ಸೂರ್ಯಕಾಂತ ತ್ರಿಪಾಠಿಯವರು ಹಿಂದಿಯ ಖ್ಯಾತ ಬರಹಗಾರರು.ಅವರು ನಿರಾಲ ಎಂಬ ಶೀರೋನಾಮೆಯಲ್ಲಿ ಬರೆಯುತ್ತಿದ್ದರಿಂದ ಆ ಹೆಸರಿನಲ್ಲೇ ಜನಪ್ರಿಯರಾಗಿದ್ದರು.
ಅವರು ಮಕ್ಕಳೊಂದಿಗೆ ಆಡುವುದನ್ನು ಬಹಳ ಇಷ್ಟ ಪಡುತ್ತಿದ್ದರು. ಒಮ್ಮೆ ಅವರು ಬೀದಿಯಲ್ಲಿ ಮಕ್ಕಳ ಜೊತೆ ಆಟವಾಡುತ್ತಿದ್ದರು. ಕೆಲವರು ಅವರನ್ನು ಭೇಟಿಯಾಗಲೆಂದು ಅವರ ಮನೆಯ ಬಳಿ ಬಂದರು. ಅವರನ್ನು ಈ ಹಿಂದೆ ನೋಡಿರಲಿಲ್ಲ. ”ನಿರಾಲರವೆನ್ನೇ ನಿರಾಲರವರ ಮನೆ ಯಾವುದೆಂದು ಹೇಳುತ್ತೀರಾ? ” ಎಂದು ಕೇಳಿದರು ನಿರಾಲರವರು “ಸ್ವಲ್ಪ ತಡಿಯಿರಿ. ನಾನು ಅವರ ಮನೆ ತೋರಿಸುತ್ತೇನೆ” ಎಂದು ತಮ್ಮ ಆಟವನ್ನು ಮುಂದುವರಿಸಿದರು. ಆಟ ಮುಗಿಸಿದ ನಂತರ ತಾನೇ ನಿರಾಳ ಎಂದು ಹೇಳಿದರು. ಅಚ್ಚರಿಯಿಂದ ಭೇಟಿಗಾರರು “ನೀವೇ ನಿರಾಳ ಎಂದು ಮೊದಲೇಕೆ ಹೇಳಲಿಲ್ಲ?” ಎಂದು ಅವರನ್ನು ಪ್ರಶ್ನಿಸಿದರು
ಆಗ ನಿರಾಲ ಹೀಗೆಂದು ಉತ್ತರಿಸಿದರು:
ಪ್ರಶ್ನೆಗಳು:
1. ನಿರಾಲಾರವರ ಉತ್ತರ ವೇನಾನಾಗಿತ್ತು.?
2. ಈ ಕಥೆಯ ನೀತಿ ಏನು?
ಉತ್ತರಗಳು:
1. “ಆ ಸಮಯದಲ್ಲಿ ನಾನು ಲೇಖಕ ನಿರಾಲ ಆಗಿರಲಿಲ್ಲ ಆಗ ಮಕ್ಕಳ ಜೊತೆ ಆಟವಾಡುವುದನ್ನು ಆನಂದಿಸುತ್ತಿದ್ದ ಹುಡುಗನಾಗಿದ್ದೆ”
2. ಪರಿಸ್ಥಿತಿ ಮತ್ತು ಸಂದರ್ಭಗಳಿಗೆ ತಕ್ಕಂತೆ ನಿಮ್ಮ ವ್ಯಕ್ತಿತ್ವವನ್ನು ಪರಿವರ್ತಿಸಿಕೊಳ್ಳಿ. ಆಟ ಆಡುವಾಗ ಮಗುವಿನಂತಿರಿ, ಮಕ್ಕಳು ಹಿರಿಯರಿಗಿಂತ ಹೆಚ್ಚು ಸೃಜನಶೀಲರಾಗಿರುತ್ತಾರೆ. ವಿನಮ್ರತ್ರೆಯನ್ನು ಬೆಳೆಸಿಕೊಳ್ಳಿ. ಆಗ ನಿಮ್ಮ ಸೃಜನಶೀಲತೆ ಹೆಚ್ಚಾಗುತ್ತದೆ.ಮಕ್ಕಳೊಂದಿಗೆ ಸಾಲೀಸಾಗಿ ನಾವು ಬರೆತಾಗ ಅವರ ಗುಣವನ್ನು ಮೈಗೂಡಿಸಿಕೊಳ್ಳುತ್ತೇವೆ. ಸರಳತೆ ಹಾಗೂ ವಿನಮ್ರತೆಯಲ್ಲಿ ಮಹಾನತೆಯಿಂದೆ. ನಿರಾಲ ಮಕ್ಕಳ ಜೊತೆ ತಲ್ಲಿನ ರಾಗಿದ್ದರು. ಆಟದಲ್ಲಿ ತೊಡಗಿ ಸಂತೋಷವಾಗಿ ತಮ್ಮನ್ನೇ ಮರೆತಿದ್ದರು.ಇದು ಮಹಾ ಧ್ಯಾನ ತಂತ್ರ ಧ್ಯಾನವು ನೀವೇನು ಮಾಡುತ್ತಿದ್ದೀರೋ ಅದರಲ್ಲಿ ಮುಳುಗಿ ಹೋಗುವ ಸರಳ ಪ್ರತಿಕ್ರಿಯೆ.