ಮನೆ ಯೋಗಾಸನ ಅರ್ಧ ಮತ್ಸೇಂದ್ರಾಸನ

ಅರ್ಧ ಮತ್ಸೇಂದ್ರಾಸನ

0

‘ಮತ್ಸೇಂದ್ರ’ನೆಂಬ ಯೋಗಿಯೊಬ್ಬನಿಂದ ಪ್ರಣೀತವಾದುದು ‘ಹಠಯೋಗ ಪ್ರದೀಪಿಕೆ’. ಹಠಯೋಗ ಪ್ರದೀಪಿಕೆಯಲ್ಲಿ ಈ ಆಸನಕ್ಕೆ ಸಂಬಂಧಿಸಿದ ವಿಷಯಗಳು ಹೇರಳವಾಗಿ ದೊರೆಯುತ್ತವೆ. ಆದ್ದರಿಂದಲೇ ಈ ಆಸನಕ್ಕೆ ಆ ಯೋಗಿಯ ಹೆಸರು ಬಂದಿರಬಹುದು.

Join Our Whatsapp Group

ಮಾಡುವ ಕ್ರಮ

1)    ಆಸನ ಪ್ರಾರಂಭಿಸುವ ಮೊದಲು ಯೋಗಾಭ್ಯಾಸಿಯೂ ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಿ ಕುಳಿತುಕೊಳ್ಳಬೇಕು.

2)    ನಂತರ ಎಡಗಾಲನ್ನು ಮಡಿಸಿ, ಎಡ ಹಿಮ್ಮಡಿಯು ಗುದದ್ವಾರದ  ಬಳಿ ಬರುವಂತೆ ಇಡಬೇಕು. ಈ ಸ್ಥಿತಿಯಲ್ಲಿ ಎಡಗಾಲಿನ ತೊಡೆ ಮತ್ತು ಮೀನಖಂಡಗಳು ಪರಸ್ಪರ ತಗಲಿರುತ್ತವೆ.

3)    ಬಲಗಾಲನ್ನು ಮಡಿಸಿ, ಅದನ್ನು ಎಡಗಾಲಿನ ಮಂಡಿಯ ಪಕ್ಕದಲ್ಲಿ ಚಿತ್ರದಲ್ಲಿ ತೋರಿಸಿರುವಂತೆ ಹೊರಗೆ ನಿಲ್ಲಿಸಬೇಕು.

4)    ಅನಂತರ ಎದೆಯನ್ನು ಸ್ವಲ್ಪ ಬಲಗಡೆಗೆ ತಿರುಗಿಸಿ ಎಡಗೈಯಿಂದ ಬಲಮಂಡಿಯನ್ನು ಸುತ್ತಿಸಿ, ಬಲಗಾಲಿನ ಹೆಬ್ಬೆರಳನ್ನು ಹಿಡಿಯಬೇಕು.

5)    ಹಾಗೆಯೇ ಬಲಗೈಯನ್ನು ಬೆನ್ನಿನ ಮೇಲೆ ಇಟ್ಟು ಎಡತೊಡೆಯನ್ನು ಹಿಡಿದುಕೊಳ್ಳಲು ಪ್ರಯತ್ನಿಸಬೇಕು. ಈ ಸ್ಥಿತಿಯಲ್ಲಿ ಸೊಂಟದಿಂದ ಮೇಲ್ಭಾಗದ ಶರೀರವು ತಿರುಚಿದಂತಾಗಿ ಎದೆ, ಬೆನ್ನು ಮತ್ತು ಕೈಗಳಲ್ಲಿ ವಿಶೇಷವಾದ ಚಲನೆಯಿರುತ್ತದೆ. ಅನಂತರ ಸಾಧ್ಯವಾದಷ್ಟೂ ಹೊತ್ತು ಈ ಸ್ಥಿತಿಯಲ್ಲಿದ್ದು, ನಿಧಾನವಾಗಿ ಇನ್ನೊಂದು ಕಾಲಿನಲ್ಲೂ ಮಾಡಬೇಕು.

ಲಾಭಗಳು

ಮಧುಮೇಹ ಮತ್ತು ಅಂತ್ರಪುಚ್ಛ ರೋಗಿಗಳಿಗೆ  ಅರ್ಧಮತ್ಸೇಂದ್ರಾಸನವು ಹೆಚ್ಚು ಉಪಕಾರಿ. ಸೊಂಟ, ಬೆನ್ನೆಲುಬು ಮತ್ತು ಕೈಗಳಿಗೆ ಹೆಚ್ಚು ಶಕ್ತಿ ಒದಗಿಸುತ್ತದೆ. ಜೀರ್ಣಶಕ್ತಿ ಹೆಚ್ಚುತ್ತದೆ. ಮಲಬದ್ಧತೆ ನಿವಾರಣೆಯಾಗುತ್ತದೆ. ಹೊಟ್ಟೆ ತೆಳುವಾಗುವುದರೊಂದಿಗೆ ಬೊಜ್ಜು ಕರಗುತ್ತದೆ. ವೀರ್ಯ ವೃದ್ಧಿಯಾಗುತ್ತದೆ. ಅನೇಕ ಉದರರೋಗಗಳು ಈ ಆಸನ ಅಭ್ಯಾಸದಿಂದ ಹಿಡಿತಕ್ಕೆ ಬರುತ್ತವೆ. ರಕ್ತನಾಳಗಳೂ ಬಲಗೊಳ್ಳುವವು.

ಹಿಂದಿನ ಲೇಖನಹರುಷದಿಂದಲಿ ಕಾಯೋ ಹನುಮಾ
ಮುಂದಿನ ಲೇಖನಈ ರಾಶಿಯವರು ಎಷ್ಟೇ ವಯಸ್ಸಾದರೂ ಮಕ್ಕಳಂತೆ ವರ್ತಿಸುತ್ತಾರೆ..!