ನವದೆಹಲಿ: ಕಳೆದ 3 ವರ್ಷಗಳಲ್ಲಿ ದೇಶಾದ್ಯಂತ 13.13 ಲಕ್ಷ ಮಹಿಳೆಯರು ನಾಪತ್ತೆಯಾಗಿರುವ ಕುರಿತು ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
2019 ರಿಂದ 2021ರ ಅವಧಿಯಲ್ಲಿ ಭಾರತದಲ್ಲಿ 13.13 ಲಕ್ಷ ಮಂದಿ ಸ್ತ್ರೀಯರು ನಾಪತ್ತೆಯಾಗಿದ್ದಾರೆ. ಇದರಲ್ಲಿ ಮಧ್ಯಪ್ರದೇಶಕ್ಕೆ ಅಗ್ರಸ್ಥಾನವಿದ್ದರೆ, ಪಶ್ಚಿಮ ಬಂಗಾಳ ದ್ವಿತೀಯ ಸ್ಥಾನ ಪಡೆದಿದೆ ಎಂದು ಕೇಂದ್ರ ಗೃಹ ಇಲಾಖೆ ಮಾಹಿತಿ ನೀಡಿದೆ.
ಕಳೆದ ಮೂರೇ ವರ್ಷದಲ್ಲಿ ಕರ್ನಾಟಕದಿಂದ 40 ಸಾವಿರ ಮಹಿಳೆಯರು ನಾಪತ್ತೆಯಾಗಿದ್ದಾರೆ.
ನಾಪತ್ತೆಯಾದವರಲ್ಲಿ ಬಾಲಕಿಯರಿಗಿಂತ ವಯಸ್ಕ ಮಹಿಳೆಯರೇ ಹೆಚ್ಚು ಎಂದು ಗೃಹ ಸಚಿವಾಲಯ ಮಾಹಿತಿ ನೀಡಿದೆ.