ಮನೆ ರಾಜಕೀಯ ಮುಂದಿನ ಬ್ರಿಟನ್ ಪ್ರಧಾನಿಯಾಗಿ ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ?

ಮುಂದಿನ ಬ್ರಿಟನ್ ಪ್ರಧಾನಿಯಾಗಿ ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ?

0

ಲಂಡನ್: ಬ್ರಿಟನ್ ಹಣಕಾಸು ಸಚಿವ ರಿಷಿ ಸುನಕ್ ಅವರು ಪ್ರಧಾನ ಮಂತ್ರಿ ಹುದ್ದೆಗೆ ನಡೆಯುತ್ತಿರುವ ಪೈಪೋಟಿಯಲ್ಲಿ ಭಾರತೀಯ ಮೂಲದ ವ್ಯಕ್ತಿ ಇನ್ಪೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಇತಿಹಾಸ ಸೃಷ್ಟಿಸಲಿದ್ದಾರೆಯೇ ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿವೆ.

ಬ್ರಿಟನ್ ನಲ್ಲಿ ಕೊರೋನಾ ಮೊದಲ ಅಲೆಯ ಲಾಕ್ ಡೌನ್ ಜಾರಿಯಲ್ಲಿದ್ದಾಗ 2020 ಮೇ ನಲ್ಲಿ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ನೀಡಿದ್ದ ಮದ್ಯದ ಪಾರ್ಟಿ ಸದರಿ ವಿವಾದ ಸೃಷ್ಟಿಸಿದೆ. ಕೋವಿಡ್ ನಿಯಮ ಉಲ್ಲಂಘಿಸಿ, ಬೋರಿಸ್ ಜಾನ್ಸನ್ ನೀಡಿದ್ದ ಮದ್ಯ ಪಾರ್ಟಿ ವಿಡಿಯೋವೊಂದು ಇತ್ತೀಚಿಗೆ ಬೆಳಕಿಗೆ ಬರುವ ಮೂಲಕ ವಿರೋಧ ಪಕ್ಷ ಲೇಬರ್ ಪಾರ್ಟಿ, ಸ್ವಂತ ಪಕ್ಷ ಕನ್ಸರ್ವೇಟಿವ್ಸ್ ನಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. 

ಬ್ರಿಟನ್ ಪ್ರಿನ್ಸ್ ಫಿಲಿಪ್ ಅಂತ್ಯಕ್ರಿಯೆ ನಡೆದ ಕಳೆದ ವರ್ಷ ಏಪ್ರಿಲ್ 17 ರ ಮುನ್ನಾ ದಿನ ಡೌನಿಂಗ್ ಸ್ಟ್ರೀಟ್ ನಲ್ಲಿ 30 ಮಂದಿ ಡ್ರಗ್ಸ್ ಹಾಗೂ ಮದ್ಯದ ಪಾರ್ಟಿ ನಡೆಸಿದ್ದರು ಎಂಬ ಆರೋಪ ಬಂದಿದೆ. ಫಿಲಿಪ್ ಅವರ ಪಾರ್ಥಿವ ಶರೀರ ಇನ್ನೂ ಇರುವಾಗಲೇ ಮೋಜಿನ ಪಾರ್ಟಿ ನಡೆಸಿರುವ ಬಗ್ಗೆ ತೀವ್ರ ಆಕ್ಷೇಪಣೆಗಳು ವ್ಯಕ್ತವಾಗಿವೆ.

ಪಾರ್ಟಿ ಗೇವ್ ವಿವಾದದ ಬಗ್ಗೆ ಬೋರಿಸ್ ಬ್ರಿಟಿಷ್ ಸಂಸತ್ತಿನಲ್ಲಿ ಕ್ಷಮೆಯಾಚಿಸಿದ ಹೊರತಾಗಿಯೂ ಪ್ರಧಾನ ಮಂತ್ರಿ ಹುದ್ದೆಯಿಂದ ಕೆಳಗಿಳಿಯಬೇಕು ಎಂಬ ಬೇಡಿಕೆಗಳು ಹೆಚ್ಚುತ್ತಿವೆ. ಬೋರಿಸ್ ಜಾನ್ಸನ್ ರಾಜೀನಾಮೆ ನೀಡುವ ಪರಿಸ್ಥಿತಿ ಬಂದರೆ ಅವರ ಸ್ಥಾನಕ್ಕೆ ಭಾರತೀಯ ಮೂಲದ ರಿಷಿ ಪ್ರಧಾನಿಯಾಗುವ ಸಾಧ್ಯತೆಯನ್ನು ತಳ್ಳಿ ಹಾಕಲು ಸಾಧ್ಯವಿಲ್ಲ ಎಂದು ಬ್ರಿಟಿಷ್ ಮಾಧ್ಯಮ ವರದಿ ಮಾಡಿದೆ.

ಹಣಕಾಸು ಸಚಿವರಾದಾಗಿನಿಂದ ರಿಷಿ ಪ್ರಧಾನಿ ಹುದ್ದೆ ಬಗ್ಗೆ ತೀವ್ರ ಉತ್ಸುಕರಾಗಿದ್ದಾರೆ. ಹಾಗಾಗಿ ಪಾರ್ಟಿಗೇಟ್ ವಿವಾದದಿಂದ ದೂರ ಇರಬೇಕೆಂಬ ಉದ್ದೇಶದಿಂದ ಹೌಸ್ ಗೆ ಹಾಜರಾಗಲಿಲ್ಲ ಎಂದು ಬೋರಿಸ್ ಆಪ್ತರು ಹೇಳುತ್ತಾರೆ. ಈ ಹೇಳಿಕೆಯನ್ನು ತಳ್ಳಿ ಹಾಕಿರುವ ರಿಷಿ, ತಮ್ಮ ಇಲಾಖೆಗೆ ಸಂಬಂಧಿಸಿದ ಕೆಲಸದಲ್ಲಿ ನಿರತರಾಗಿರುವ ಕಾರಣ ಹೌಸ್ ಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಹಿಂದಿನ ಲೇಖನ74ನೇ ಸೇನಾ ದಿನಾಚರಣೆ: ವೀರ ಯೋಧರನ್ನು ಸ್ಮರಿಸಿದ ನಾಯಕರು
ಮುಂದಿನ ಲೇಖನವಿಶ್ವ ವಿಖ್ಯಾತ ಜಲ್ಲಿಕಟ್ಟು ಸ್ಪರ್ಧೆ ಆರಂಭ