ಮನೆ ಶಿಕ್ಷಣ ಅರ್ಜಿ ಆಹ್ವಾನ

ಅರ್ಜಿ ಆಹ್ವಾನ

0

ಮಂಡ್ಯ: ಯು.ಪಿ.ಎಸ್.ಸಿ. ನಾಗರೀಕ ಸೇವೆ ಮತ್ತು ಬ್ಯಾಂಕಿAಗ್ ಪಿ.ಒ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2025-26ನೇ ಸಾಲಿನಲ್ಲಿ ಉಚಿತ ಪರೀಕ್ಷಾ ಪೂರ್ವ ತರಬೇತಿ ನೀಡಲಾಗುತ್ತಿದೆ.


ತರಬೇತಿ ಪಡೆಯಲು ಆಸಕ್ತ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ) ಗಳಿಗೆ ಸೇರಿದ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಜೂನ್ 15 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಅಂಗೀಕೃತ ವಿಶ್ವ ವಿದ್ಯಾನಿಲಯದಿಂದ ಯಾವುದಾದರೊಂದು ಪದವಿ ಪಡೆದಿರಬೇಕು. ಅಭ್ಯರ್ಥಿಯ ಮತ್ತು ಕುಟುಂಬದ ಒಟ್ಟು ವಾರ್ಷಿಕ ಆದಾಯಮಿತಿ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ) ಗಳಿಗೆ ರೂ.5.00 ಲಕ್ಷ ಹೊಂದಿರಬೇಕು.

ಅಭ್ಯರ್ಥಿಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ರವರು ನಡೆಸುವ ಸಾಮಾನ್ಯ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳು ಪ್ರವರ್ಗ ಹಾಗೂ ಮೀಸಲಾತಿ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಪರೀಕ್ಷಾ ಕೇಂದ್ರಗಳು ದಿನಾಂಕ ಮತ್ತು ಸಮಯವನ್ನು ನಂತರದ ದಿನಗಳಲ್ಲಿ ಇಲಾಖಾ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು. ಹೆಚ್ಚಿನ ವಿವರಗಳಿಗಾಗಿ ಇಲಾಖಾ ವೆಬ್ ಸೈಟ್  sevasindhuservices.karnataka.gov.in   ,     http://bewd.karnataka.gov.in    ಮತ್ತು ದೂ.ಸಂ:8050370006 ಅನ್ನು ಸಂಪರ್ಕಿಸಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.