ಸಿರುಗುಪ್ಪ: ನಗರದ ಪೊಲೀಸ್‌ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪಡಿತರ ಅಕ್ಕಿಯನ್ನು ಆಹಾರ ಇಲಾಖೆಯ ನಿರೀಕ್ಷಕರು ನೀಡಿದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ 45 ಚೀಲ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.
ಸೀಮಾಂಧ್ರ ಪ್ರದೇಶದ ಹೊಳಗುಂದಿ ಗ್ರಾಮದ ಕಡೆಯಿಂದ ಸಿರುಗುಪ್ಪ ಪಟ್ಟಣದ ಕಡೆಗೆ ಟಾಟಾ ಕಂಪನಿಯ ಗೂಡ್ಸ್ ವಾಹನದಲ್ಲಿ 13 ಕ್ವಿಂಟಲ್ 50 ಕೆ.ಜಿ.ಯ ರೂ.39150/-ಮೌಲ್ಯದ ಅಕ್ಕಿಯನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳು ನೀಡಿದ ಖಚಿತ ಮಾಹಿತಿ ಮೇರೆಗೆ ನಗರದ ಆದೋನಿ ರಸ್ತೆಯಲ್ಲಿ ಪೊಲೀಸರು ದಾಳಿ ಮಾಡಿ ಅಕ್ಕಿ ಮತ್ತು ಅಕ್ಕಿ ಸಾಗಿಸುತ್ತಿದ್ದ ವಾಹನವನ್ನು ವಶಪಡಿಸಿಕೊಂಡಿದ್ದು, ಈ ಬಗ್ಗೆ ಸಿರುಗುಪ್ಪ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಲಕನನ್ನು ಬಂಧಿಸಲಾಗಿದೆ.