ಮನೆ ಉದ್ಯೋಗ ಭಾರತೀಯ ಸೇನೆಯಲ್ಲಿದೆ 90 ಹುದ್ದೆ; ಪಿಯುಸಿ, ಪಿಸಿಎಂ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ

ಭಾರತೀಯ ಸೇನೆಯಲ್ಲಿದೆ 90 ಹುದ್ದೆ; ಪಿಯುಸಿ, ಪಿಸಿಎಂ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ

0

ಭಾರತೀಯ ಸೇನೆಯಲ್ಲಿ ವಿವಿಧ ಹುದ್ದೆ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. 10+2 ತಾಂತ್ರಿಕ ಪ್ರವೇಶ 48 ಯೋಜನೆಗೆ ಈ ಹುದ್ದೆ ನೇಮಕಾತಿ ನಡೆಯಲಿದೆ. ಒಟ್ಟು 90 ಹುದ್ದೆಗಳು ಖಾಲಿ ಇದ್ದು, ಪಿಯುಸಿಯಲ್ಲಿ ಪಿಸಿಎಂ ಅಧ್ಯಯನ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್​ 21 ಆಗಿದೆ.

ಶೈಕ್ಷಣಿಕ ಅರ್ಹತೆ: ಭಾರತೀಯ ಸೇನೆಯ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 12 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.
ಅಭ್ಯರ್ಥಿಯು JEE (ಮೇನ್ಸ್) 2022 ರ ಪರೀಕ್ಷೆಗೆ ಹಾಜರಾಗಿರಬೇಕು.
ವಯೋಮಿತಿ: ಭಾರತೀಯ ಸೇನಾ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಕನಿಷ್ಠ 16.5 ವರ್ಷಗಳು ಮತ್ತು ಗರಿಷ್ಠ 19.5 ವರ್ಷಗಳನ್ನು ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ:
ವೈದ್ಯಕೀಯ ಪರೀಕ್ಷೆ, ದೈಹಿಕ ಮಾನದಂಡಗಳು, ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 22 ಆಗಸ್ಟ್​​ 2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21 ಸೆಪ್ಟೆಂಬರ್​​ 2022
ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಎಸ್​ಎಸ್​ಬಿ ಸಂದರ್ಶನದ ದಿನಾಂಕ: ಅಕ್ಟೋಬರ್-2022 ರಿಂದ

ಅಧಿಕೃತ ವೆಬ್‌ಸೈಟ್: joinindianarmy.nic.in

ಅರ್ಜಿ ಸಲ್ಲಿಕೆ ಪ್ರಕ್ರಿಯೆ:

ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.

ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್ ಸೇರಿದಂತೆ ಅಗತ್ಯ ದಾಖಲೆಗಳನ್ನು ನೀಡಿ.

ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ಬಳಿಕ ಸಲ್ಲಿಸು ಬಟನ್​ ಕ್ಲಿಕ್​ ಮಾಡಿ.


ಹಿಂದಿನ ಲೇಖನಹೆರಿಗೆ ಮಾಡಿಸುವಲ್ಲಿ ನಿರ್ಲಕ್ಷ್ಯ ಮಹಿಳೆ ಸಾವು: ವೈದ್ಯೆ, ದಾದಿಯರಿಗೆ 15 ಲಕ್ಷ ರೂ. ದಂಡ
ಮುಂದಿನ ಲೇಖನತುಮಕೂರು: ಲಾರಿ – ಟೆಂಪೋ ನಡುವೆ ಅಪಘಾತ: 9 ಜನರ ಸಾವು