ಮನೆ ಯೋಗಾಸನ ನೆನಪಿನ ಶಕ್ತಿಯ ಸಮಸ್ಯೆ ಇದ್ದರೆ, ನಿತ್ಯ ಈ ಯೋಗಾಸನಗಳನ್ನು ಮಾಡಿ

ನೆನಪಿನ ಶಕ್ತಿಯ ಸಮಸ್ಯೆ ಇದ್ದರೆ, ನಿತ್ಯ ಈ ಯೋಗಾಸನಗಳನ್ನು ಮಾಡಿ

0

ಮನುಷ್ಯನಿಗೆ ವಯಸ್ಸಾಗುತ್ತಾ ಹೋದಂತೆ ಕೆಲವರಲ್ಲಿ ನೆನಪಿನ ಶಕ್ತಿಯು ಕಡಿಮೆ ಆಗುತ್ತಾ ಹೋಗುವುದು. ಕೆಲವರಿಗೆ ಈಗ ಮಾತನಾಡಿದ್ದು ಮರುಕ್ಷಣದಲ್ಲಿ ನೆನಪಿರಲ್ಲ. ಇಂತಹ ಕಾಯಿಲೆಯನ್ನು ಆಲ್ಝೈಮರ್ ಎಂದು ಕರೆಯುವರು. ಇಂತಹ ಸಮಸ್ಯೆ ಇರುವಂತಹ ಮೂರನೇ ಒಂದರಷ್ಟು ಜನರಲ್ಲಿ ವ್ಯಕ್ತಿತ್ವ ಬದಲಾವಣೆ, ಸಿಡುಕುತನ, ಒತ್ತಡ ಮತ್ತು ಆತಂಕ ಕಾಡುವುದು. ಇಂತಹ ಪರಿಸ್ಥಿತಿ ಬಂದ ವೇಳೆ ಸ್ನೇಹಿತರ ಹಾಗೂ ಕುಟುಂಬ ಸದಸ್ಯರ ಜತೆಗಿನ ಸಂಬಂಧವು ಒತ್ತಡಕ್ಕೆ ಒಳಗಾಗುವುದು.

ಆಲ್ಝೈಮರ್ ಕಾಯಿಲೆ

ಆಲ್ಝೈಮರ್ ಮಧ್ಯ ಅಥವಾ ಕೊನೆಯ ಹಂತದಲ್ಲಿದ್ದರೆ ಆಗ ಅವರಿಗೆ ಕೆಲವೊಂದು ಭ್ರಮೆಗಳು ಕಾಡಬಹುದು. ಯಾರೋ ಅಟ್ಟಿಸಿಕೊಂಡು ಬಂದಂತೆ ಮತ್ತು ತಮ್ಮ ಸಾಮಾನುಗಳನ್ನು ಕದ್ದಂತೆ ಆಗಬಹುದು. ಇಂತಹ ಸಮಯದಲ್ಲಿ ವ್ಯಕ್ತಿಯು ತುಂಬಾ ಆಕ್ರಮಣಕಾರಿ ಆಗಬಹುದು ಮತ್ತು ಏಕಾಂಗಿಯಾಗಿ ಬಿಟ್ಟರೆ ಆಗ ಮನೆಯಿಂದ ದೂರ ಹೋಗಬಹುದು.

ಆಲ್ಝೈಮರ್ ತಡೆಯಲು ಯೋಗ ಮಾಡಿ

ಯೋಗವು ಪ್ರತಿಯೊಬ್ಬರ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಯೋಗ ಮಾಡಿದರೆ ಅದರಿಂದ ನೆನಪಿನ ಶಕ್ತಿಯನ್ನು ಕೂಡ ವೃದ್ಧಿಸಬಹುದಾಗಿದೆ.

ಪ್ರಾಣಾಯಾಮ ಮತ್ತು ಧ್ಯಾನ

• ಪ್ರಾಣಾಯಾಮವು ಮೆದುಳಿಗೆ ತುಂಬಾ ಒಳ್ಳೆಯ ವ್ಯಾಯಾಮ ಮತ್ತು ಇದು ದೇಹವನ್ನು ಆರೋಗ್ಯವಾಗಿ ಇಡುತ್ತದೆ. ನೆಲದ ಮೇಲೆ ಯೋಗ ಮ್ಯಾಟ್ ಹಾಕಿಕೊಂಡು ಹಾಗೆ ಸುಖಾಸನದಲ್ಲಿ ಕುಳಿತುಕೊಳ್ಳಿ.

• ಪ್ರತೀ ದಿನ ಬೆಳಗ್ಗೆ ಹೀಗೆ ಮಾಡಬೇಕು. ಸುಖಾಸನದಲ್ಲಿ ಕುಳಿತುಕೊಂಡು ಅನುಲೋಮ-ವಿಲೋಮ ಮಾಡಿ ಮತ್ತು ಇದರ ಬಳಿಕ ಹತ್ತು ನಿಮಿಷ ಕಾಲ ಧಾನ್ಯ ಮಾಡಿ.

ಚಕ್ರಾಸನ

• ಚಕ್ರಾಸನವು ಮೆದುಳಿನ ಕೋಶಗಳಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸುವಂತೆ ಮಾಡುವುದು. ಮೆದುಳಿನ ಪಿಟ್ಯುಟರಿ ಗ್ರಂಥಿಯಿಂದ ಬಿಡುಗಡೆ ಆಗುವಂತಹ ಹಾರ್ಮೋನ್ ರಕ್ತವು ಸುಪ್ತ ಕೋಶಗಳತ್ತ ತಲುಪುತ್ತಿದ್ದಂತೆ ಮೆದುಳಿನ ಕ್ರಿಯಾಶೀಲತೆಯು ಹೆಚ್ಚಾಗುವುದು.

• ಇದನ್ನು ನಿಯಮಿತವಾಗಿ ಅಭ್ಯಾಸ ಮಾಡಿದರೆ ಅದರಿಂದ ಕಣ್ಣು, ಮೆದುಳು ಇತ್ಯಾದಿಗಳಿಗೆ ಲಾಭವಿದೆ.

ಉಸ್ತ್ರಾಸನ

• ಬೆನ್ನ ಹುರಿ ಮೂಲಕ ಹಾದು ಹೋಗುವಂತಹ ಬೆನ್ನಹುರಿಯ ಅಂಗಾಂಶಗಳಲ್ಲಿ ಉಸ್ತ್ರಾಸನವು ಒತ್ತಡ ಹಾಕುವುದು ಮತ್ತು ಇದರಿಂದ ರಕ್ತದ ಸಂಚಾರವು ಹೆಚ್ಚಾಗುವುದು.

• ಪ್ರತಿನಿತ್ಯವೂ ನೀವು ಮೂರು ಸಲ ಈ ಆಸನ ಮಾಡಿದರೆ ಅದರಿಂದ ಒಳ್ಳೆಯ ಲಾಭವಾಗಲಿದೆ.

ತ್ರಕಾ

• ಯಾವುದೇ ಒಂದು ಬಿಂದುವಿನ ಮೇಲೆ ದೃಷ್ಟಿಯನ್ನಿಟ್ಟು ಕಣ್ಣ ರೆಪ್ಪೆಗಳನ್ನು ಅಲುಗಾಡಿಸದೆ ನೋಡುವುದೇ ತ್ರಕಾ. ಇದರಿಂದ ಮೆದುಳಿನ ಸುಪ್ತ ಕೋಶಗಳು ಜಾಗೃತವಾಗುವುದು ಮತ್ತು ನೆನಪು ಹೆಚ್ಚಾಗುವುದು.

• ನೆನಪು ನೇರವಾಗಿ ಮೆದುಳು ಮತ್ತು ಏಕಾಗ್ರತೆಗೆ ಸಂಬಂಧಿಸಿದ್ದಾಗಿದೆ. ಮನಸ್ಸಿನ ಏಕಾಗ್ರತೆ ಮತ್ತು ನೆನಪಿನ ಶಕ್ತಿಯು ಮೆದುಳಿನ ಗಮನದಲ್ಲಿರುವುದು. ತ್ರಕಾ ಅಭ್ಯಾಸ ಮಾಡಿದರೆ ಅದು ತುಂಬಾ ಒಳ್ಳೆಯದು.

ಅಲ್ಝೈಮರ್

• ಅಲ್ಝೈಮರ್ ಸಂದರ್ಭದಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಹೆಚ್ಚು ಕ್ರಿಯಾಶೀಲವಾಗಿ ಇದ್ದರೆ ಆಗ ಇದು ಬೆಳೆಯುವಂತಹ ಸಾಧ್ಯತೆಯು ಕಡಿಮೆ ಆಗುವುದು.

• ನಿಯಮಿತ ವ್ಯಾಯಾಮ ಮತ್ತು ಕೆಲವು ಆಹಾರ ಕ್ರಮವಾದ ಮೀನು, ಆಲಿವ್ ತೈಲ ತರಕಾರಿ ಸೇವನೆ ಹೆಚ್ಚಿಸಿ. ಇದರಿಂದ ಕಾಯಿಲೆಯ ಲಕ್ಷಣಗಳು ಕಡಿಮೆ ಆಗುವುದು ಮತ್ತು ಬೆಳೆಯದಂತೆ ತಡೆಯುವುದು.

ನಿರೀಕ್ಷಿತ ಸಮಯ

ಅಲ್ಝೈಮರ್ ಕಾಯಿಲೆಗೆ ಯಾವುದೇ ಚಿಕಿತ್ಸೆ ಇಲ್ಲ. ಒಂದು ಸಲ ಇದು ಪತ್ತೆ ಆದರೆ ಆಗ ಮಾನಸಿಕ ಕಾರ್ಯವು 3-20 ವರ್ಷ(ಸರಾಸರಿ 10 ವರ್ಷ) ಕುಸಿದಿರುವುದು. ಇದರ ಬಳಿಕ ರೋಗಿ ಸಾವನ್ನಪ್ಪಬಹುದು.

ಚಿಕಿತ್ಸೆ

ಅಲ್ಝೈಮರ್ ಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆದರೆ ಪ್ರತಿರೋಧಕಗಳು, ಕಾಲಜಿನೆಸ್ ಮತ್ತು ಮೆಮಂಟೈನ್ ದೈನಂದಿಕ ಚಟುವಟಿಕೆ ಸುಧಾರಣೆ ಮಾಡಬಹುದು. ಇದರಿಂದ ನಡವಳಿಕೆ ಸಮಸ್ಯೆಗಳು ಕಡಿಮೆ ಆಗಬಹುದು ಮತ್ತು ಆರೋಗ್ಯ ಕೇಂದ್ರಕ್ಕೆ ದಾಖಲಿಸುವುದನ್ನು ತಪ್ಪಿಸುವುದು.