೆಂದು ನಿರ್ಧರಿಸಿದ ಗ್ರಾಮಸ್ಥರು ಪ್ರಿಯತಮೆಯಿಂದಲೇ ಯುವಕನನ್ನು ಹಳ್ಳಿದಿಡ್ಡಿ ಗ್ರಾಮಕ್ಕೆ ಕರೆಸಿಕೊಂಡಿದ್ದಾರೆ.

ಗ್ರಾಮಕ್ಕೆ ಬಂದ ಯುವಕನಿಗೆ ಗ್ರಾಮಸ್ಥರು ಧರ್ಮದೇಟು ನೀಡಿದ್ದು, ತೀವ್ರವಾಗಿ ಗಾಯಗೊಂಡ ಪ್ರಿಯಕರ ಇದೀಗ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇದುವರೆಗೆ ಯಾವುದೇ ಪ್ರಕರಣವೂ ದಾಖಲಾಗಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ.

ಹಿಂದಿನ ಲೇಖನಕೊರೊನಾ ಹೆಚ್ಚಳ: ಗಾಯಿತ್ರಿ ಥಿಯೇಟರ್ ತಾತ್ಕಾಲಿಕ ಸ್ಥಗಿತ
ಮುಂದಿನ ಲೇಖನತಾಂತ್ರಿಕ ಸಭೆ ಅನುಮತಿ ನೀಡಿದರೆ ಶಾಲೆ ಆರಂಭ: ಸಚಿವ ಬಿ.ಸಿ.ನಾಗೇಶ್