ಹಾಸನ : ನಗರದ ಪೆನ್ಷನ್‍ಮೊಹಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, 79 ಪ್ರಕರಣಗಳಿರುವ ಅಂತರರಾಜ್ಯ ಖತರ್ನಾಕ್ ಕಳ್ಳನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬೆಂಗಳೂರಿನ ವಿನಾಯಕ ನಗರದ ಗೆದ್ದಲಹಳ್ಳಿ ಮೂಲದ ಸೋಹಿಲ್‍ಖಾನ್ (38) ಎಂದು ಗುರುತಿಸಲಾಗಿದೆ.
ಈತ ಕರ್ನಾಟಕದಲ್ಲಿ 27 ಪ್ರಕರಣ, ಆಂಧ್ರಪ್ರದೇಶದಲ್ಲಿ 52 ಪ್ರಕರಣದಲ್ಲಿ ಭಾಗಿಯಾಗಿದ್ದ. ಉಡುಪಿ ಜಿಲ್ಲೆಯಲ್ಲಿ ನಡೆದಿದ್ದ ಒಂದು ಪ್ರಕರಣದಲ್ಲಿ ಆರೋಪಿ ಎಂಬುದು ಸಾಬೀತಾಗಿತ್ತು. ಸೋಹಿಲ್‍ಖಾನ್ ಪೆನ್ಷನ್‍ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ಕಡೆಗಳಲ್ಲಿ ಕಳ್ಳತನ ಮಾಡಿದ್ದ.
ಈ ಬಗ್ಗೆ ಶಾರದ, ಪ್ರೇಮಾ ಎಂಬುವವರು ದೂರು ನೀಡಿದ್ದರು. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, 250 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದಾರೆ. ಪೆನ್ಷನ್‍ಮೊಹಲ್ಲಾ ಪಿಐ ಸ್ವಾಮಿನಾಥ್, ಪಿಎಸ್‍ಐ ರವಿಶಂಕರ್, ಪ್ರಸನ್ನ ಕುಮಾರ್, ದಿಲೀಪ್, ಲೋಕೇಶ್, ಪುನೀತ್, ಹನುಮೇಶ ನಾಯಕ್ ಅವರಿದ್ದ ತಂಡ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು.















