ಮನೆ ಆರೋಗ್ಯ ಭರಮಸಾಗರ: ಮದುವೆಯಲ್ಲಿ ಊಟ ಮಾಡಿದ 30ಕ್ಕೂ ಅಧಿಕ ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಭರಮಸಾಗರ: ಮದುವೆಯಲ್ಲಿ ಊಟ ಮಾಡಿದ 30ಕ್ಕೂ ಅಧಿಕ ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

0

ಭರಮಸಾಗರ: ಕಾಲಗೆರೆ ಗ್ರಾಮದ ಮದುವೆ ಸಮಾರಂಭದಲ್ಲಿ ಊಟ ಮಾಡಿದ ಸುಮಾರು 30 ಕ್ಕೂ ಹೆಚ್ಚು ಜನರು ಪುಡ್ ಪಾಯಿಸನ್ ನಿಂದ ಅಸ್ವಸ್ಥಗೊಂಡು ದಾವಣಗೆರೆಯ ಸಿಜಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

Join Our Whatsapp Group

ಶುಕ್ರವಾರ ನಡೆಯಬೇಕಿದ್ದ ಕಾಲಗೆರೆ ಗ್ರಾಮದ ವಧು ಮತ್ತು ಹಿರೇಬೆನ್ನೂರು ಗ್ರಾಮದ ವರನ ಮದುವೆ ಅರತಕ್ಷತೆ ಸಮಾರಂಭದಲ್ಲಿ ಪಾಲ್ಗೊಂಡ ಜನರಲ್ಲಿ ಸುಮಾರು 30 ಜನರು ಊಟದ ಬಳಿಕ ಪುಡ್ ಪಾಯಿಸನ್ ಸಮಸ್ಯೆಯಿಂದ ನರಳಾಟ ನಡೆಸುತ್ತಿರುವದನ್ನು ಕಂಡು ಕೂಡಲೇ ಭರಮಸಾಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಬಳಿಕ ಆರತಕ್ಷತೆಯನ್ನು ನಡೆಸಲಾಗಿದೆ.ಶನಿವಾರ ಬೆಳಗ್ಗೆ ಕೂಡ ಮುಹೂರ್ತ ಕಾರ್ಯಕ್ರಮ ನಡೆಸಲಾಗಿದೆ. ಮುಹೂರ್ತದಲ್ಲಿ ಪಾಲ್ಗೊಂಡು ಐವರಿಗೂ ಪುಡ್ ಪಾಯಿಸನ್ ಎಪೆಕ್ಟ್ ಕಂಡುಬಂದಿದ್ದು ಕೂಡಲೇ ಅವರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಲಗೆರೆ ಗ್ರಾಮದ ಮದುವೆ ಮನೆ ಬಳಿ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಹಾಜರಿದ್ದು ಎಲ್ಲಾ ಜನರ ಆರೋಗ್ಯ ತಪಾಸಣೆ ನಡೆಸಿದೆ. ಸ್ಥಳಕ್ಕೆ ಮಾಜಿ ಸಚಿವ ಎಚ್.ಆಂಜನೇಯ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ದಾವಣಗೆರೆ ಜಿಲ್ಲಾಸ್ಪತ್ರೆಗೆ ಮಾಯಕೊಂಡ ಶಾಸಕ ಬಸವಂತಪ್ಪ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಣೆ ನಡೆಸಿದ್ದಾರೆ. ಎಚ್.ಎನ್.ಪ್ರವೀಣ್, ಚಂದ್ರಶೇಖರ್ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಜಮ್ಮ ಕೋಟ್ಯಾಪ್ಪ ಹಾಜರಿದ್ದರು.

ಹಿಂದಿನ ಲೇಖನನ್ಯಾಯಾಧೀಶರೊಬ್ಬರ ನಿಗ್ರಾಣಿಯಲ್ಲಿ ಎಸ್ಐಟಿ ನಡೆಸಲಿ: ಸಿ ಟಿ ರವಿ
ಮುಂದಿನ ಲೇಖನಕೆರಗೋಡು ಹನುಮ ಧ್ವಜ ವಿವಾದ: ಜೆಡಿಎಸ್, ಭಜರಂಗದಳ, ವಿ.ಹಿಂ.ಪ ಪ್ರತಿಭಟನೆ