ಮನೆ ಸಾಹಿತ್ಯ ಸ್ಪೂರ್ತಿದಾಯಕ ಕಥೆಗಳು

ಸ್ಪೂರ್ತಿದಾಯಕ ಕಥೆಗಳು

0

ಹತ್ತು ವರ್ಷದ ಹುಡುಗನೊಬ್ಬ ಒಬ್ಬ ಹೆಸರಾಂತ ಸಂಗೀತಗಾರನಾಗಲು ಆಶಿಸಿದನು. ಅವನು ಒಮ್ಮೆ ಧ್ವನಿ ಪರೀಕ್ಷೆಗೆ ಹೋದನು. ಅವನನ್ನು ಕೂಡಲೇ ತಿರಸ್ಕರಿಸಲಾಯಿತು. ಅವನ ಧ್ವನಿಯು ಗೋಡೆಗೆ ಮೊಳೆ ಹೊಡೆಯುವಂತಿದೆ ಎಂದರು.

Join Our Whatsapp Group

ಹಳ್ಳಿಯ ಹೆಂಗಸಾದ ಅವನ ತಾಯಿ ಮಗನ ಪ್ರತಿಭೆಯನ್ನು ಅರಿತಿದ್ದಳು. ಅವಳು ಅವನಿಗೆ ತನ್ನ ಗುರಿಯನ್ನು ಸಾಧಿಸಲು ನಿರಂತರ ಪ್ರಯತ್ನ ಮಾಡೆಂದು ಹೇಳಿದಳು. ಅವಳ ನಿರಂತರ ಪ್ರೋತ್ಸಾಹದಿಂದಾಗಿ ಮುಂದೊಮ್ಮೆ ಆ ಚಿಕ್ಕ ಹುಡುಗ ತನ್ನ ಸುಮಧುರ ಧ್ವನಿಯಿಂದ ಇಡಿ ವಿಶ್ವವನ್ನು ಗೆದ್ದ. ಅವನೇ ಇಡಿ ವಿಶ್ವದ ಅತ್ಯಂತ ಪ್ರಖ್ಯಾತ ಗಾಯಕ ಎನ್ನಿಕೊ ಕರುಸೊ.

 ಪ್ರಶ್ನೆ

1 . ಈ ಕಥೆಯ ನೀತಿಯೇನು?

 ಉತ್ತರ

1. ಪೋಷಕರು ಮಕ್ಕಳ ಬೆಳವಣಿಗೆಯಲ್ಲಿ ಮಹತ್ತರವಾದ ಪಾತ್ರ ವಹಿಸುತ್ತಾರೆ. ಅವರ ಪ್ರತಿಯೊಂದು ಮಾತು ಮಕ್ಕಳ ಮನಸ್ಸಿನಲ್ಲಿ ಅಳಿಸಲಾಗದ ಗುರುತನ್ನು ಉಂಟುಮಾಡುತ್ತದೆ ಈ ಸಂದರ್ಭದಲ್ಲಿ ಕೆಳಕಂಡ ಪದ್ಯವನ್ನು ಉಲ್ಲೇಖಿಸುವುದು ಸೂಕ್ತ

* “ಮಗುವು ಟೀಕೆಯೊಂದಿಗೆ ಬೆಳೆದರೆ ಖಂಡಿಸುವುದನ್ನು ಕಲಿಯುತ್ತದೆ.

ಮಗುವು ಹಗೆತನದ ವಾತಾವರಣದಲ್ಲಿ ಬೆಳೆದರೆ ಜಗಳವಾಡುವುದನ್ನು ಕಲಿಯುತ್ತದೆ.

ಮಗುವು ಅಪಹಾಸ್ಯಕ್ಕೆ ಒಳಗಾಗಿ ಬೆಳೆದರೆ ಸಂಕೋಚವನ್ನು ಕಲಿಯುತ್ತದೆ.

    ಮಗುವು ಅಪಮಾನದ ವಾತಾವರಣದಲ್ಲಿ ಬೆಳೆದರೆ ತಪ್ಪಿತಸ್ಯಭಾವವನ್ನು

ಮಗುವು ಸೈರಣೆಯಿರುವ ವಾತಾವರಣದಲ್ಲಿ ಬೆಳೆದರೆ ತಾಳ್ಮೆಯನ್ನು ಕಲಿಯುತ್ತವೆ.

ಮಗುವು ಪ್ರೋತ್ಸಾಹದ ವಾತಾವರಣದಲ್ಲಿ ಬೆಳೆದರೆ ಆತ್ಮವಿಶ್ವಾಸವನ್ನು ಕಲಿಯುತ್ತದೆ.

ಮಗುವು ಪ್ರಶಂಸೆಯಿರುವ ವಾತಾವರಣದಲ್ಲಿ ಬೆಳೆದರೆ ಮೆಚ್ಚುವುದನ್ನು ಕಲಿಯುತ್ತದೆ.

ಮಗುವು ನ್ಯಾಯ ನಡವಳಿಕೆಯ ವಾತಾವರಣದಲ್ಲಿ ಬೆಳೆದರೆ ನ್ಯಾಯವನ್ನು ಕಲಿಯುತ್ತದೆ.

ಮಗುವು ಸುರಕ್ಷಿತವಾದ ವಾತಾವರಣದಲ್ಲಿ ಬೆಳೆದರೆ ನಂಬಿಕೆಯನ್ನು ಕಲಿಯುತ್ತದೆ.

ಮಗುವು ಅಂಗೀಕಾರದ ವಾತಾವರಣದಲ್ಲಿ ಬೆಳೆದರೆ ತನ್ನನ್ನು ಇಷ್ಟಪಡುವುದನ್ನು ಕಲಿಯುತ್ತದೆ.

ಮಗುವು ಒಪ್ಪಿಗೆ ಮತ್ತು ಸ್ನೇಹದ ವಾತಾವರಣದಲ್ಲಿ ಬೆಳೆದರೆ ವಿಶ್ವದಲ್ಲಿ ಪ್ರೇಮವನ್ನು ಕಾಣುತ್ತದೆ.