ಮನೆ ಕ್ರೀಡೆ IND-W vs SA-W: 7000 ರನ್ ದಾಖಲೆ ಬರೆದ ಸ್ಮೃತಿ ಮಂಧನಾ

IND-W vs SA-W: 7000 ರನ್ ದಾಖಲೆ ಬರೆದ ಸ್ಮೃತಿ ಮಂಧನಾ

0

ಬೆಂಗಳೂರು: ದಕ್ಷಿಣ ಆಫ್ರಿಕಾ ವನಿತಾ ತಂಡದ ವಿರುದ್ದದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ವನಿತಾ ತಂಡ ಗೆಲುವು ಸಾಧಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ ಶತಕ ಸಿಡಿಸಿ ಮಿಂಚಿದರು.

Join Our Whatsapp Group

ಇದೇ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 7000 ರನ್ ಗುರಿ ದಾಟಿದ ಸಾಧನೆ ಮಾಡಿದರು. ರವಿವಾರದ ಪಂದ್ಯದಲ್ಲಿ ಮಂಧನಾ 127 ಎಸೆತಗಳಲ್ಲಿ 117 ರನ್‌ ಗಳಿಸಿದರು. ಇದು ಅವರ ಒಟ್ಟಾರೆ ಅಂತಾರಾಷ್ಟ್ರೀಯ ಮೊತ್ತವನ್ನು 7,059 ರನ್‌ ಗಳಿಗೆ ಕೊಂಡೊಯ್ದಿತು.

ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದವರ ಪೈಕಿ ಮಂಧನಾ ಎರಡನೇ ಸ್ಥಾನದಲ್ಲಿದ್ದಾರೆ. ಮಾಜಿ ನಾಯಕಿ ಮಿಥಾಲಿ ರಾಜ್ ಅವರು ಮೊದಲು ಸ್ಥಾನದಲ್ಲಿದ್ದಾರೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 10,868 ರನ್ ಗಳಿಸಿದ್ದಾರೆ.

ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಈ ದಾಖಲೆಯಲ್ಲಿ ಮಂಧನಾ ಹಿಂದೆಯಿದ್ದಾರೆ. ಅವರು ಅಂತಾರಾಷ್ಟ್ರೀಯ ಸರ್ಕ್ಯೂಟ್‌ ನಲ್ಲಿ 6,870 ರನ್‌ ಗಳನ್ನು ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ ಈ 7000 ರನ್ ಸಾಧನೆಯನ್ನು ಮಾಡುವ ಅವಕಾಶವಿದೆ.

ಶತಕದ ದಾಖಲೆ

ಇದೇ ವೇಳೆ ಟೀಂ ಇಂಡಿಯಾ ಉಪ ನಾಯಕಿ ಸ್ಮೃತಿ ಮಂಧನಾ ಅವರು ಏಕದಿನ ಕ್ರಿಕೆಟ್ ನಲ್ಲಿ ಆರನೇ ಶತಕ ಬಾರಿಸಿದರು. ತವರಿನಲ್ಲಿ ಅವರು ಹೊಡೆದ ಮೊದಲ ಏಕದಿನ ಶತಕವಿದು. ಇದೇ ವೇಳೆ ಅವರು ಸ್ಮೃತಿ ಅವರು ಹರ್ಮನ್ ಪ್ರೀತ್ ಕೌರ್ ಅವರ ಐದು ಶತಕಗಳ ದಾಖಲೆ ಮುರಿದರು. ಮಿಥಾಲಿ ಅವರು ಏಳು ಶತಕ ಬಾರಿಸಿ ಭಾರತೀಯರ ಸಾಲಿನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಮಿಥಾಲಿ ರಾಜ್ ಅವರು ಏಳು ಶತಕಗಳನ್ನು ಬಾರಿಸಲು 211 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಹರ್ಮನ್‌ಪ್ರೀತ್ 112 ಇನ್ನಿಂಗ್ಸ್‌ ಗಳಲ್ಲಿ ಐದು ಶತಕಗಳನ್ನು ಬಾರಿಸಿದ್ದರು. ಮಂಧನಾ ಆರು ಶತಕಗಳನ್ನು ಬಾರಿಸಲು ಕೇವಲ 83 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ.