ಮನೆ ಯೋಗ ಮುದ್ರೆಗಳ ಮಹತ್ವ

ಮುದ್ರೆಗಳ ಮಹತ್ವ

0

      ಹೆಬ್ಬೆಟ್ಟು ಮತ್ತು ಇತರ ಬೆರಳುಗಳ ಸಂಯೋಜನೆಯೇ ಮುದ್ರೆಗಳೆನಿಸುತ್ತವೆ. ಇವುಗಳನ್ನು ಹಸ್ತ ಮುದ್ರೆಗಳೆನ್ನುತ್ತಾರೆ. ಮುದ್ರೆಗಳು ಚಿಕಿತ್ಸೆ ಮಾತ್ರವಲ್ಲ, ರೋಗ ಪ್ರತೀಕಾರಕ ಶಕ್ತಿಯನ್ನು ಬೆಳೆಸುತ್ತದೆ. ವಿಟಾಮಿನ್ ಗಳನ್ನು ಪೂರೈಸುತ್ತದೆ. ಈ ಮುದ್ರೆ ವಿಜ್ಞಾನದ ಔಷಧಿರಹಿತವಾದ ಚಿಕಿತ್ಸೆ ಈ ಮುದ್ರೆಯನ್ನು ಯಾರು, ಎಲ್ಲಿ ಬೇಕಾದರೂ ಮಾಡಬಹುದು. ಈ ಮುದ್ರೆಗಳು ಎಲ್ಲ ಪ್ರಕಾರದ ವ್ಯಾಧಿಗಳನ್ನು ಗುಣ ಪಡಿಸಬಹುದು.

Join Our Whatsapp Group

 ಶರೀರದಲ್ಲಿ ಪಂಚತತ್ವಗಳ ಕಾರ್ಯ

ಆಕಾಶ – ಆಕಾಶ ತತ್ವವು ಶರೀರದ ಅಂಗಾಂಗಗಳ ಮಧ್ಯದಲ್ಲಿ ಎಲ್ಲೆಲ್ಲೂ ವ್ಯಾಪಿಸಿದೆ. ಗಂಟಲು, ಹುಬ್ಬುಗಳ ಮಧ್ಯೆ, ಕಿವಿ, ಕಣ್ಣು, ಬಾಯಿ, ಹೊಟ್ಟೆ, ಎದೆಗೂಡುಗಳಲ್ಲಿ ಆಕಾಶತತ್ವವಿದೆ.

 ವಾಯು – ವಾಯು, ಚಲನೆಗೆ ಕಾರಣವಾದ ತತ್ವವಾಗಿದೆ. ಶಾರೀರಿಕ ಚಲನೆ, ಶರೀರದೊಳಗಿನ ಚಲನೆ, ರಕ್ತರಸಗಳ ಚಲನೆ, ಮನಸ್ಸಿನ ವಿಚಾರಗಳ ಚಲನೆ… ಇತ್ಯಾದಿ ವಾಯು ನಮ್ಮ ವಿಚಾರಗಳಿಗೆ ಕಾರಣಭೂತವಾಗಿದೆ. ಪಂಚಜ್ಞಾನೇಂದ್ರಿಯ, ಪಂಚಕರ್ಮೇಂದ್ರಿಯಗಳ ಕಾರ್ಯಕ್ಕೆ ಕಾರಣವಾಗಿದೆ. ವಾಯು ಸ್ಪರ್ಶಜ್ಞಾನ ಉಂಟು ಮಾಡುತ್ತದೆ. ಆದ್ದರಿಂದ ತ್ವಚ್ಚೆಯ ತೊಂದರೆಗಳಲ್ಲಿ ಪಾರ್ಶ್ವವಾಯು, ಕಂಪವಾತಗಳಲ್ಲಿ ವಾಯುತತ್ವವನ್ನು ಸರಿಪಡಿಸಿ, ಈ ವ್ಯಾಧಿಯನ್ನು ನಿವಾರಿಸಬಹದು

 ಅಗ್ನಿ – ಅಗ್ನಿಯು ಶರೀರದ ಉಷ್ಣತಾಮಾನ ಕಾಯಲು, ಪಚನಕ್ರಿಯೆ ನಡೆಸಲು, ಬಾಯಾರಿಕೆ, ಹಸಿವು ಶರೀರದ ಪುಷ್ಟಿಗೋಸ್ಕರ ದೃಷ್ಟಿ ಚೆನ್ನಾಗಿಡಲು, ಮುಖ್ಯ ಪಾತ್ರ ವಹಿಸುತ್ತದೆ. ಅಂತೆಯೇ ಹಸಿವಾಗದಿದ್ದರೆ, ಅಪಚನವಾದರೆ ಅನಾವಶ್ಯಕ ಬೊಜ್ಜು ಬೆಳೆದಿದ್ದರೆ ಅಗ್ನಿತತ್ವವನ್ನು ಹೆಚ್ಚು ಕಡಿಮೆ ಹರಿಪಡಿಸಿ ತೊಂದರೆ ಶಮನ ಮಾಡಬಹುದು.

 ಜಲ – ರಕ್ತ, ಕಣ್ಣೀರು, ಲಾಲಾರಸ, ಪಾಚಕ ರಸಗಳು, ಬೆವರು, ಮೂತ್ರ, ಶುಕ್ರಾಣು ಇವುಗಳ ರಚನೆಯಲ್ಲಿ ನೀರು ಮುಖ್ಯಪಾತ್ರ ವಹಿಸುತ್ತದೆ. ನಾಲಿಗೆಯ ನೀರಿನ ಪರಿಜ್ಞಾನ ನೀರಿನಿಂದ ಉಂಟಾಗುತ್ತದೆ. ನೀರಿನ ಅಭಾವದಲ್ಲಿ ನಾಲಿಗೆ ರುಚಿ ತಿಳಿಸದು. ನೀರಿನ ಕೊರತೆಯಿಂದ ಆಗುವ ಚರ್ಮ ರೋಗಗಳು, ಮೂರ್ಛ, ಬಾವುಗಳನ್ನು ನೀರಿನ ತತ್ವ ಹೆಚ್ಚು ಕಡಿಮೆ ಮಾಡಿ, ಸರಿಪಡಿಸಬಹುದು.

 ಪೃಥ್ವಿ – ಭೂತತ್ವದಿಂದ ಶರೀರದ ಮಾಂಸ, ಸ್ನಾಯು, ಚರ್ಮ, ಕೂದಲು, ಉಗುರು, ಎಲಬುಗಳ ಮಧ್ಯದ ಮಜ್ಜೆಯ ರಚನೆ ಆಗುತ್ತದೆ. ಪೃಥ್ವಿ- ಗಂಧಕ್ಕೆ ಸಂಬಂಧಿಸಿದ ತತ್ವ ಆದುದರಿಂದ ಮೂಗಿನ ಕಾರ್ಯವೂ ಪೃಥ್ವಿ ಸಂತುಲನದಿಂದ ಸುಗಮವಾಗಿರುತ್ತದೆ. ಅತಿ ಕೃಶವಾಗಿ, ಧಣಿವಾದಾಗ, ನಿರೋಧಕಶಕ್ತಿ ಕುಂದಿದಾಗ, ಪೃಥ್ವಿ ತತ್ವವನ್ನು ಸರಿಪಡಿಸಬಹುದು.

 ಕಿವಿ – ಶಬ್ದ (ಆಕಾಶ), ತಚ್ಚೆ – ಸ್ಪರ್ಶ (ವಾಯು), ಕಣ್ಣು – ರೂಪ, (ಅಗ್ನಿ) ನಾಲಿಗೆ ರಸ (ಜಲ) ಮೂಗು – ಗಂಧ (ಪೃಥ್ವಿತತ್ವ).

 ಹೆಬ್ಬೆರಳು – ಅಗ್ನಿತತ್ವ ತೋರು ಬೆರಳು ವಾಯುತತ್ವ ಮಧ್ಯದ ಬೆರಳು – ಆಕಾಶತತ್ವ

ಉಂಗುರ ಬೆರಳು – ಪೃಥ್ವಿತತ್ವ, ಕಿರುಬೆರಳು – ಜಲತತ್ವ

★* ಅಗ್ನಿದ್ ಭೂತಾನಾಂ ಅಧಿಪತಿಃ – ಅರ್ಥಾತ್, ಪಂಚಮಹಾಭೂತಗಳಲ್ಲಿ ಅಗ್ನಿಯೇ ಅಧಿಪತಿ, ಕಾರಣ ಅಗ್ನಿಯು ಇತರ ನಾಲ್ಕು ಭೂತಗಳನ್ನು ಸಮತೋಲನದಲ್ಲಿಡಲು ಸಹಕಾರಿಸುತ್ತದೆ.

★* ಹೆಬ್ಬೆಟ್ಟನ್ನು ಅಗ್ನಿಯೆಂದಿದೆ. ಶರೀರದಲ್ಲಿ ಅಗ್ನಿ ಹೇಗೆ ಮುಖ್ಯವೋ ಹಾಗೆ ಹಸ್ತದಲ್ಲಿ ಹೆಬ್ಬೆಟ್ಟು ಮುಖ್ಯ. ಅಗ್ನಿಯಂತೆ ಹಸ್ತದಲ್ಲಿ ಹೆಬ್ಬೆಟ್ಟು ಎಲ್ಲಾ ಬೆರಳುಗಳ ಜೊತೆ ಸೇರಿ ಕಾರ್ಯಗಳನ್ನು ಸಮರ್ಥವಾಗಿ ನಿರ್ವಹಿಸುತ್ತದೆ.

★* ಹೆಬ್ಬೆಟ್ಟಿನೊಂದಿಗೆ ಇತರ ಬೆರಳುಗಳ ಅಗ್ರಭಾಗ ಜೊಡಿಸಿದಾಗ, ಆಯಾ ತತ್ವವು ಸಮತೋಲನದಲ್ಲಿರುತ್ತದೆ.

★* ಹೆಬ್ಬೆರಳಿನ ಬುಡದ ರೇಖೆಯ ಕೆಳಗೆ ಇತರ ಬೆರಳುಗಳ ಅಗ್ರಭಾಗ ಜೋಡಿಸಿದಾಗ ಆಯಾ ತತ್ವ ಕಡಿಮೆಯಾಗುತ್ತದೆ.

★* ಹೆಬ್ಬೆರಳಿನ ಅಗ್ರಭಾಗವನ್ನು ಇತರ ಬೆರಳುಗಳ ಬುಡದ ರೇಖೆಯ ಬಳಿ ಸೋಕಿಸಿದಾಗ ಆಯಾ ತತ್ವವು ಹೆಚ್ಚುತ್ತದೆ.

★* ಮುದ್ರೆ ಮಾಡುವಾಗ ಮಂಡಿಯ ಮೇಲೆ ಕೈಗಳನ್ನು ಮೇಲ್ಮುಖವಾಗಿಡಬೇಕು.

★* ಬಲಪಾರ್ಶ್ವದಲ್ಲಿ ನೊವಿದ್ದಾಗ ಎಡಗೈಯಿಂದ, ಎಡಪಾರ್ಶ್ವದಲ್ಲಿ ನೋವಿದ್ದಾಗ ಬಲಗೈಯಿಂದ ಮುದ್ರೆ ಮಾಡಬೇಕು.

★* ಔಷಧಿ ಸೇವನೆ ಇದ್ದಾಗಲೂ ಸಹ ಮುದ್ರೆಗಳನ್ನು ಮಾಡಬಹುದು. ಆರೋಗ್ಯ ಶೀಘ್ರದಲ್ಲಿ ಧಾರಣೆಯಾಗುತ್ತದೆ.

 1. ಸುರಭಿ ಮುದ್ರೆ

ಎರಡೂ ಕೈಗಳನ್ನು ಜೋಡಿಸಿ ನಮಸ್ತೆ ಮಾಡುವಂತೆ ಸೇರಿಸಬೇಕು.

ಅನಂತರ ಹೆಬ್ಬೆರಳನ್ನು ದೂರ ಇಡಬೇಕು. ಅನಂತರ ಪರಸ್ಪರ ವಿರುದ್ಧ ಕೈಗಳ ಬೆರಳು ಸ್ಪರ್ಶಿಸಿ,

ಒಂದರ ತೋರುಬೆರಳು. ಇನ್ನೊಂದರ ಮಧ್ಯದ ಬೆರಳಿನ ತುದಿಯನ್ನು ಸ್ಪರ್ಶಿಸಬೇಕು. ಒಂದರ ಕಿರುಬೆರಳು ಮತ್ತು ಮತ್ತೊಂದರ ಉಂಗುರ ಬೆರಳುಗಳ ತುದಿಯನ್ನು ತಾಗಿಸಿ, 1. ಹೆಬ್ಬೆರಳುಗಳು ಒಂದಕ್ಕೊಂದು ತಾಗಿಸಬಾರದು. ಇದು ದನದ ಕೆಚ್ಚಲಿನಂತೆ ಇರುವುದರಿಂದ ಸುರಭಿ ಮುದ್ರೆ ಎಂದು ಕರೆಯಲಾಗಿದೆ. ಈ ಸುರಭಿ ಮುದ್ರೆಯಿಂದ ಅದ್ಭುತ ಪರಿಣಾಮ, ಶರೀರದ ಮೂರು ವಿಕಾರಗಳಾದ ವಾತ ಪಿತ್ತ ಕಫಗಳನ್ನು ನಿಯಂತ್ರಿಸುತ್ತದೆ, ಅಸಿಡಿಟಿ (ಗ್ಯಾಸ್ಟಿಕ್) ದೂರವಾಗಿ, ದೇಹದ ಜಡತೆಯನ್ನು ಶಮನಗೊಳಿಸುತ್ತದೆ. ಪ್ರತಿದಿನ 10 ನಿಮಿಷವಾದರೂ ಮಾಡಬೇಕು. (ಚಿತ್ರ ನೋಡಿ)

 ಜಲಸುರಭಿ – ದೇಹದ ಉರಿದೂರಗೊಳಿಸಲು ಸುರಭಿ ಮುದ್ರೆಯಲ್ಲೇ ಆಯಾ ಕೈಯ ಹೆಬ್ಬೆಟ್ಟುಗಳನ್ನು ಕಿರಿ ಬೆರಳು ಬುಡಕ್ಕೆ ಸ್ಪರ್ಶಿಸಬೇಕು. ಆಗ ದೇಹಕ್ಕೆ ತಂಪುಂಟಾಗುತ್ತದೆ.

 2. ಚಕ್ರ ಮುದ್ರೆ

      ಚಕ್ರಮುದ್ರೆಯನ್ನು ಪೂಜಾವೇಳೆಯಲ್ಲಿ ಮಾಡಿ ಯಾವುದೇ ಅಡಚಣೆ ಬಾರದೆ ಕಾರ್ಯಸಿದ್ದಿಯಾಗಬೇಕೆಂದು ಕೋರುತ್ತಾರೆ. ಎಡ ಅಂಗೈ ಮೇಲೆ ಬಲಲಿಂಗೈ ಇಟ್ಟು ಬಲಗೈ ತೋರು ಬೆರಳನ್ನು ಎಡಗೈಯ ಹೆಬ್ಬೆರಳಿನ ಮೇಲೆ ಇರಿಸಬೇಕು ಮತ್ತು ಬಲಗೈ ಕಿರಿಬೆರಳನ್ನು ಕೆಳಗಿರುವ ಎಡಗೈಯ ತೋರು ಬೆರಳಿಗೆ ಸ್ಪರ್ಶಿಸಬೇಕು. ಬಲಗೈ ಹೆಬ್ಬೆರಳನ್ನು ಮಣಿಗಂಟಿನ ಮೇಲೆ ಇರಿಸಬೇಕು. ಅಂಗೈಗಳಿಂದ ಒಂದಕ್ಕೊಂದು ಒತ್ತು ನೀಡಬೇಕು. ಇದನ್ನು ಚಕ್ರಮುದ್ರೆ ಎನ್ನುತ್ತಾರೆ (ಚಿತ್ರನೋಡಿ.)

ಪರಿಣಾಮ – ಬಲಗೈಯ ವಾಯುತತ್ವದ ಬೆರಳನ್ನು ಎಡಗೈ ಹೆಬ್ಬೆರಳಿಗೆ ಜೋಡಿಸಿದಾಗ ಮತ್ತು ಬಲಗೈ ಜಲತತ್ವದ ಕಿರುಬೆರಳನ್ನು ಎಡಗೈಯ ತೋರು ಬೆರಳಿಗೆ ಜೋಡಿಸಿದಾಗ ಅಗ್ನಿ, ವಾಯು, ಜಲಗಳು ಪ್ರಚಂಡ ಶಕ್ತಿ ತರಂಗಗಳನ್ನು ಉಂಟು ಮಾಡುತ್ತವೆ. ಅಂಗೈ ಗಳನ್ನು ಒತ್ತುವುದರಿಂದ ಶರೀರದ ಎಲ್ಲಾ ಭಾಗಗಳ ಕೇಂದ್ರಗಳು ಉದ್ದೀಪನಗೊಳ್ಳುತ್ತದೆ. ಪ್ಯಾಂಕ್ರಿಯಾಸ್, ಶ್ವಾಸಕೋಶ, ಹೃದಯ, ಥೈರಾಡ್ ಮತ್ತು ಮೂತ್ರಕೋಶ ಎಲ್ಲವೂ ಸಮರ್ಥವಾಗಿ ಕಾರ್ಯನಿರ್ವಹಿಸು ತ್ತವೆ. ದಿನದಲ್ಲಿ ಈ ಮುದ್ರೆಯನ್ನು 5 ನಿಮಿಷ ಮಾಡಿದರೆ ಸಾಕು.