ಮುಂಬೈ(Mumbai)- ನಿಧಾನಗತಿಯ ಬೌಲಿಂಗ್‌ಗಾಗಿ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ ಗೆ (K.L.Rahul) ಐಪಿಎಲ್ (IPL) ಭಾರಿ ದಂಡ ವಿಧಿಸಿದೆ.
ಐಪಿಎಲ್ ಆಡಳಿತ ಮಂಡಳಿ 24 ಲಕ್ಷ ರೂ. ದಂಡ ವಿಧಿಸಿದೆ. ಅಲ್ಲದೆ ತಂಡದ ಉಳಿದೆಲ್ಲ ಆಟಗಾರರಿಗೆ ತಲಾ 6 ಲಕ್ಷ ರೂ. ಅಥವಾ ಪಂದ್ಯ ಶುಲ್ಕದ ಶೇ.25ರಷ್ಟು ದಂಡ ಹೇರಲಾಗಿದೆ ಎಂದು ಐಪಿಎಲ್ ಪ್ರಕಟಣೆ ತಿಳಿಸಿದೆ.
ಭಾನುವಾರ ವಾಂಖೆಡೆ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸ್ಲೋ ಓವರ್‌ರೇಟ್‌ಗೆ ಸಂಬಂಧಿಸಿದಂತೆ ರಾಹುಲ್ ದಂಡನೆಗೆ ಒಳಗಾಗಿದ್ದು, ರಾಹುಲ್ ಎರಡನೇ ಬಾರಿಗೆ ಐಪಿಎಲ್ ನಿಯಮ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ 24 ಲಕ್ಷ ರೂ. ದಂಡ ಹೇರಲಾಗಿದೆ. ಈ ಹಿಂದೆ ಮೊದಲ ಬಾರಿ ಇದೇ ತಪ್ಪಿಗಾಗಿ ರಾಹುಲ್ 12 ಲಕ್ಷ ರೂ. ದಂಡ ತೆತ್ತಿದ್ದರು.
ಇನ್ನು ನಿನ್ನೆ ನಡೆದ ಪಂದ್ಯದಲ್ಲಿ ರಾಹುಲ್ ಅವರ ಅಜೇಯ ಶತಕದ ನೆರವಿನಿಂದ ಲಖನೌ ತಂಡವು ಮುಂಬೈ ವಿರುದ್ಧ 36 ರನ್ ಗಳ ಅಂತರದ ಗೆಲುವು ದಾಖಲಿಸಿತ್ತು. ಈ ಮೂಲಕ ಮುಂಬೈ ಸತತ 8ನೇ ಸೋಲಿನ ಮುಖಭಂಗಕ್ಕೆ ಒಳಗಾಗಿದೆ.