೧) ವಿಷ್ಕಂಭ ಯೋಗದಲ್ಲಿ ಜನಿಸಿದ ಕನೈಯು ಪುತ್ರ-ಪೌತ್ರಾದಿ ಸಂತಾನ ಸೌಭಾಗ್ಯಗಳಿಂದ ಸುಖಿಯಾಗಿರುವಳು. ಈಕೆ ಪತಿವ್ರತೆಯೂ, ಪತಿ ಭಕ್ತಿ ಪಾರಾಯಣಿಯೂ, ತನ್ನ ಗೃಹಸ್ಥ ಜೀವನದಲ್ಲಿ ಯಾರಿಗೂ ಅವಮಾನವಾಗದಂತೆ ನಡೆಯುವಾಕೆಯೂ, ಗೃಹ’ ಕೃತ್ಯದಲ್ಲಿ ಬಲ್ಲಿದರೂ, ಜಾಣ್ಣೆಯುಳ್ಳವಳೂ, ಗುರು ಹಿರಿಯರಲ್ಲಿ ಆದರಾಭಿಮಾನವುಳ್ಳವಳೂ ಆಗಿರುವಳು. ಉದಾರ ಹೃದಯದವಳಾದ ಈಕೆ ಸದಾ ಹಸನ್ಮುಖಿಯಾಗಿರುವಳು. ಧೈರ್ಯವಂತೆ, ಆರೋಗ್ಯವಂತೆಯೂ ಆಗಿರುವಳು.
೨ ) ಪ್ರೀತಿ ಯೋಗದಲ್ಲಿ ಜನಿಸಿದ ಕನೈಯು ರೂಪವತಿಯೂ, ದಾನ-ಧರ್ಮಾದಿ ಕಾರ್ಯಗಳಲ್ಲಿ ಅಭಿರುಚಿಯುಳ್ಳವಳೂ ಸದಾ ಪ್ರಸನ್ನಮುಖಿಯೂ, ಜನಪ್ರಿಯಳೂ, ಪತಿಭಕ್ತಿ ಪಾರಾಯಣಳೂ ಆಗಿರುತ್ತಾಳೆ. ಈಕೆ ಸಕಲ ಶಾಸ್ತ್ರಗಳನ್ನೂ ಅರಿತು ನಡೆಯುವಾಕೆಯು ಈ ಕನ್ಯ ಜನಿಸಿದ ಮನೆ, ಕೊಟ್ಟ ಮನೆ ಎರಡೂ ಸಮೃದ್ಧವಾಗಿ ಧನಧಾನ್ಯಗಳಿಂದ ಅಭಿವೃದ್ಧಿ ಹೊಂದುವವು. ಈ ಕನ್ಯೆ ಬಹು ಭಾಗ್ಯವಂತಳೆಂದೇ ತಿಳಿಯಿರಿ.
೩ ) ಆಯುಷ್ಮಾನ್ ಯೋಗದಲ್ಲಿ ಜನಿಸಿದ ಕನೈಯು ದೀರ್ಘಾಯುಷಿಯೂ ರೂಪವತಿಯೂ, ಆರೋಗ್ಯವಂತಳೂ, ಸಾಹಸ- ಧೈರ್ಯದಲ್ಲಿ ಮುಂದುವರೆದಾಕೆಯೂ ಸೃಷ್ಟಿ ಸೌಂದರ್ಯಗಳ ಸ್ಥಳಗಳಲ್ಲಿ ವಾಸಿಸಲು ಇಚ್ಚಿಸುವವಳೂ, ತನ್ನ ನಮ್ಮ ಸ್ವಭಾವದಿಂದ ಎಲ್ಲರನ್ನೂ ಮೆಚ್ಚಿಸಿಕೊಳ್ಳುವಾಕೆಯೂ, ಸಜ್ಜನಳೂ ಆಗುತ್ತಾಳೆ. ಧರ್ಮದೇವತೆ ಶೀಲವತಿಯಾದ ಈ ಕನ್ಯ ಗುರುಹಿರಿಯರನ್ನು ವಿಶೇಷ ಆದರಿಸುವವಳು.
೪) ಸೌಭಾಗ್ಯ ಯೋಗದಲ್ಲಿ ಜನಿಸಿದ ಕನ್ನೆಯು ವಿಶೇಷ ಭಾಗ್ಯವತಿಯೇ ಆಗುವಳು. ಈಕೆ ಬುದ್ದಿಯಲ್ಲಿಯೂ, ವಿದ್ಯೆಯಲ್ಲಿಯೂ ಪರಿಣಿತಳು. ಈಕೆ ಧನ-ಕನಕ-ವಸ್ತ್ರ ಸಂಗ್ರಹಿಸುವಲ್ಲಿ ನಿಷ್ಣಾತಳಾಗುವಳು. ತಿಳಿದು ನಡೆಯುವ ಈಕೆ ವಂಶದ ಕೀರ್ತಿಯನ್ನು ಹೆಚ್ಚಿಸುವವಳು. ಒಳ್ಳೇ ಹೃದಯವಂತೆಯಾದ ಈಕೆ ಸಂತಾನ ಲಕ್ಷ್ಮಿ ಯೂ ಹೌದು.
೫) ಶೋಭನ ಯೋಗದಲ್ಲಿ ಜನಿಸಿದ ಕನೈಯು ವ್ಯವಹಾರ ಕುಶಲೆಯಾಗುತ್ತಾಳೆ. ರೂಪದಲ್ಲೂ, ಧೈರ್ಯದಲ್ಲೂ ಸಹನ ಶಕ್ತಿಯಲ್ಲೂ ಉದಾರ ಗುಣದಲ್ಲೂ ಈಕೆ ಶ್ರೇಷ್ಠಳು. ಎಲ್ಲ ಸಂಪತ್ತು-ಸೌಖ್ಯಗಳು ಈಕೆಗೆ ಇದ್ದರೂ ಎಳ್ಳಷ್ಟೂ ಅಹಂಕಾರ-ಡಾಂಭಿಕವಿಲ್ಲದವಳು. ಗೃಹಕಾರ್ಯದಲ್ಲಂತೂ ಈಕೆ ಗೃಹಲಕ್ಷ್ಮಿಯೇ. ಮಾತುಕತೆಗಳಲ್ಲಿ ಈಕೆ ಚುರುಕು ಬುದ್ದಿಯವಳಾದರೂ, ಹಾಸ್ಯ ಪ್ರಜ್ಞೆಯುಳ್ಳವಳು.
೬) ಅತಿಗಂಡ ಯೋಗದಲ್ಲಿ ಜನಿಸಿದ ಈ ಬಾಲಿಕೆಯು ದುರಭಿಮಾನಿಯೂ, ಸೊಕ್ಕಿನ ನುಡಿಗಳಿಂದ ತನ್ನ ಹಾಗೂ ತನ್ನ ವಂಶದ ಗೌರವವನ್ನು ಕಡೆಗಣಿಸುವವಳೂ ಅಧಿಕ ಸಿಟ್ಟಿನವಳೂ, ರೂಪ-ಗುಣಗಳಿಲ್ಲದವಳೂ, ವಿವೇಕವಿಲ್ಲದಲೇ ಮಾತನಾಡುವವಳೂ ಆಗುತ್ತಾಳೆ. ತನ್ನ ಪತಿಗೆ ಸದಾ ಕಿರಿಕಿರಿಯನ್ನುಂಟು ಮಾಡುವ ಈಕೆ ಅಲ್ಪಾಯುಷ್ಯವುಳ್ಳ ಮಕ್ಕಳನ್ನು ಹೊಂದುವಳು.
೭) ಸುಕರ್ಮ ಯೋಗದಲ್ಲಿ ಜನಿಸಿದ ಕನೈಯು ಸದಾ ಪರೋಪಕಾರ ನಿರತಳಾ ಗುತ್ತಾಳೆ. ಈಕೆಯು ಚುರುಕು. ತೀಕ್ಷ್ಯ- ಬುದ್ದಿ ಮತ್ತೆಯುಳ್ಳವಳು. ತನಗುಪಕಾರವನ್ನು ಮಾಡಿದವರನ್ನು ಎಂದಿಗೂ ಮರೆಯದಂಥವಳು. ಈಕೆ ಒಳ್ಳೇ ಜಾಣೆಯೂ, ಸರ್ವ ಕಲಾ ನಿಪುಣೆಯೂ ಗುರು ಹಿರಿಯರನ್ನು ಉದಾರ ಭಾವನೆಯಿಂದ ಪೂಜ್ಯ ಭಾವನೆಯಿಂದ ಕಂಡು ಉಪಚರಿಸುವವಳೂ, ದಾನಶಿರೋಮಣಿಯೂ ಆಗುತ್ತಾಳೆ.
೮) ಧೃತಿ ಯೋಗದಲ್ಲಿ ಜನಿಸಿದ ಕನೈಯು ಎಲ್ಲ ಪ್ರಕಾರದ ನೇಮ ನಿತ್ಯಗಳನ್ನು ಬಲ್ಲವಳೂ, ವಿಶೇಷ ಬುದ್ದಿಯುಳ್ಳವಳೂ, ಸತ್ಯ ಸಂಕಲ್ಪದ ಬಗ್ಗೆ ಅಭಿಮಾನವುಳ್ಳವಳೂ, ಎಲ್ಲರೊಡನೆ ಪ್ರೇಮದಿಂದ, ನಯ ವಿನಯ ಗುಣಗಳಿಂದ ವರ್ತಿಸುವವಳು, ವ್ರತ ನೇಮಾದಿಗಳನ್ನು ಆಚರಿಸುತ್ತ ಶಾಂತ ಮನಸ್ಕಳೆಂದು, ನಿಗರ್ವಿಯೆಂದೂ, ಮಕ್ಕಳು ಮೊಮ್ಮಕ್ಕಳುಗಳನ್ನು ಹೊಂದಿ ಸುಖಿಸುವವಳೂ ಆಗುತ್ತಾಳೆ.
೯) ಶೂಲ ಯೋಗದಲ್ಲಿ ಜನಿಸಿದ ಬಾಲಿಕೆಯು ಕೆಟ್ಟ ಅಭಿಮಾನದಿಂದ ಕೂಡಿರುವಳು. ಬುದ್ಧಿಹೀನಳಾದ ಈಕೆ ಸತ್ಕರ್ಮಗಳನ್ನು ಕನಸಿನಲ್ಲಿಯೂ ಮಾಡಲಾರಳು. ವಿನಯ ಗುಣವಿಲ್ಲದ ಈಕೆ ಯಾವಾಗಲೂ ಉದರ ಶೂಲೆಯ ವ್ಯಾಧಿಗ್ರಸ್ತೆಯಾಗಿರುವಳು. ಉಪಕಾರಗೇಡಿಯೂ ಆಗಿರುವಳು.
೧೦) ಗಂಡ ಯೋಗದಲ್ಲಿ ಜನಿಸಿದವಳು ಕೆಟ್ಟ ಕಾರ್ಯಗಳನ್ನು ಮಾಡುವವಳೂ, ತನ್ನ ಯಾವದೇ ಕರ್ತವ್ಯದಲ್ಲಿ ಹಿಂದೆ ಬೀಳತಕ್ಕವಳೂ, ಗೆಳತಿಯರನ್ನು ತಿರಸ್ಕಾರದಿಂದ ನೋಡುವ ಸ್ವಭಾದವಳೂ, ಶೀಘ್ರ ಕೋಪಿಯೂ, ವಿಶೇಷ ಬಂಧು ಬಾಂಧವರು ಇಲ್ಲದಾಕೆಯೂ, ತನ್ನ ಪತಿಯನ್ನೇ ಉಪೇಕ್ಷಿಸಿ ನಡೆಯುವವಳೂ ಆಗುತ್ತಾಳೆ. ಪತಿಯ ಬಂಧು ಬಳಗದವರನ್ನು ದ್ವೇಷಿಸುವಳು.
೧೧) ವೃದ್ಧಿ ಯೋಗದಲ್ಲಿ ಜನಿಸಿದ ಕನೈಯು ನಿಗರ್ವಿಯಾಗಿದ್ದು ಸುಖ-ಸಂಪದ ಭಿವೃದ್ಧಿಯನ್ನು ಹೊಂದಿರುವಾಕೆಯೂ ಆಗುತ್ತಾಳೆ ಒಳ್ಳೇ ರೂಪವಂತಳಾದ ಈಕೆ ಸಮಸ್ತರಿಗೂ, ಸಮಸ್ತರೊಡನೆಯೂ ಅಂತಃಕರಣ- ಪ್ರೀತಿ ತೋರಿಸುವವಳು ಒಳ್ಳೇ ಶ್ರೇಷ್ಠ ಆಭರಣಗಳನ್ನು ಸಂಗ್ರಹಿಸುತ್ತ, ಧರಿಸುವವಳು, ತನ್ನ ಕಾರ್ಯದಲ್ಲಿ ದಕ್ಷಳೂ ಸರ್ವರಿಂದ ಮರ್ಯಾದೆಯನ್ನು ಹೊಂದಿರುವವಳೂ, ಒಳ್ಳೇ ಚತುರಳೂ, ಪುಣ್ಯವತಿಯೂ, ಶೀಲವಂತಳೂ ಆಗಿರುವಳು.
೧೨) ಧೃವ ಯೋಗದಲ್ಲಿ ಜನಿಸಿದವಳು ಭಾಗ್ಯವಂತಳೂ, ಕ್ಷಮಾಶೀಲೆಯೂ, ಸತ್ಕಾರ್ಯ ನಿರತಳೂ, ವಿನಯ-ಮೈದು ಭಾಷಿಣಿಯೂ, ಧನ-ಧಾನ್ಯ ಸಂಪತ್ತುಗಳಿಂದ ಸಮೃದ್ಧಳೂ, ಶಾಸ್ತ್ರ, ತತ್ವ-ನೇಮ ನಿತ್ಯಗಳನ್ನು ಪಾಲಿಸತಕ್ಕವಳು. ಈಕೆ ಬಂಧು ಬಳಗದವರಲ್ಲಿ ಜನಪ್ರೀಯಳೂ ಆಗುವಳು.
೧೩) ವ್ಯಾಘಾತ ಯೋಗದಲ್ಲಿ ಜನಿಸಿದ ಕನೈಯು ಡಾಂಭಿಕ ಗುಣದವಳಾಗಿದ್ದು ಸರ್ವರೊಡನೆ ಕಲಹವಾದಿಯಾಗುತ್ತಾಳೆ. ಈಕೆ ಘಾತಕ- ಗಂಡಾಂತರ ಗುಣದವಳು. ಉಪಕಾರವನ್ನು ಸ್ಮರಿಸದ ಈಕೆ ಅಸತ್ಯವನ್ನು ನುಡಿಯುವಲ್ಲಿ ನಿಸ್ಸಿಮಳು. ದಯಾ ಶೂನ್ಯಳೂ, ಪ್ರೇಮ- ಅಂತಃಕರಣವಿಲ್ಲದಾಕೆಯೂ ಆಗುವಳು.
೧೪) ಹರ್ಷಣ ಯೋಗದಲ್ಲಿ ಜನಿಸಿದ ಈ ಕನೈಯು ಶ್ರೇಷ್ಠ ನಾಜೂಕಿನ ದೇಹದವಳು, ಸೌಖ್ಯವಂತಳೂ ಕೀರ್ತಿವಂತಳೂ, ಆಗಿರುವ ಈಕೆ ಕೆಂಪು ವರ್ಣದ ಉಡುಗೆ-ತೊಡುಗೆಯನ್ನು ಧರಿಸುವಲ್ಲಿ ಪ್ರೇಮವುಳ್ಳಾಕೆಯು, ತನ್ನ ಕರ್ತವ್ಯವನ್ನು ಮನಸಾ ನೆರವೇರಿಸುವಳು. ಭಾಗ್ಯವಂತೆಯೂ, ಉಪಕಾರವನ್ನು ಸ್ಮರಿಸುವವಳೂ, ಅಮೌಲ್ಯ ಬಂಗಾರದೊಡವೆಗಳನ್ನು ಹೊಂದಿರುವವಳೂ, ಆಭರಣಗಳ ಬಗ್ಗೆ ಪ್ರೇಮವುಳ್ಳಾಕೆಯೂ ಆಗುವಳು.
೧೫) ವೃಜ ಯೋಗದಲ್ಲಿ ಜನಿಸಿದಾಕೆಯು ಅನರ್ಘ ವಜ್ರದೊಡವೆಗಳನ್ನು ಹೊಂದಿ, ಧರಿಸಿಕೊಳ್ಳುವವಳೂ ಆಗುತ್ತಾಳೆ ವಿಶೇಷ ಪ್ರಜ್ಞಾಶೀಲೆಯಾದ ಈಕೆ ಬುದ್ಧಿವಂತಳೂ ಬಂಧು ಬಾಂಧವರೊಡನೆ ಪ್ರೇಮ ಅಭಿಮಾನದಿಂದ ಇರತಕ್ಕವಳೂ ಆಗುತ್ತಾಳೆ. ಈಕೆ ದಾನಶೂರಳೂ, ಸತ್ಯವ್ರತಳೂ ಕರ್ತವ್ಯದಕ್ಷಳೂ ಆಗುತ್ತಾಳೆ.
16 ) ಸಿದ್ಧಿ ಯೋಗದಲ್ಲಿ ಜನಿಸಿದಾಕೆಯು ಉದಾರ ಹೃದಯವುಳ್ಳವಳೂ, ಸೌಭಾಗ್ಯವತಿಯೂ, ಯಾವಾಗಲೂ ಒಳ್ಳೇ ಉಪಕಾರದ ಕೆಲಸಗಳನ್ನು ಮಾಡುವವಳು. ಗುರು-ಲಿಂಗ-ಜಂಗಮ ಪ್ರೇಮಿಯೂ, ಗುರುಹಿರಿಯರನ್ನು ಆದರಿಸುವವಳೂ ತನ್ನ ಪತಿಯ ಗೃಹದ ಉತ್ಕರ್ಷಕ್ಕೆ ಶ್ರಮಿಸುವವಳೂ, ಆರೋಗ್ಯವಂತೆಯೂ, ಪುತ್ರ, ಪೌತ್ರಾದಿಗಳನ್ನು ಹೊಂದಿರುವಾಕೆಯೂ ಆಗುತ್ತಾಳೆ.
17) ವ್ಯತಿಪಾತ ಯೋಗದಲ್ಲಿ ಜನಿಸಿದ ಕನೈಯು ಕಲಹಪ್ರಿಯಳೂ, ರೋಗಗ್ರಸ್ತಳೂ, ಸದಾ ಪಾಪ ಕಾರ್ಯದಲ್ಲಿ ಆಸಕ್ತಳೂ, ಬಂಧು ಬಳಗವನ್ನು ದ್ವೇಷಿಸುವವಳೂ, ಭಯಾನಕ ಸ್ವಭಾವದವಳೂ ಆಗಿರುತ್ತಾಳೆ. ನೇಮ-ನಿಯಮಗಳನ್ನು ಮೀರಿ ನಡೆಯುವ ಈಕೆ ಉಪಕಾರವನ್ನು ಸ್ಮರಿಸದವಳಾಗುತ್ತಾಳೆ.
೧೮) ವರಿಯಾನ್ ಯೋಗದಲ್ಲಿ ಜನಿಸಿದ ಕನೈಯು ಗುರು-ಹಿರಿಯರಿಂದ ಮನ್ನಣೆ ಪಡೆಯುವವಳೂ, ಸದಾ ಒಳ್ಳೇ ಕಾರ್ಯದಲ್ಲಿ ಮಗ್ನಳೂ, ಅತಿ ಚತುರಳೂ, ಕೀರ್ತಿವಂತೆಯೂ, ರೂಪವತಿಯೂ, ದಾನಧರ್ಮದಲ್ಲಿ ವಿಶೇಷ ಆಸಕ್ತಳೂ ಆಗಿದ್ದು ಹುಟ್ಟಿದ ಮನೆಗೂ, ಕೊಟ್ಟ ಮನೆಗೂ ಕೀರ್ತಿಯನ್ನು ತರುವವಳಾಗುತ್ತಾಳೆ.
೧೯) ಪರಿಘ ಯೋಗದಲ್ಲಿ ಜನಿಸಿದಾಕೆಯು ಅಸತ್ಯತನದಿಂದ ನಡೆಯುವಳು. ಈಕೆ ಕ್ಷಮಾಗುಣವಿಲ್ಲದವಳು. ವಿಶೇಷ ವೃಥಾ ದುಂದುಗಾರಳೂ, ಬಿರುಸು ಮಾತುಗಳ ನಾಡುವದರಲ್ಲಿ ಹಿಂದು ಮುಂದು ನೋಡದವಳು. ಸೇವಿಸಬಾರದ ಪೇಯಗಳನ್ನು ಈಕೆ ಸೇವಿಸುವಳು. ಆದರೆ ವಿರೋಧಿಗಳನ್ನು ಜೈಸುವದರಲ್ಲಿ ಪರಿಣಿತಳಾಗಿರುತ್ತಾಳೆ.
೨೦) ಶಿವ ಯೋಗದಲ್ಲಿ ಜನಿಸಿದ ಕನೈಯು ಶಿವನ ದಯೆಯಿಂದ ಸದಾ ಶಾಶ್ವತ ಎಲ್ಲ ಸುಖಗಳನ್ನು ಪಡೆದುಕೊಂಡು ಧನ್ಯ ಜೀವನ ನಡೆಯಿಸುವವಳಾಗುತ್ತಾಳೆ. ಈಕೆ ಒಳ್ಳೇ ನೀತಿ ನೇಮದಂತೆ ನಡೆದು ಕೀರ್ತಿಶಾಲಿಯಾಗುತ್ತಾಳೆ. ಗುರುವಿನ ಉಪದೇಶ-ಮಂತ್ರಾನುಷ್ಠಾನ ಪಡೆದು ಶೀಲವಂತಳಾಗುತ್ತಾಳೆ. ಈಕೆ ಜೀತೇಂದ್ರಿಯಳೂ, ಆಹಾರ-ವಿಹಾರಗಳಲ್ಲಿ ನಿಯಂತ್ರಣವುಳ್ಳಾಕೆಯು ಆಗುವಳು.
೨೧ ) ಸಿದ್ದ ಯೋಗದಲ್ಲಿ ಜನಿಸಿದ ಕನೈಯು ಸತ್ಯವ್ರತಳೂ, ಬಿಳಿ ಕೆಂಪು ವರ್ಣದ ಸುಂದರ ದೇಹವುಳ್ಳವಳೂ, ಮಹಾ ಸೌಖ್ಯವಾನಳೂ, ವಿಶೇಷ ದಾನ- ಧರ್ಮ ಕಾರ್ಯಗಳಲ್ಲಿ ನಿರತಳೂ, ಬುದ್ದಿವಂತೆಯೂ, ಕೈಕೊಂಡ ಕಾರ್ಯಗಳಲ್ಲಿ ಸಿದ್ಧಿಯನ್ನು ಹೊಂದಿರುವಾಕೆಯೂ ಆಗುತ್ತಾಳೆ. ಗುರು-ಹಿರಿಯರಲ್ಲಿ ಅಭಿಮಾನವುಳ್ಳವಳೂ ಆಗಿ ಸಂತೃಪ್ತ ಜೀವನ ನಡೆಸುವವಳು ಆಗುತ್ತಾಳೆ.
೨೨) ಸಾಧ್ಯ ಯೋಗದಲ್ಲಿ ಜನಿಸಿದ ಕನೈಯು ಸುಸಂಪನ್ನಳೂ, ಜನಪ್ರೀಯಳೂ, ರೂಪವತಿಯೂ, ವಿನಯ ಗುಣವನ್ನೇ ತನ್ನ ಭಾಗ್ಯವನ್ನಾಗಿ ಮಾಡಿಕೊಂಡವಳೂ, ಧನ-ಧಾನ್ಯ ಸಂಪನ್ನಳೂ, ಸುಂದರ ಉಡುಗೆ ತೊಡುಗೆಗಳನ್ನು ಆಭರಣಗಳನ್ನು ಪ್ರೀತಿಸುವವಳೂ, ಯೋಗ ವಿದ್ಯೆಯಲ್ಲಿ ಪರಿಣಿತಳೂ, ಅಸಾಧ್ಯವಾದದ್ದನ್ನು ಸಾಧ್ಯವನ್ನಾಗಿಸಿಕೊಳ್ಳುವ ಮುತ್ಸದ್ದಿ ಗುಣವುಳ್ಳವಳೂ ಆಗುವಳು.
೨೩) ಶುಭ ಯೋಗದಲ್ಲಿ ಜನಿಸಿದ ಸ್ತ್ರೀಯಳು ಯಾವಾಗಲೂ ಶುಭ ಲಕ್ಷಣವನ್ನು ಹೊಂದಿ ಶೋಭಿಸುವವಳೂ, ಶುಭಕರವಾಗಿ ಸುಶೀಲ ಮಾತುಗಳನ್ನಾಡುವಾಕೆಯೂ, ದೊಡ್ಡ ಕಣ್ಣುಗಳನ್ನು ಹೊಂದಿದ ವಿಶಾಲಾಕ್ಷಿಯೆಂದೂ, ಶುಭಕರವಾದ ಉಪದೇಶಗಳನ್ನು ಮಾಡುವಾಕೆಯೂ ಆಗುತ್ತಾಳೆ. ಸುಂದರ, ಶುಭಕರ ವಸ್ತ್ರಾಭರಣಗಳನ್ನು ಧರಿಸುವಲ್ಲಿ ಪ್ರೇಮವುಳ್ಳಾಕೆಯೂ ಆಗುವಳು. ಆದರೆ, ಸ್ವಲ್ಪು ಗರ್ವಸ್ವಭಾವದಾಕೆಯಾಗಿರುತ್ತಾಳೆ.
೨೪ ) ಶುಕ್ಲ ಯೋಗದಲ್ಲಿ ಜನಿಸಿದ ಕನೈಯು ಎಲ್ಲರಿಂದ ಮಾನ-ಸನ್ಮಾನಗಳನ್ನು ಹೊಂದುವಾಕೆಯಾಗುತ್ತಾಳೆ. ಶುಭ್ರ ಬಿಳೇ ವಸ್ತ್ರಾಭರಣಗಳನ್ನು ಧರಿಸುವಲ್ಲಿ ಹೆಚ್ಚು ಅಭಿಲಾಷೆಯುಳ್ಳವಳು. ಪತಿವ್ರತೆಯೂ, ಸತ್ಯವ್ರತಳೂ ಆಗಿರುವ ಈಕೆಯು ತನ್ನ ವಿರೋಧಿಗಳನ್ನೂ ತನ್ನ ಮೃದು ವಿನಯ ಮಾತುಗಳಿಂದ ಜಯಸುವವಳು. ಈಕೆಯು
ಉಪಕಾರ ಮಾಡಿದವರನ್ನು ಸದಾ ಸ್ಮರಿಸುವ ಮಾನಿನಿಯಾಗುವಳು.
೨೫ ) ಬ್ರಹ್ಮ ಯೋಗದಲ್ಲಿ ಜನಿಸಿದ ಕನೈಯು ದಾನ-ಧರ್ಮ ಕಾರ್ಯಗಳಲ್ಲಿ ವಿಶೇಷ ನಿರತಳೂ, ಒಳ್ಳೇ ಮಾರ್ಗದಿಂದ ತಿಳಿದು ನಡೆಯುವ ಈಕೆ ಶ್ರೇಷ್ಠ ಮನೆತನದ ಸೊಸೆಯಾಗಿ ಕೀರ್ತಿಯನ್ನು ತರುವಳು. ಚತುರಳೂ, ಸತ್ಯತನದಿಂದ ನಡೆಯುವವಳೂ, ಶಾಸ್ತ್ರ-ಪುರಾಣ-ಪುಣ್ಯ ಕಥೆಗಳನ್ನು ಕೇಳುವದರಲ್ಲಿ ಹೆಚ್ಚು ಅಭಿರುಚಿಯುಳ್ಳವಳೂ, ಬಂಧು ಬಾಂಧವರಲ್ಲಿ ಹೆಚ್ಚು ಪ್ರಭಾವವುಳ್ಳವಳೂ, ವಾದ-ವಿವಾದಗಳಲ್ಲಿ ಪರಿಣಿತಳೂ ಆಗಿರುತ್ತಾಳೆ.
೨೬) ಐಂದ್ರ ಯೋಗದಲ್ಲಿ ಜನಿಸಿದ ಕನೈಯು ಸಕಲ ಸುಖ-ಸಂಪತ್ತು ಸಮೃದ್ಧಿಯನ್ನು ಹೊಂದಿರುವಾಕೆ ಆಗುತ್ತಾಳೆ. ಒಳ್ಳೇ ಗೌರವಯುತ ಮನೆತನದ ಸೊಸೆಯಾಗುವ ಈಕೆ ಒಳ್ಳೇ ಹೃದಯದ ಗಂಡನ ಪತ್ನಿಯಾಗುವಳು. ಸಂಸಾರಿಕ-ಗೃಹಸ್ಥ ಜೀವನದಲ್ಲಿ ಸಂತೃಪ್ತ ಜೀವನ ನಡೆಸುವ ಈಕೆ ಬಂಧು ಬಳಗ ಆಪ್ತ ಮಿತ್ರರ ಸ್ನೇಹವನ್ನು ಗಟ್ಟಿಗೊಳಿಸಿಕೊಳ್ಳುವ ಈಕೆ ಸಾಹಸ ಪ್ರೀಯಳೂ, ಮಕ್ಕಳು ಹೊಂದಿದವಳೂ ದಾನಧರ್ಮ ಕಾರ್ಯಗಳಲ್ಲಿ ಹೆಚ್ಚು ನಿರತಳೂ ಆಗುವಳು.