ಮೈಸೂರು: ಕರ್ನಾಟಕ ಯುವರಕ್ಷಣಾ ವೇದಿಕೆಯ ಮೈಸೂರು ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಕಾರ್ಯಕಾರಿಣಿ ಸಭೆ ಮೈಸೂರು ಲೋಕೋಪಯೋಗಿ ಇಲಾಖೆಯ ಅತಿಥಿಗೃಹದ ಸಭಾಂಗಣದಲ್ಲಿ ನೆರವೇರಿತು.
ಈ ಸಂಧರ್ಭದಲ್ಲಿ ಕರ್ನಾಟಕ ಯುವರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಸುನೀಲ್.ಎಂ.ಎಸ್ ರವರು ಮೈಸೂರು ಜಿಲ್ಲಾಧ್ಯಕ್ಷರಾದ ಉಮೇಶ್ ಹಾಗೂ ವಿವಿಧ ಘಟಕದ ಪದಾಧಿಕಾರಿಗಳಿಗೆ ಗುರುತಿನ ಚೀಟಿ ಹಾಗೂ ಆದೇಶ ಪತ್ರನೀಡಿ ಶುಭಕೋರಿದರು.
ಈ ಸಂಧರ್ಭದಲ್ಲಿ ಕರ್ನಾಟಕ ಯುವರಕ್ಷಣಾ ವೇದಿಕೆಯ ರಾಜ್ಯ ಕಾರ್ಯಾಧ್ಯಕ್ಷರಾದ ನಟೇಶ, ಸಮಾಜ ಸೇವಕರಾದ ಅನಂದ್,ಮೈ ಸೋಶಿಯಲ್ ಮೀಡಿಯಾ ಡಿಜಿಟಲ್ ಕ್ಲಬ್ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಸೂರ್ಯವರ್ಧನ್ ,ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯ ಉಪಾಧ್ಯಕ್ಷರಾದ ಸುನೀಲ್ ನಾರಾಯಣ್,ದೇವರಾಜ ಬ್ಲಾಕ್ ಅಧ್ಯಕ್ಷರಾದ ವಿಕಾಸ್ ಸಿಂಹ ,ರಾಜ್ಯ ಕಾರ್ಯದರ್ಶಿ ಶ್ರೀಪಾಲ್,ರವಿನಾಯಕ್, ಮೈಸೂರು ಬಸವಣ್ಣ,ರವಿ,ಶ್ರೀನಿವಾಸ್, ಕುಮಾರ್ ಉಪಸ್ಥಿತರಿದ್ದರು.














