ಮನೆ ತಂತ್ರಜ್ಞಾನ ವಿಶ್ವದ ಸ್ಮಾರ್ಟ್’ವಾಚ್ ಮಾರುಕಟ್ಟೆಗೆ ಭಾರತ ಅತಿದೊಡ್ಡ ವೇದಿಕೆ

ವಿಶ್ವದ ಸ್ಮಾರ್ಟ್’ವಾಚ್ ಮಾರುಕಟ್ಟೆಗೆ ಭಾರತ ಅತಿದೊಡ್ಡ ವೇದಿಕೆ

0

ಬೆಂಗಳೂರು(Bengaluru): ಇತ್ತೀಚೆಗೆ ಸ್ಮಾರ್ಟ್​’ವಾಚ್​ಗಳ ಬಳಕೆ ಹೆಚ್ಚಾಆಗಿದೆ. ಇದಕ್ಕಾಗಿಯೇ ಕಂಪನಿಗಳು ಹೊಸ ಹೊಸ ಫೀಚರ್ಸ್’​ನೊಂದಿಗೆ ಸ್ಮಾರ್ಟ್’​​ವಾಚ್​ಗಳನ್ನು ಪರಿಚಯಿಸುತ್ತಿದೆ.

ಜಾಗತಿಕ ಸ್ಮಾರ್ಟ್‌’ವಾಚ್ ಮಾರುಕಟ್ಟೆಯಲ್ಲಿ ಭಾರತ ಅತಿದೊಡ್ಡ ವೇದಿಕೆಯಾಗಿ ಹೊರಹೊಮ್ಮಿದೆ ಎಂದು ಕೌಂಟರ್‌’ಪಾಯಿಂಟ್ ವರದಿ ಹೇಳಿದೆ.

ಮೂರನೇ ತ್ರೈಮಾಸಿಕ ವರದಿಯನ್ನು ಆಧರಿಸಿ ಕೌಂಟರ್‌’ಪಾಯಿಂಟ್ ಈ ಹೇಳಿಕೆ ಬಿಡುಗಡೆ ಮಾಡಿದೆ.

ಒಟ್ಟು ಉತ್ಪಾದನೆಯಾದ ಸ್ಮಾರ್ಟ್‌’ವಾಚ್‌ಗಳ ಪೈಕಿ, ಶೇ 30ರಷ್ಟು ಸ್ಮಾರ್ಟ್‌’ವಾಚ್ ಭಾರತದ ಮಾರುಕಟ್ಟೆಯಲ್ಲಿ ಮಾರಾಟವಾಗಿದೆ.ಆ ಪೈಕಿ, ನಾಯ್ಸ್, ಫೈರ್‌–ಬೋಲ್ಟ್, ಬೋಟ್ ಅತಿಹೆಚ್ಚು ಸಂಖ್ಯೆಯಲ್ಲಿ ಮಾರಾಟವಾಗಿದೆ.

ಪ್ರೀಮಿಯಂ ಸ್ಮಾರ್ಟ್‌’ವಾಚ್ ಮಾರುಕಟ್ಟೆಯಲ್ಲಿ ಆ್ಯಪಲ್ ಮುಂದಿದ್ದರೆ, ಸ್ಯಾಮ್‌’ಸಂಗ್ ಎರಡನೇ ಸ್ಥಾನದಲ್ಲಿದೆ. ಉಳಿದಂತೆ, ಹುವೈ, ಅಮೇಝ್‌’ಫಿಟ್ ಮತ್ತು ಗಾರ್ಮಿನ್ ಸ್ಮಾರ್ಟ್‌’ವಾಚ್ ಕೂಡ ಕಳೆದ ವರ್ಷಕ್ಕೆ ಹೋಲಿಸಿದರೆ, ಹೆಚ್ಚಿನ ಮಾರಾಟ ಪ್ರಗತಿ ದಾಖಲಿಸಿದೆ.

ಚೀನಾದಲ್ಲಿನ ಕಠಿಣ ಕೋವಿಡ್ ನಿರ್ಬಂಧಗಳಿಂದಾಗಿ ಎಲೆಕ್ಟ್ರಾನಿಕ್ಸ್ ಮತ್ತು ಗ್ಯಾಜೆಟ್ ಮಾರಾಟದ ಮೇಲೆ ಪರಿಣಾಮ ಬೀರಿದ್ದು, ಭಾರತ ಮೊದಲ ಸ್ಥಾನ ಪಡೆಯಲು ಕಾರಣ ಎಂದು ಕೌಂಟರ್‌’ಪಾಯಿಂಟ್ ಹೇಳಿದೆ.

ಹಿಂದಿನ ಲೇಖನಕೌಟುಂಬಿಕ ಕಲಹಕ್ಕೆ ನೊಂದು 3 ಮಕ್ಕಳಿಗೆ ವಿಷವುಣಿಸಿ ತಾನು ಆತ್ಮಹತ್ಯೆ ಮಾಡಿಕೊಂಡ ತಾಯಿ
ಮುಂದಿನ ಲೇಖನಸಂಚಾರ ನಿಯಮ ಉಲ್ಲಂಘನೆ: ಮೈಸೂರು ನಗರದಲ್ಲಿ ಒಂದೇ ದಿನ 3.43 ಲಕ್ಷ ರೂ. ದಂಡ ವಸೂಲಿ