ಮನೆ ರಾಜಕೀಯ ನನ್ನ ಸರ್ಕಾರದಲ್ಲಿ ಹಗರಣ ನಡೆದಿದ್ದರೆ ದಾಖಲೆ ಬಿಡುಗಡೆ ಮಾಡಿ: ಎಚ್​ಡಿಕೆ

ನನ್ನ ಸರ್ಕಾರದಲ್ಲಿ ಹಗರಣ ನಡೆದಿದ್ದರೆ ದಾಖಲೆ ಬಿಡುಗಡೆ ಮಾಡಿ: ಎಚ್​ಡಿಕೆ

0

ಬೆಂಗಳೂರು(Bengaluru): ಬಿಜೆಪಿ ಮತ್ತು ಕಾಂಗ್ರೆಸ್​ ಜೊತೆ ಆಡಳಿತ ನಡೆಸಿದಾಗ ನಾನು ಯಾವುದೇ ಭ್ರಷ್ಟಚಾರ ನಡೆಸಿದ್ದಲ್ಲಿ ನನ್ನ ಆಡಳಿತದಲ್ಲಿ ಅಂತಹ ಭ್ರಷ್ಟಚಾರ ನಡೆದಿದ್ದರೆ ದಾಖಲೆ ಸಮೇತ ಬಿಡುಗಡೆ ಮಾಡಿ ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಸಚಿವ ಅಶ್ವತ್ಥ್​ ನಾರಾಯಣ್​ಗೆ ಸವಾಲು ಹಾಕಿದ್ದಾರೆ.

ಕುಮಾರಸ್ವಾಮಿ ಅವರ ಸರ್ಕಾರದಲ್ಲೂ ಹಗರಣಗಳಾಗಿವೆ. ಮುಂದಿನ ದಿನಗಳಲ್ಲಿ ಅವು ಹೊರಬರುತ್ತವೆ ಎಂಬ ಸಚಿವ ಅಶ್ವತ್ಥ್​ ನಾರಾಯಣ್​ ಹೇಳಿಕೆಗೆ ತಿರುಗೇಟು ನೀಡಿ ಮಾತನಾಡಿದ ಅವರು, ನನ್ನ ಆಡಳಿತದಲ್ಲಿ ಒಂದು ಹಗರಣಗಳಿದ್ರೆ, ಕಾನೂನು ಬಾಹಿರ ಚಟುವಟಿಕೆ ಮಾಡಿದ್ರೆ ತೋರಿಸಲಿ ಎಂದರು.

ನಮ್ಮ ಆಡಳಿತದಲ್ಲಿದ್ದಾಗ ಇವರ ರೀತಿ 40 ಪರ್ಸೆಂಟ್​ ಲೂಟಿ ಮಾಡಬೇಕು. ನಿಮ್ಮ ರೀತಿ ದೇಶ ಲೂಟಿ ಮಾಡಬೇಕಿತ್ತಾ. ಅಸಿಸ್ಟಂಟ್​ ಪ್ರೋಫೆಸರ್​​ಗಳ ನೇಮಕವನ್ನು ನಿಮ್ಮ ಇಲಾಖೆಯಲ್ಲಿ ಯಾವ ಮಾನದಂಡದಲ್ಲಿ ಆಯ್ಕೆ ಮಾಡಲಾಗಿದೆ. 400 ಕೋಟಿ ಭ್ರಷ್ಟಚಾರ ಮಾಡಿದ್ದಾರೆ. ನಿಮ್ಮಂತಹವರಿಂದ ನಾನು ರಾಜಕೀಯ ಕಲಿಯಬೇಕಿಲ್ಲ. ಸುಳ್ಳು ಆರೋಪ ಮಾಡುವ ಮುನ್ನ ಎಚ್ಚರವಿರಲಿ. ನನ್ನ ಬಳಿ ಎಲ್ಲ ಮಾಹಿತಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನ್ನ ವಿರುದ್ಧ ಏನೇ ದಾಖಲೆ ಇದ್ದರೂ ಬಿಡುಗಡೆ ಮಾಡಲಿ. ನಿಮಗೆ ತಾಕತ್​ ಇದ್​ದರೆ ನಾಳೆ ಬೆಳಗ್ಗೆಯೇ ದಾಖಲೆ ಬಿಡುಗಡೆ ಮಾಡಿ. ನನ್ನ ಬಳಿ ಇರುವ ದಾಖಲಾತಿ ನಿಮ್ಮ ಬಳಿ ಇಲ್ಲ. ಮಾತನಾಡುವ ಮುನ್ನ ಎಚ್ಚರಿಕಯಿಂದ ಮಾತಾಡಿ ಎಂದು ಎಚ್ಚರಿಕೆ ನೀಡಿದರು.

ಹಿಂದಿನ ಲೇಖನಪಿಎಸ್ಐ ಅಕ್ರಮ: ಕಾಂಗ್ರೆಸ್ ಉಚ್ಛಾಟಿತ ಶರತ್ ರಾಮಣ್ಣ ಬಂಧನ
ಮುಂದಿನ ಲೇಖನಸಚಿವ ಸಂಪುಟ ಪುನರ್ ರಚನೆ ಬಗ್ಗೆ ಎರಡು ಮೂರು ದಿನಗಳಲ್ಲಿ ನಿರ್ಧಾರ: ಸಿಎಂ ಬೊಮ್ಮಾಯಿ