ಮನೆ ಸುದ್ದಿ ಜಾಲ ರಾವಿ ನದಿ ನೀರು ಹರಿವು ತಡೆಯಲು ಮುಂದಾದ ಭಾರತ – ನದಿಗೆ ಅಡ್ಡಲಾಗಿ ಡ್ಯಾಂ ಸಿದ್ಧ..!

ರಾವಿ ನದಿ ನೀರು ಹರಿವು ತಡೆಯಲು ಮುಂದಾದ ಭಾರತ – ನದಿಗೆ ಅಡ್ಡಲಾಗಿ ಡ್ಯಾಂ ಸಿದ್ಧ..!

0

ನವದೆಹಲಿ : ರಾವಿ ನದಿಯಿಂದ ಪಾಕಿಸ್ತಾನಕ್ಕೆ ಹೆಚ್ಚುವರಿ ನೀರು ಹರಿಯುವುದನ್ನು ಸ್ಥಗಿತಗೊಳಿಸಲು ಭಾರತ ಮುಂದಾಗಿದೆ. ಇದರಿಂದ ಪಾಕಿಸ್ತಾನಕ್ಕೆ ನೀರಿನ ತೊಂದರೆಗಳು ಮತ್ತಷ್ಟು ತೀವ್ರಗೊಳ್ಳಲಿದೆ.

ಸಿಂಧೂ ಜಲ ಒಪ್ಪಂದದ ಅಮಾನಗೊಳಿಸಿರುವುದು, ಪಂಜಾಬ್-ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿರುವ ಶಹಪುರ್ ಕಂಡಿ ಅಣೆಕಟ್ಟಿನ ಕೆಲಸವನ್ನು ವೇಗಗೊಳಿಸಲು ಸಹಾಯ ಮಾಡಿದೆ. ಯೋಜನೆಯು ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಜಮ್ಮು ಮತ್ತು ಕಾಶ್ಮೀರ ಸಚಿವ ಜಾವೇದ್ ಅಹ್ಮದ್ ರಾಣಾ ಹೇಳಿದ್ದಾರೆ.

ಅಣೆಕಟ್ಟು ಕಾರ್ಯಾರಂಭ ಮಾಡಿದ ನಂತರ, ಭಾರತವು ರಾವಿ ನದಿಯಿಂದ ಪಾಕಿಸ್ತಾನಕ್ಕೆ ಹೆಚ್ಚುವರಿ ನೀರಿನ ಹರಿವನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಸಚಿವರು ಹೇಳಿದ್ದಾರೆ. ಇದು ಸಿಂಧೂ ಜಲಾನಯನ ಪ್ರದೇಶದ ಪೂರ್ವ ನದಿ ನೀರಿನ ಬಳಕೆಯಲ್ಲಿ ಬಹುನಿರೀಕ್ಷಿತ ಬದಲಾವಣೆಯನ್ನು ತರುತ್ತದೆ.

ಶಹಪುರ್ ಕಂಡಿ ಅಣೆಕಟ್ಟಿನ ಕೆಲಸ ಮಾರ್ಚ್ 31 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಅದರ ನೀರನ್ನು ಬರಪೀಡಿತ ಕಥುವಾ ಮತ್ತು ಸಾಂಬಾ ಜಿಲ್ಲೆಗಳಿಗೆ ತಿರುಗಿಸಲಾಗುವುದು ಎಂದು ರಾಣಾ ತಿಳಿಸಿದ್ದಾರೆ.

ಪಾಕಿಸ್ತಾನಕ್ಕೆ ಹೆಚ್ಚುವರಿ ನೀರು ಹರಿಸುವುದನ್ನು ನಿಲ್ಲಿಸಲಾಗುವುದು, ಅದನ್ನು ನಿಲ್ಲಿಸಲೇಬೇಕು. ಕಥುವಾ ಮತ್ತು ಸಾಂಬಾ ಜಿಲ್ಲೆಗಳು ಬರ ಪೀಡಿತ ಪ್ರದೇಶಗಳಾಗಿದ್ದು, ನಮ್ಮ ಆದ್ಯತೆಯಾಗಿರುವ ಈ ಯೋಜನೆಯನ್ನು ಕಂಡಿ ಪ್ರದೇಶಕ್ಕಾಗಿ ನಿರ್ಮಿಸಲಾಗುತ್ತಿದೆ ಎಂದಿದ್ದಾರೆ.