ಮನೆ ರಾಜಕೀಯ ಸಂತೋಷ್ ಆತ್ಮಹತ್ಯೆ ಪ್ರಕರಣದ ಸೂಕ್ತ ತನಿಖೆ ನಡೆಸಿ: ಹೆಚ್.ವಿಶ್ವನಾಥ್

ಸಂತೋಷ್ ಆತ್ಮಹತ್ಯೆ ಪ್ರಕರಣದ ಸೂಕ್ತ ತನಿಖೆ ನಡೆಸಿ: ಹೆಚ್.ವಿಶ್ವನಾಥ್

0

ಮೈಸೂರು: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಸರ್ಕಾರಕ್ಕೆ ಬಿಜೆಪಿ ಎಂಎಲ್ ಸಿ ಹೆಚ್.ವಿಶ್ವನಾಥ್ ಆಗ್ರಹಿಸಿದರು.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಅವರು,  ಈಗಾಗಲೇ ರಾಜ್ಯದಲ್ಲಿ ವ್ಯಾಪಕವಾಗಿ ಸಂತೋಷ್ ಆತ್ಮಹತ್ಯೆ ಪ್ರಕರಣ ಮಾಧ್ಯಮದಲ್ಲಿ ಚರ್ಚೆ ಆಗ್ತಿದೆ. ಆಪೋಸಿಷನ್ ಪಾರ್ಟಿ ಕೂಡ ವ್ಯಾಪಕ ಚರ್ಚೆ ಮಾಡ್ತಿದೆ. ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆ ಬೇರೆ ಬೇರೆ ವಿಚಾರ ಇದೆ. ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸಬೇಕು. ಸತ್ಯಾಸತ್ಯತೆ ತಿಳಿದು ಬರಬೇಕಿದೆ ಎಂದರು.

ವ್ಯವಸ್ಥೆಯಲ್ಲಿ ಸರ್ಕಾರ ಇದ್ದಾಗ ಒಂತರ, ಆಪೋಸೀಷನ್ ಇದ್ದಾಗ ಒಂದೊಂದು ರೀತಿ ಮಾತಾಡುತ್ತೇವೆ.  ಟ್ರಾಕ್ಟರ್ ವಿಚಾರ ದೆಹಲಿಯಿಂದ, ಇಲ್ಲಿಯವರೆಗೂ ಚರ್ಚೆಯಾಗಿದೆ. ಆತ್ಮಹತ್ಯೆ ಬಗ್ಗೆ ಸಾರ್ವಜನಿಕರಿಗೆ ಅನುಮಾನ ತರಿಸುವಂತೆ ಮಾಡಿದೆ. ಯಾವುದೇ ಮಂತ್ರಿಗಳ ನೈತಿಕ ವಿಚಾರ ಬಂದಾಗ, ಅವರು ನಿರ್ಧಾರ ತೆಗೆದುಕೊಳ್ಳಬಹುದು. ಅವರ ನೈತಿಕ ಹೊಣೆಗಾರಿಕೆ ಬರಲಿದೆ. ನೈತಿಕತೆ ವಿಚಾರದಲ್ಲಿ ಮೂರು ಪಕ್ಷಗಳು ಅಲ್ಲಿಗೆ ಬಂದು ನಿಂತಿವೆ. 10% ನವರು, 40% ಯಾಕೆ ತಗೋತಿದ್ದೀರಾ ಅಂತಿದ್ದಾರೆ. ಎಲ್ಲರೂ ಕೂಡ ಅವರೇ ಎಂದು ಹೆಚ್. ವಿಶ್ವನಾಥ್ ಟೀಕಿಸಿದರು.