ಮನೆ ಉದ್ಯೋಗ ಕಾರ್ಮಿಕರ ರಾಜ್ಯ ವಿಮಾ ನಿಗಮದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕಾರ್ಮಿಕರ ರಾಜ್ಯ ವಿಮಾ ನಿಗಮದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

0

ಕಾರ್ಮಿಕರ ರಾಜ್ಯ ವಿಮಾ ನಿಗಮದಲ್ಲಿ (Employees State Insurance Corporation) ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. 32 ಅಸೋಸಿಯೇಟ್ ಪ್ರೊಫೆಸರ್ (Professor), ಅಸಿಸ್ಟೆಂಟ್ ಪ್ರೊಫೆಸರ್ (Assistant Professor) ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಇಎಸ್​ಐಸಿ ಮೆಡಿಕಲ್​ ಕಾಲೇಜುಗಳಿಗೆ ಈ ಹುದ್ದೆ ಭರ್ತಿ ಕ್ರಮ ನಡೆಯಲಿದೆ.

ಆಸಕ್ತರು ನೇರ ಸಂದರ್ಶನದಲ್ಲಿ (Walk-in-interview) ಭಾಗಿಯಾಗಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್​ 30  ಕೊನೆಯ ದಿನ. ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ ಜೂನ್​ 28ರಂದು ನೇರ ಸಂದರ್ಶನ ನಡೆಯಲಿದೆ. ಸಹಾಯಕ ಪ್ರಾಧ್ಯಾಪಕರು 29 ಮತ್ತು 30 ಜೂನ್ ರಂದು ಎರಡು ದಿನ ನೇರ ಸಂದರ್ಶನ ನಡೆಯಲಿದೆ.

ನ್ಯೂ ಅಕಾಡೆಮಿಕ್​ ಬ್ಲಾಕ್​, ಇಎಸ್​ಐಸಿ ಮೆಡಿಕಲ್​ ಕಾಲೇಜ್​, ಪಿಜಿಐಎಂಎಸ್ಆರ್​ ಮತ್ತು ಮಾಡೆಲ್​ ಆಸ್ಪತ್ರೆ, ರಾಜಾಜಿನಗರ, ಬೆಂಗಳೂರು ನಲ್ಲಿ ಸಂದರ್ಶನ ನಡೆಯಲಿದೆ.

ಇದು ಮೂರು ವರ್ಷದ ಗುತ್ತಿಗೆ ಆಧಾರಿತ ಉದ್ಯೋಗವಾಗಿದ್ದು, ಅಭ್ಯರ್ಥಿಯ ಕಾರ್ಯ ದಕ್ಷತೆ ಅನುಸಾರ ಎರಡು ವರ್ಷಗಳ ಕಾಲ ವಿಸ್ತರಣೆ ನಡೆಸಲಾಗುವುದು. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

ಬೆಂಗಳೂರು ಉದ್ಯೋಗ ಸ್ಥಳವಾಗಿದ್ದು, ವೇತನ 130797-228942 ರೂ ಪ್ರತಿ ತಿಂಗಳು. ಶೈಕ್ಷಣಿಕ ಅರ್ಹತೆ ESIC ಕರ್ನಾಟಕ ನೇಮಕಾತಿ ನಿಯಮಗಳ ಪ್ರಕಾರ.

ವಯಸ್ಸಿನ ಮಿತಿ ಉದ್ಯೋಗಿಗಳ ರಾಜ್ಯ ವಿಮಾ ನಿಗಮದ ಕರ್ನಾಟಕ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 67 ವರ್ಷಗಳು. ಶೈಕ್ಷಣಿಕ ಅನುಭವ, ವೈದ್ಯಕೀಯ ಸಂಸ್ಥೆಗಳ ನಿಯಮಾವಳಿಗಳಲ್ಲಿ ಶಿಕ್ಷಕರಿಗೆ ಕನಿಷ್ಠ ಅರ್ಹತೆಗಳು, 1998 ಪ್ರಕಾರದ ಅನುಭವ ಹೊಂದಿರಬೇಕು.

ನೇರ ಸಂದರ್ಶನಕ್ಕೆ ಹಾಜರಾಗುವ ಮುನ್ನ ಅಭ್ಯರ್ಥಿಗಳು ESIC ವೆಬ್‌ಸೈಟ್‌ನಿಂದ ನಿಗದಿತ ಅರ್ಜಿಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಇದರ ಜೊತೆಗೆ ಎಲ್ಲಾ ಮೂಲ ದಾಖಲೆಗಳನ್ನು ಹಾಜರುಪಡಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ ಸೈಟ್‌ esic.nic.in ಗೆ ಭೇಟಿ ನೀಡಬಹುದು.

ಹಿಂದಿನ ಲೇಖನʻಅಗ್ನಿಪಥ್‌ʼ ಯೋಜನೆಗೆ ಯಾಕಿಷ್ಟು ವಿರೋಧ?
ಮುಂದಿನ ಲೇಖನಅಗ್ನಿಪಥ್ ಯೋಜನೆಯನ್ನು ಯಾವುದೇ ಕಾರಣಕ್ಕೂ ಹಿಂತೆಗೆದುಕೊಳ್ಳುವುದಿಲ್ಲ: ಅನಿಲ್ ಪುರಿ