ಚಿಕ್ಕಮಗಳೂರು : ಕಾಂಗ್ರೆಸ್ ನ್ನು ಬೂದುಗನ್ನಡಿ ಹಾಕಿಕೊಂಡು ಹುಡುಕುವ ಪರಿಸ್ಥಿತಿ ಕರ್ನಾಟಕದಲ್ಲೂ ಬರುತ್ತದೆ ಎಂದು ಮಾಜಿ ಸಚಿವ, ಹಿರಿಯ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಕಡೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ನಿಂದ ಇಂದು ಟಿಕೆಟ್ ಬಿಡುಗಡೆಯಾಗುತ್ತಿದೆ, ಆ ಬಳಿಕ ಕಾಂಗ್ರೆಸ್ ನಲ್ಲಿ ಆಂತರಿಕ ಸ್ಫೋಟವಾಗುತ್ತದೆ.ಚುನಾವಣೆ ಮುಗಿದ ಮೇಲೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನ ಹುಡುಕಬೇಕು ಎಂದು ಹೇಳಿದರು.
ನಿರೀಕ್ಷೆಗೂ ಮೀರಿ, ಭಾರತೀಯ ಜನತಾ ಪಾರ್ಟಿಗೆ ರಾಜ್ಯದ ಜನ ಬೆಂಬಲ ನೀಡುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಕೆಲಸ ನೋಡಿ ರಾಜ್ಯದ ಜನ ಮೆಚ್ಚಿದ್ದಾರೆ. 224ರಲ್ಲಿ ಬಿಜೆಪಿ ಮೊದಲು ಗೆಲ್ಲುವುದೇ ಕಡೂರು ಕ್ಷೇತ್ರ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
Saval TV on YouTube