ಮನೆ ರಾಜ್ಯ ಮಳೆ ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಡಿಸಿಗಳಿಗೆ ಸೂಚನೆ: ಸಿಎಂ

ಮಳೆ ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಡಿಸಿಗಳಿಗೆ ಸೂಚನೆ: ಸಿಎಂ

0

ಬೆಂಗಳೂರು(Bengaluru): ಮಳೆ ಎದುರಿಸಲು ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದು, ಕಾರವಾರ, ಉಡುಪಿಗಳಲ್ಲಿ ಎಸ್‌ಡಿಆರ್‌ಎಫ್ ತಂಡಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ‌ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ಭೂಕುಸಿತ ಆಗುತ್ತಿರುವ ಕಡೆಗಳಲ್ಲಿ ಜನವಸತಿ ಇದ್ದರೆ ಸ್ಥಳಾಂತರಕ್ಕೆ ಸೂಚಿಸಲಾಗಿದೆ. ಡಿಸಿಗಳ ಖಾತೆಯಲ್ಲಿ ಹಣ ಇದೆ. ಕಾರವಾರ, ಮಂಗಳೂರುಗಳಲ್ಲಿ ಕಡಲ್ಕೊರೆತ ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅಗತ್ಯ ಕ್ರಮವಹಿಸಲು ಮತ್ತು ಆಯಾ ಸ್ಥಳಕ್ಕೆ ಹೋಗಲು ಡಿಸಿಗಳಿಗೆ ಸೂಚಿಸಿದ್ದೇನೆ. ಈಗಾಗಲೇ ಕಂದಾಯ ಸಚಿವರು ಕೊಡಗಿನಲ್ಲಿದ್ದಾರೆ. ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹವಾನಾನದ ಪ್ರಕಾರ ಇನ್ನೂ ಮೂರ್ನಾಲ್ಕು ದಿನ ಮಳೆ ಆಗಲಿದೆ ಎಂದರು.

ಕೆರೂರು ಗಲಭೆ ನಿಯಂತ್ರಣ: ಬಾದಾಮಿಯ ಕೆರೂರಿನಲ್ಲಿ ಕೋಮುಗಲಭೆ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ವೈಯಕ್ತಿಕ ಕಾರಣಕ್ಕೆ ಗಲಾಟೆ ನಡೆದಿದೆ. ಕೂಡಲೇ ಪೊಲೀಸರು ಗಲಭೆ ನಿಯಂತ್ರಿಸಿದ್ದಾರೆ. ಕೆಲವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಕೆಲವರ ಬಂಧನವೂ ಆಗಿದೆ. ಸ್ಥಳದಲ್ಲಿ 144 ಸೆಕ್ಷನ್ ಜಾರಿ‌ ಮಾಡಲಾಗಿದೆ. ಎರಡೂ ಸಮುದಾಯಗಳಿಗೂ ಶಾಂತವಾಗಿರಲು ಸೂಚಿಸಲಾಗಿದೆ. ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ  ಎಂದು ಹೇಳಿದರು.

ಹಿಂದಿನ ಲೇಖನವೈದ್ಯೆ ಗುರುಪ್ರೀತ್ ಕೌರ್’ನೊಂದಿಗೆ ಪಂಜಾಬ್ ಸಿಎಂ ಭಗವಂತ್ ಮಾನ್ ವಿವಾಹ
ಮುಂದಿನ ಲೇಖನನ್ಯಾಯಸಮ್ಮತ ಬೇಡಿಕೆ ಈಡೇರಿಸಲು ಸಿದ್ಧ: ಸಚಿವ ಸುಧಾಕರ್