ಬೆಂಗಳೂರು: ಕಳೆದ ವಿಧಾನ ಸಭೆ ಅಧಿವೇಶನ ಸಮಯದಲ್ಲಿ ಬ್ಯಾಗೇಜ್ ಸ್ಕ್ಯಾನರ್ ಗಳಿರಲಿಲ್ಲ. ಹಾಗಾಗಿ ಇಂದು 2 ರಿಂದ 3 ಕೋಟಿ ರೂ. ಹಣ ಖರ್ಚು ಮಾಡಿ ನಾಲ್ಕು ಗೇಟ್ಗಳಲ್ಲಿ ಹೊಸ ಬ್ಯಾಗೇಜ್ ಸ್ಕ್ಯಾನರ್ ಅಳವಡಿಸಿದ್ದೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ವಿಧಾನ ಸೌಧಕ್ಕೆ ಬರುಬೇಕು ಅಂದರೆ ಇನ್ನು ಮುಂದೆ ಕ್ಯೂಆರ್ ಕೋಡ್ ಇರುವ ಪಾಸ್ಗಳನ್ನು ನೀಡಲಾಗುತ್ತದೆ. ವಿಧಾನ ಸೌಧದಲ್ಲಿ ಯಾರಾದರೂ ಲೋಹದ ವಸ್ತುಗಳನ್ನು ತಗೊಂಡು ಹೋಗುತ್ತಿದ್ದರೆ ಈ ಬ್ಯಾಗೇಜ್ ಸ್ಕ್ಯಾನರ್ನಲ್ಲಿ ಗೊತ್ತಾಗುತದೆ. ಮೂರು ವರ್ಷಗಳಿಂದ ಈ ಬ್ಯಾಗೇಜ್ ಸ್ಕ್ಯಾನರ್ ಕೆಟ್ಟಿದ್ದವು. ಈಗ ಸಿಎಂ ಸಿದ್ದರಾಮಯ್ಯ ಅವರು ಹಣ ಬೀಡುಗಡೆ ಮಾಡಿದ ಮೇಲೆ ಈ ಬ್ಯಾಗೇಜ್ ಸ್ಕ್ಯಾನರ್ ತೆಗೆದುಕೊಂಡು ಬಂದಿದ್ದೇವೆ ಎಂದರು.
ವಿಧಾನ ಸೌಧದಲ್ಲಿ ಸೆಕ್ಯೂರಿಟಿ ಇನ್ನು ಜಾಸ್ತಿ ಮಾಡುತ್ತೇವೆ. ಈ ಬಾರಿಯ ಅಧಿವೇಶನದಲ್ಲಿ ನಾವು ಹೆಚ್ಚು ಭದ್ರತೆ ಕೈಗೊಳ್ಳುತ್ತೇವೆ. ಇನ್ನು ಮುಂದೆ ವಿಧಾನ ಸೌಧ ಪ್ರವೇಶ ಮಾಡಲು ಬೇಕಾಬಿಟ್ಟಿ ಪಾಸ್ಗಳನ್ನು ನೀಡುವುದಿಲ್ಲ ಎಂದು ಹೇಳಿದ್ದಾರೆ.
ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ವಿಚಾರವಾಗಿ ಮಾತನಾಡಿದ ಅವರು, ಯಾವ ವಿಚಾರನೋ ಗೊತ್ತಿಲ್ಲ. ಅಜೆಂಡಾ ಇನ್ನು ಸಿಕ್ಕಿಲ್ಲ. ಮಳೆ ಪ್ರಾರಂಭವಾಗಿದೆ. ಆದರೆ ಬರಗಾಲದ ಪರಿಣಾಮ ಇನ್ನು ಕಡಿಮೆಯಾಗಿಲ್ಲ. ಈ ವಿಚಾರವೂ ಸಿಎಂ ಚರ್ಚೆ ಮಾಡುತ್ತಾರೆ ಅಂದು ಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.