ಮನೆ ಕ್ರೀಡೆ ಇಟಾಲಿಯನ್‌ ಓಪನ್‌ ಪಂದ್ಯಾವಳಿ: ಬೋಪಣ್ಣ ಜೋಡಿಗೆ ಸೋಲು

ಇಟಾಲಿಯನ್‌ ಓಪನ್‌ ಪಂದ್ಯಾವಳಿ: ಬೋಪಣ್ಣ ಜೋಡಿಗೆ ಸೋಲು

0

ರೋಮ್‌: ಇಟಾಲಿಯನ್‌ ಓಪನ್‌ ಪಂದ್ಯಾವಳಿಯ ಪುರುಷರ ಡಬಲ್ಸ್‌ನಲ್ಲಿ ರೋಹನ್‌ ಬೋಪಣ್ಣ-ಮ್ಯಾಥ್ಯೂ ಎಬ್ಡೆನ್‌ ಪ್ರಿ-ಕ್ವಾರ್ಟರ್‌ ಫೈನಲ್‌ನಲ್ಲಿ ಪರಾಭವಗೊಂಡಿದ್ದಾರೆ.

Join Our Whatsapp Group

ಆತಿಥೇಯ ಇಟಲಿಯ ಸಿಮೋನ್‌ ಬೊಲೆಲ್ಲಿ-ಆ್ಯಂಡ್ರಿಯ ವಾವಸೋರಿ ಸೇರಿಕೊಂಡು ಇಂಡೋ-ಆಸ್ಟ್ರೇಲಿಯನ್‌ ಜೋಡಿಗೆ 6-2, 6-4 ಅಂತರದ ಸೋಲುಣಿಸಿದರು.

ದ್ವಿತೀಯ ಶ್ರೇಯಾಂಕದ ಬೋಪಣ್ಣ- ಎಬ್ಡೆನ್‌ ಆರಂಭಿಕ ಸುತ್ತಿನಲ್ಲಿ ವೈಲ್ಡ್‌ಕಾರ್ಡ್‌ ಮೂಲಕ ಪ್ರವೇಶ ಪಡೆದ ಮ್ಯಾಟಿಯೊ ಅರ್ನಾಲ್ಡಿ-ಫ್ರಾನ್ಸೆಸ್ಕೊ ಪಸ್ಸಾರೊ ವಿರುದ್ಧ ಜಯ ಸಾಧಿಸಿದ್ದರು. ಆದರೆ ಸ್ಥಳೀಯ ಜೋಡಿ ವಿರುದ್ಧ ಇವರ ಆಟ ನಡೆಯಲಿಲ್ಲ. ಒಂದು ಗಂಟೆ, 13 ನಿಮಿಷಗಳ ಕಾಲ ಹೋರಾಡಿ ನೇರ ಸೆಟ್‌ಗಳ ಸೋಲನುಭವಿಸಿದರು.

ಹಿಂದಿನ ಲೇಖನಹೇಮಂತ್ ಗೌಡ ಹತ್ಯೆ ಪ್ರಕರಣ: ಪೊಲೀಸರ ಮೇಲೆ ಹಲ್ಲೆ- ಗುಂಡು ಹಾರಿಸಿ ಆರೋಪಿಯ ಬಂಧನ
ಮುಂದಿನ ಲೇಖನವಿಧಾನಸೌಧದ 4 ಗೇಟ್​​​ ಗಳಲ್ಲಿ ಬ್ಯಾಗೇಜ್ ಸ್ಕ್ಯಾನರ್ ಅಳವಡಿಕೆ: ಜಿ. ಪರಮೇಶ್ವರ್​