ಮನೆ ಅಪರಾಧ ಮೈಸೂರು: ಮನೆ ಮುಂದೆ ನಿಲ್ಲಿಸಿದ್ದ ಕಾರಿನಿಂದ ಎಲ್ಇಡಿ ಟಿವಿ, ಸ್ಪೀಕರ್‌ ಕಳ್ಳತನ

ಮೈಸೂರು: ಮನೆ ಮುಂದೆ ನಿಲ್ಲಿಸಿದ್ದ ಕಾರಿನಿಂದ ಎಲ್ಇಡಿ ಟಿವಿ, ಸ್ಪೀಕರ್‌ ಕಳ್ಳತನ

0

ಮೈಸೂರು(Mysuru) : ಸಾಂಸ್ಕೃತಿಕ ನಗರಿಯಲ್ಲಿ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಮನೆಮುಂದೆ ನಿಲ್ಲಿಸಿರುವ ವಾಹನಗಳಲ್ಲೂ ಕಳ್ಳರು ತಮ್ಮ ಕೈಚಳಕ ತೋರುತ್ತಿದ್ದಾರೆ.

ನಗರದ ಒಂಟಿಕೊಪ್ಪಲಿನಲ್ಲಿ ನಕಲಿ ಕೀ ಬಳಸಿ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಸಾಮಗ್ರಿ ಕದ್ದೊಯ್ದ ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಒಂಟಿಕೊಪ್ಪಲಿನ ಗೋವಿಂದಪ್ಪ ಕಾಂಪ್ಲೆಕ್ಸ್ ಬಳಿ ದೀಪಕ್ ಎಂಬುವರು ತಮ್ಮ ಮನೆ ಮುಂದೆ ಕಾರು ನಿಲ್ಲಿಸಿದರು. ರಾತ್ರಿ ಹೊತ್ತಿನಲ್ಲಿ ಕಳ್ಳನೊಬ್ಬ ಕಾರಿನ ಡೋರ್ ತೆಗೆದು ಒಳನುಗ್ಗಿದ್ದಾನೆ. ಬಳಿಕ ಎಲ್ಇಡಿ ಟಿವಿ, ಸ್ಪೀಕರ್‌ಗಳನ್ನ ಕದ್ದೊಯ್ದಿದ್ದಾನೆ. ಕಳ್ಳತನ ಕೃತ್ಯವೆಲ್ಲವೂ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದರ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮತ್ತೊಂದೆಡೆ ಜಯಲಕ್ಷ್ಮೀಪುರಂನಲ್ಲಿ ಸಂಜೆ ವೇಳೆ ರಸ್ತೆ ಬದಿ ಪಾರ್ಕ್ ಮಾಡಿದ್ದ ಬೈಕ್ ಕಳ್ಳತನವಾಗಿದೆ. ಬೈಕ್ ಕಳ್ಳತನದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಜಯಲಕ್ಷ್ಮೀಪುರಂ ಪೊಲೀಸ್ ಠಾಣೆ ಮತ್ತು ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹಿಂದಿನ ಲೇಖನಪೋಷಕರ ಬಗ್ಗೆ ನಿರ್ಲಕ್ಷ್ಯ: ಮಕ್ಕಳೊಂದಿಗಿನ ಆಸ್ತಿ ಇತ್ಯರ್ಥ ಕರಾರು ರದ್ದುಗೊಳಿಸಲು ಮದ್ರಾಸ್ ಹೈಕೋರ್ಟ್ ಅನುಮತಿ
ಮುಂದಿನ ಲೇಖನಚಿತ್ರದುರ್ಗ ಪ್ರವೇಶಿಸಿದ ಭಾರತ್ ಜೋಡೋ ಯಾತ್ರೆ