ಮನೆ ರಾಷ್ಟ್ರೀಯ ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸುವುದೂ ಇಲ್ಲ: ಮೋಹನ್‌ ಭಾಗವತ್‌

ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸುವುದೂ ಇಲ್ಲ: ಮೋಹನ್‌ ಭಾಗವತ್‌

0

ಅಹ್ಮದಾಬಾದ್‌: ಭಾರತ ಯಾವುದೇ ದೇಶದ ಮೇಲೆ ದಾಳಿ ಮಾಡುವುದಿಲ್ಲ. ಬೇರೆ ದೇಶಗಳು ದಾಳಿ ಮಾಡಿದರೆ ಅದನ್ನು ಸಹಿಸುವುದೂ ಇಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌)ದ ಮುಖ್ಯಸ್ಥ ಮೋಹನ್‌ ಭಾಗವತ್‌ ಗುರುವಾರ ಹೇಳಿದ್ದಾರೆ.

Join Our Whatsapp Group

ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ನಡೆದ ಜೈನ ಸಮುದಾಯದ ನಾಯಕರ ಸಮಾರಂಭವೊಂದರಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

1999ರ ಭಾರತ-ಪಾಕಿಸ್ಥಾನ ಕಾರ್ಗಿಲ್‌ ಯುದ್ದದ ಸಂದರ್ಭವನ್ನು ಮುಂದಿಟ್ಟುಕೊಂಡು ಮಾತನಾಡಿದ ಅವರು, ನಮ್ಮ ಪೂರ್ವಿಕರು ತೋರಿಸಿಕೊಟ್ಟ ತಣ್ತೀಗಳನ್ನು ಎತ್ತಿಹಿಡಿಯುವ ಸಲುವಾಗಿ ಭಾರತವು ಈ ಹಿಂದೆ ತನ್ನ ವಿರುದ್ಧ ಯುದ್ದ ಸಾರಿದ್ದ ಹಾಗೂ ಈಗ ಸಂಕಷ್ಟದಲ್ಲಿರುವ ರಾಷ್ಟ್ರಗಳಿಗೂ ಸಹಾಯಹಸ್ತ ಚಾಚಿದೆ’ ಎಂದಿದ್ದಾರೆ.

“ಕಾರ್ಗಿಲ್‌ ಯುದ್ಧದ ವೇಳೆ ನಮ್ಮ ನೆರೆಯ ರಾಷ್ಟ್ರದ ಮೇಲೆ ಪ್ರತೀಕಾರ ತೀರಿಸಿಕೊಳ್ಳುವುದು ನಮಗೆ ಕಷ್ಟವೇನಿರಲಿಲ್ಲ. ಆದರೆ ನಮ್ಮ ಸೇನೆಗೆ ಗಡಿ ದಾಟಬಾ ರದೆಂಬ ಸ್ಪಷ್ಟ ಸೂಚನೆ ನೀಡಲಾಗಿತ್ತು. 2016ರಲ್ಲಿ ನಡೆದ ಸರ್ಜಿಕಲ್‌ ದಾಳಿ ವೇಳೆಯೂ ಇಡೀ ಪಾಕಿ ಸ್ಥಾನವನ್ನು ನಾವು ಗುರಿಯಾಗಿಸಲಿಲ್ಲ. ನಮಗೆ ತೊಂದರೆ ನೀಡಿದ್ದ ಗುಂಪು ಮಾತ್ರ ನಮ್ಮ ಗುರಿಯಾಗಿತ್ತು’ ಎಂದು ಭಾಗವತ್‌ ಹೇಳಿದ್ದಾರೆ.