ಮನೆ ಅಪರಾಧ ಕೆನಡಾದಲ್ಲಿ ಭಾರತ ಮೂಲದ ವಿದ್ಯಾರ್ಥಿಗೆ ಗುಂಡಿಟ್ಟು ಹತ್ಯೆ

ಕೆನಡಾದಲ್ಲಿ ಭಾರತ ಮೂಲದ ವಿದ್ಯಾರ್ಥಿಗೆ ಗುಂಡಿಟ್ಟು ಹತ್ಯೆ

0

ಟೊರಂಟೊ: ಭಾರತೀಯ ಮೂಲದ 21 ವರ್ಷದ ವಿದ್ಯಾರ್ಥಿಯೊಬ್ಬನನ್ನು ಕೆನಡಾದ ಟೊರಂಟೊದಲ್ಲಿ ಅಪರಿಚಿತ ದುಷ್ಕರ್ಮಿ ಗುಂಡಿಟ್ಟು ಕೊಂದಿರುವ ಘಟನೆ ವರದಿಯಾಗಿದೆ.

ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ ಕಾರ್ತಿಕ್ ವಾಸುದೇವ್ ಎಂಬ ವಿದ್ಯಾರ್ಥಿ ಮೃತಪಟ್ಟವರು.

ಕಾರ್ತಿಕ್ ವಾಸುದೇವ್ ಟೊರಂಟೊದ ಶೇರ್‌ಬಾರ್ನೆ ಸಬ್‌ವೇ ರೈಲು ನಿಲ್ದಾಣದ ಬಳಿ ಶುಕ್ರವಾರ ಸಂಜೆ 5.30 ರ ಸುಮಾರು ತೆರಳುತ್ತಿದ್ದಾಗ ಮುಸುಕುದಾರಿಯೊಬ್ಬ ಬಂದು ಮನಸೋಇಚ್ಚೆ ಗುಂಡು ಹಾರಿಸಿದ್ದು ಕಂಡು ಬಂದಿದೆ. ಬಳಿಕ ಕಾರ್ತಿಕ್ ಅವರನ್ನು ರೈಲು ನಿಲ್ದಾಣದ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಕಾರ್ತಿಕ್ ವಾಸುದೇವ್ ಅವರು ಟೊರಂಟೊದ ಸೆನೆಕಾ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದರು. ಅವರ ನಿಧನಕ್ಕೆ ಕೆನಡಾದಲ್ಲಿನ ರಾಯಭಾರ ಕಚೇರಿ ಹಾಗು ಸೆನೆಕಾ ಕಾಲೇಜು ಆಘಾತ ವ್ಯಕ್ತಪಡಿಸಿದೆ. ಕಾರ್ತಿಕ್ ಕುಟುಂಬಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ. ಹಂತಕನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಟೊರಂಟೊ ಪೊಲೀಸರು ತಿಳಿಸಿದ್ದಾರೆ.

ಹಿಂದಿನ ಲೇಖನಹಿಂದಿ ಹೇರಿಕೆ ವಿರುದ್ದ ಅಭಿಯಾನಕ್ಕೆ ನನ್ನ  ಪೂರ್ಣ ಬೆಂಬಲ ಇದೆ: ಹೆಚ್ ಡಿಕೆ
ಮುಂದಿನ ಲೇಖನಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ: 28 ದಿನದಲ್ಲಿ 2.13 ಕೋಟಿ ರೂ ಕಾಣಿಕೆ ಸಂಗ್ರಹ