ನೂರಾರು ಎಕರೆ ಜಮೀನನ್ನು ಹಾಗೂ ಬ್ಯಾಂಕಿನಲ್ಲಿ ಸಾಕಷ್ಟು ಹಣವನ್ನು ಹೊಂದಿದ್ದ ಒಬ್ಬ ಶ್ರೀಮಂತ ರೈತನೊಬ್ಬ ನಿದ್ದನು.ಆತನು ತನ್ನ ಜೀವಿತ ಕಾಲದಲ್ಲಿ ದೀರ್ಘ ಪರಿಶ್ರಮ ಹಾಗೂ ದೃಢ ನಿರ್ಧಾರದಿಂದ ಆ ಅಪಾರ ಸಂಪತ್ತನ್ನು ಅವನು ಗಳಿಸಿದ್ದನು ಹಲವಾರು ಜನರಿಗೆ ಪ್ರೇರಣೆಯಾಗಿದ್ದನು ಹೆಸರುವಾಸಿಯಾಗಿದ್ದನು.ಅವನ ಕುರಿತು ಒಂದು ಲೇಖನವನ್ನು ಬರೆಯಲು ಒಬ್ಬ ವರದಿಗಾರ ಬಂಧನ “ಸರ್ ನಿಮ್ಮ ಹೆಸರು ಹಾಗೂ ಖ್ಯಾತಿಯ ಹಿಂದಿನ ಗುಟ್ಟನ್ನು ತಿಳಿಯಲು ಇಷ್ಟಪಡುತ್ತೇನೆ ಮೊದಲಿಗೆ ಇಷ್ಟೊಂದು ಹಣವನ್ನು ನೀವು ಹೇಗೆ ಸಂಪಾದಿಸಿದರೆಂದು ನಮ್ಮ ಓದುಗರಿಗೆ ತಿಳಿಸಿ? ” ಎಂದು ಕೇಳಿದನು.
ಕುತೂಹಲದಿಂದ ತನ್ನ ಉತ್ತರಕ್ಕಾಗಿ ಕಾಯುತ್ತಿದ್ದ ವರದಿಗಾರನಿಗೆ ವಿವರಿಸಲು ರೈತನಲ್ಲಿ ಒಂದು ವಾಕ್ಯಕ್ಕಿಂತಲೂ ಹೆಚ್ಚು ಇರಲಿಲ್ಲ.
ಪ್ರಶ್ನೆಗಳು
1. ರೈತನ ಉತ್ತರವೇನಾಗಿತ್ತು
2. ಈ ಕಥೆಯ ನೀತಿ ಏನು
ಉತ್ತರಗಳು
1. “ಇದು ನಿಜಕ್ಕೂ ಬಹಳ ದೀರ್ಘ ಕಥೆ ಮೊದಲು ನಾವು ಸ್ವಲ್ಪ ವಿಶ್ರಮಿಸೋಣ.ದೀಪವನ್ನುೇಕೆ ನೀವು ಆರಿಸಬಾರದು ಸ್ವಲ್ಪ ವಿದ್ಯುತ್ತನ್ನು ಉಳಿಸಬಹುದು.”
2. ಪ್ರಯತ್ನ ಹಾಗೂ ಮತ್ತು ಪರಿಶ್ರಮದಿಂದ ಸಂಪತ್ತನ್ನು ಗಳಿಸುವವರು ತಮ್ಮ ಸಂಪತ್ತಿನ ಬಗ್ಗೆ ಬಹಳ ಕಾಳಜಿ ವಹಿಸುತ್ತಾರೆ.ಸಂಪಾದಿಸುವ ಹಣವನ್ನು ಕೂಡಿಡುತ್ತಾರೆ.ಉಳಿತಾಯದ ಬಗ್ಗೆ ಹೆಚ್ಚು ಜಾಗೃತರಾಗಿರುತ್ತಾರೆ.ಎಂದೂ ದಂದುವೆಚ್ಚ ಮಾಡುವುದಿಲ್ಲ. ಉಳಿಸಿದ್ದನ್ನು ಮತ್ತೆ ತಮ್ಮ ಬಿಸಿನೆಸ್ ನಲ್ಲಿ ಹಾಕುತ್ತಾರೆ.ಹೀಗಾಗಿ ಅವರ ಹಣ ಹೆಚ್ಚಾಗುತ್ತಾ ಹೋಗುತ್ತದೆ.