ಬೆಂಗಳೂರು: ರಾಜ್ಯಾದ್ಯಂತ ಹಲಾಲ್ ಬಾಯ್ಕಟ್ ಅಭಿಯಾನ ತೀವ್ರಗೊಂಡಿದ್ದು, ಹಲಾಲ್ ಮಾಂಸ ಖರೀದಿಸದಂತೆ ಹಿಂದೂಗಳ ಮನವೊಲಿಸಲು ಭಜರಂಗದಳದ ಕಾರ್ಯಕರ್ತರು ಪ್ರಯತ್ನಿಸುತ್ತಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಯುಗಾದಿ ಕಳೆದ ಮರುದಿನ ಹೊಸ ತೊಡಕಿಗೆ ಹಲಾಲ್ ಮಾಂಸವನ್ನು ಖರೀದಿಸದೆ ಬಹಿಷ್ಕಾರ ಹಾಕಿ ಕೇವಲ ಜಟ್ಕಾ ಮಾಂಸ ಖರೀದಿಸಬೇಕೆಂದು ಎಂದು ಫ್ಲೆಕ್ಸ್, ಕರಪತ್ರಗಳ ಮೂಲಕ ಅಂಗಡಿ-ಮನೆಗಳಿಗೆ, ಬೀದಿಗಳಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರಚಾರ ನಡೆಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಕೂಡ ಹಲಾಲ್ ಬಾಯ್ಕಟ್ ಅಭಿಯಾನ ಆರಂಭವಾಗಿದೆ. ಹಲಾಲ್ ವಾರ್ ಬೆನ್ನಲ್ಲೇ ಮುಸ್ಲಿಂ ಅಂಗಡಿಗಳಿಂದ ಹಿಂದೂಗಳು ಯಾವುದನ್ನೂ ಖರೀದಿಸಬಾರದು ಎಂದು ಮತ್ತಷ್ಟು ನಿರ್ಬಂಧ ಬೆಂಕಿಯಂತೆ ವ್ಯಾಪಿಸುತ್ತಿದೆ.
ಬೆಂಗಳೂರಿನಲ್ಲಿ ಹಲಾಲ್ ವಿರೋಧಿಸಿ, ಜಟ್ಕಾ ಜಮಾಯಿಸಿ ಎಂಬ ಕರಪತ್ರಗಳು, ಅಭಿಯಾನ ರಾರಾಜಿಸುತ್ತಿದೆ. ಆನ್ ಲೈನ್ ನಲ್ಲಿಯೂ ಹಲಾಲ್ ಕಟ್ ಮಾಂಸ ಮಾರಾಟ ಮಾಡಬಾರದೆಂಬ ಒತ್ತಡ ಕೇಳಿಬರುತ್ತಿದೆ.