ಮನೆ ಅಂತಾರಾಷ್ಟ್ರೀಯ ತಾಲಿಬಾನ್‌ ಯುದ್ಧಕ್ಕೆ ಭಾರತ ಪ್ರಾಯೋಜಕತ್ವ – ಪ್ಲ್ಯಾನ್‌ ನಡೆದಿದ್ದು ದೆಹಲಿಯಲ್ಲಿ; ಪಾಕ್‌ ಸಚಿವ ಆರೋಪ

ತಾಲಿಬಾನ್‌ ಯುದ್ಧಕ್ಕೆ ಭಾರತ ಪ್ರಾಯೋಜಕತ್ವ – ಪ್ಲ್ಯಾನ್‌ ನಡೆದಿದ್ದು ದೆಹಲಿಯಲ್ಲಿ; ಪಾಕ್‌ ಸಚಿವ ಆರೋಪ

0

ಇಸ್ಲಾಮಾಬಾದ್‌ : ತಾಲಿಬಾನ್‌ ಯುದ್ಧಕ್ಕೆ ಭಾರತ ಪ್ರಾಯೋಜಕತ್ವ ವಹಿಸಿದ್ದು, ಅಫ್ಘಾನಿಸ್ತಾನ ಭಾರತದ ಪ್ರಾಕ್ಸಿ ಯುದ್ಧದಲ್ಲಿ ಹೋರಾಡುತ್ತಿದೆ ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್ ಆರೋಪಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಅಫ್ಘಾನಿಸ್ತಾನವು ಯುದ್ಧದ ನಿರ್ಧಾರಗಳನ್ನು ಕಾಬೂಲ್‌ನಲ್ಲಿ ಅಲ್ಲ ಭಾರತದ ನವದೆಹಲಿಯಲ್ಲಿ ತೆಗೆದುಕೊಳ್ಳುತ್ತಿದೆ ಎಂದಿದ್ದಾರೆ. ಇದೇ ವೇಳೆ ಕದನ ವಿರಾಮದ ಬಗ್ಗೆಯೂ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ತಾಲಿಬಾನ್‌ನ ವಿದೇಶಾಂಗ ಸಚಿವ ಅಮೀರ್‌ ಖಾನ್‌ ಮುತ್ತಕಿ ಇತ್ತೀಚೆಗೆ ಭಾರತಕ್ಕೆ ಭೇಟಿ ನೀದ್ದಾಗ ಪ್ಲ್ಯಾನ್‌ ರೂಪಿಸಿದ್ದಾರೆ. ದೆಹಲಿಗೆ ಅವರ ಮೊದಲ ಭೇಟಿಯು ಅಧಿಕೃತವಾಗಿ ವ್ಯಾಪಾರ ಮತ್ತು ದ್ವಿಪಕ್ಷೀಯ ಸಂಬಂಧಗಳ ಮೇಲೆ ಕೇಂದ್ರೀಕೃತವಾಗಿತ್ತು. ಆದ್ರೆ ಈ ಸಭೆಯ ನಿಜವಾದ ಉದ್ದೇಶ ಬೇರೆಯದ್ದೇ ಆಗಿತ್ತು ಎಂದಿದ್ದಾರೆ ಖವಾಜ ಆಸಿಫ್.

ಪಾಕಿಸ್ತಾನ ಮತ್ತು ಅಫ್ಘಾನ್ ನಡುವೆ 48 ಗಂಟೆಗಳ ಕದನ ವಿರಾಮ ಘೋಷಣೆಯಾಗಿದೆ. ಎರಡು ದೇಶಗಳ ಮಧ್ಯೆ ಸಂಭವಿಸಿದ ಸಂಘರ್ಷದಲ್ಲಿ ಕನಿಷ್ಠ 15 ಅಫ್ಘಾನ್ ನಾಗರಿಕರು, 6 ಪಾಕ್ ಸೈನಿಕರು ಸಾವನ್ನಪ್ಪಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ. ರಾತ್ರಿ ಅಫ್ಘಾನ್ ಪಡೆಗಳು, ಸ್ಥಳೀಯ ಉಗ್ರಗಾಮಿಗಳು ನಡೆಸಿದ ಗಡಿಯಾಚೆಗಿನ ಗುಂಡಿನ ದಾಳಿಗೆ ತನ್ನ ಸೇನೆಯು ಪ್ರತೀಕಾರ ತೀರಿಸಿಕೊಂಡಿದೆ ಎಂದು ಪಾಕಿಸ್ತಾನ ಹೇಳಿದೆ.