ಮನೆ ರಾಜಕೀಯ ಭವಿಷ್ಯದಲ್ಲಿ ಭಗವಾಧ್ವಜವೇ ರಾಷ್ಟ್ರಧ್ವಜವಾಗಬಹುದು: ಕೆ.ಎಸ್.ಈಶ್ವರಪ್ಪ

ಭವಿಷ್ಯದಲ್ಲಿ ಭಗವಾಧ್ವಜವೇ ರಾಷ್ಟ್ರಧ್ವಜವಾಗಬಹುದು: ಕೆ.ಎಸ್.ಈಶ್ವರಪ್ಪ

0

ಬೆಂಗಳೂರು(Bengaluru): ಭಗವಾಧ್ವಜವೇ  ಭವಿಷ್ಯದಲ್ಲಿ ದೇಶದ ರಾಷ್ಟ್ರಧ್ವಜವಾಗಬಹುದು ಎಂದು ಹೇಳುವ ಮೂಲಕ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮತ್ತೊಮ್ಮೆ ವಿವಾದ ಸೃಷ್ಠಿಸಿದ್ದಾರೆ.

ಈ ನಾಡಿನಲ್ಲಿ ಹಿಂದಿನಿಂದಲೂ ಕೇಸರಿ ಧ್ವಜಕ್ಕೆ ಗೌರವವಿದೆ, ಅದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ, ಕೇಸರಿ ಧ್ವಜ ತ್ಯಾಗ ಬಲಿದಾನದ ಸಂಕೇತವಾಗಿದೆ, ಅದನ್ನು ಮೈಗೂಡಿಸಿಕೊಳ್ಳಲು ಆರ್‌ ಎಸ್‌ ಎಸ್‌ ಕಚೇರಿಯಲ್ಲಿ ಕೇಸರಿ ಧ್ವಜದ ಮುಂದೆ ಪ್ರಾರ್ಥಿಸುತ್ತೇವೆ. ನಮ್ಮಲ್ಲಿ ಮೌಲ್ಯಗಳಿವೆ, ಕೇಸರಿ ಧ್ವಜ ಮುಂದೊಂದು ದಿನ ಈ ದೇಶದಲ್ಲಿ ರಾಷ್ಟ್ರಧ್ವಜವಾಗಬಹುದು, ಅದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್‌ನವರು ಹೇಳಿದಾಗಲೆಲ್ಲಾ ನಾವು ತ್ರಿವರ್ಣ ಧ್ವಜವನ್ನು ಹಾರಿಸಬೇಕಾಗಿಲ್ಲ. ನಮ್ಮ ಸಂವಿಧಾನದ ಪ್ರಕಾರ ತ್ರಿವರ್ಣ ಧ್ವಜ ರಾಷ್ಟ್ರಧ್ವಜವಾಗಿದೆ ಮತ್ತು ಅದಕ್ಕೆ ಗೌರವವನ್ನು ನಾವು ನೀಡುತ್ತೇವೆ ಎಂದು ಹೇಳಿದರು. ಫೆಬ್ರವರಿ ತಿಂಗಳಲ್ಲಿ ಕೆಂಪುಕೋಟೆಯಲ್ಲಿ ಕೇಸರಿ ಬಾವುಟ ಹಾರಿಸಲಾಗುವುದು ಎಂದು ಈಶ್ವರಪ್ಪ ಹೇಳಿದಾಗ ಫೆಬ್ರವರಿಯಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ ಈಶ್ವರಪ್ಪ ಅವರು ಸದನದೊಳಗೆ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಭಾರಿ ಕೋಲಾಹಲ ಎದ್ದಿತ್ತು. ಸಚಿವರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಪಕ್ಷ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿತ್ತು. ಕರ್ನಾಟಕ ವಿಧಾನಸಭೆಯೊಳಗೆ ವಿಪಕ್ಷಗಳು ಅಹೋರಾತ್ರಿ ಧರಣಿ ನಡೆಸಿದ್ದವು.