ರಾಮನಗರ: ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ತಾಯಿಯೊಬ್ಬಳು ತನ್ನ ಒಂದೂವರೆ ವರ್ಷದ ಕಂದಮ್ಮನನ್ನು ನದಿಗೆ ಎಸೆದು ಹೋದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಚನ್ನಪಟ್ಟಣ ತಾಲೂಕಿನ ಬಾಣಗಳ್ಳಿ ಗ್ರಾಮದ ಬಳಿ ಘಟನೆ ನಡೆದಿದ್ದು ನದಿಗೆ ಎಸೆಯಲ್ಪಟ್ಟ ಕಂದಮ್ಮ ನೀರಿನಲ್ಲಿ ಉಸಿರುನಿಲ್ಲಿಸಿದೆ.
ಕಾಲಿಕೆರೆ ಗ್ರಾಮದ ಭಾಗ್ಯ ಎಂಬಾಕೆಯೇ ಕೃತ್ಯ ಎಸಗಿರೋ ಮಹಿಳೆ.
ಅಕ್ಕೂರು ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಸಿದ ವೇಳೆ ಅಕ್ರಮ ಸಂಬಂಧ ಬೆಳಕಿಗೆ ಬಂದಿದೆ.
ಚನ್ನಪಟ್ಟಣ ಹಾದು ಹೋಗುವ ಕಣ್ವ ನದಿಗೆ ಮಂಗಳವಾರ ತನ್ನ ಒಂದುವರೆ ವರ್ಷದ ಗಂಡು ಮಗುವನ್ನು ಎಸೆದಿರುವುದಾಗಿ ಮಹಿಳೆ ಹೇಳಿಕೊಂಡಿದ್ದು, ಇಂದು ನದಿಯಲ್ಲಿ ಮಗುವಿನ ದೇಹ ಪತ್ತೆಯಾಗಿದೆ.
ಸ್ಥಳಕ್ಕೆ ಡಿವೈಎಸ್ಪಿ ಗಿರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧ ಅಕ್ಕೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Saval TV on YouTube