ಮನೆ ಅಪರಾಧ ಬಿಯರ್​​ ಬಾಟಲಿಗೆ 50 ರೂ. ಶುಲ್ಕ ಹೆಚ್ಚಳ: ವ್ಯಕ್ತಿ ಆತ್ಮಹತ್ಯೆಗೆ ಯತ್ನ

ಬಿಯರ್​​ ಬಾಟಲಿಗೆ 50 ರೂ. ಶುಲ್ಕ ಹೆಚ್ಚಳ: ವ್ಯಕ್ತಿ ಆತ್ಮಹತ್ಯೆಗೆ ಯತ್ನ

0

ಮಧ್ಯಪ್ರದೇಶ:  ರಾಜ್‌ ಗಢ್ ಜಿಲ್ಲೆಯ ಸಿಎಂ ಸಹಾಯವಾಣಿ ಮತ್ತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ  ಪ್ರತೀ ಬಿಯರ್​​ ಬಾಟಲಿಗೆ ಹೆಚ್ಚುವರಿ 50 ರೂ. ಶುಲ್ಕ ವಿಧಿಸಲಾಗಿದೆ ಎಂದು ದೂರು ನೀಡಿದರೂ ಗಮನ ಹರಿಸಿಲ್ಲ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಮರಕ್ಕೆ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ವಿಲಕ್ಷಣ ಘಟನೆ ನಡೆದಿದೆ.

ಮದ್ಯದ ಬಾಟಲಿಗಳಿಗೆ 50 ರೂಪಾಯಿ ಹೆಚ್ಚುವರಿ ನೀಡಬೇಕಾಗಿದ್ದು,ಇದರಿಂದ ಮನನೊಂದ ರಾಜ್‌ ಗಢ್ ಜಿಲ್ಲೆಯ ನಿವಾಸಿ ಬ್ರಿಜ್‌ ಮೋಹನ್ ಶಿವಹರೆ ಮಂಗಳವಾರ ಆತ್ಮಹತ್ಯೆಗೆ ಮುಂದಾಗಿದ್ದಾರೆ.

ಘಟನೆಯ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ವಿಡಿಯೋದಲ್ಲಿ ಬ್ರಿಜ್‌ಮೋಹನ್ ಮರಕ್ಕೆ ಹತ್ತಿ ಆತ್ಮಹತ್ಯೆಗೆ ಯತ್ನಿಸಿರುವುದನ್ನು ಕಾಣಬಹುದು. ಬಳಿಕ ಆದರೆ, ಸ್ಥಳೀಯ ಪೊಲೀಸರು ಮಧ್ಯಪ್ರವೇಶಿಸಿ ಅವರನ್ನು ಸುರಕ್ಷಿತವಾಗಿ ಮರದಿಂದ ಕೆಳಗಿಳಿಸಿದ್ದಾರೆ.

ಮತ್ತೊಂದು ವೀಡಿಯೊದಲ್ಲಿ,ಬ್ರಿಜ್‌ಮೋಹನ್ “ನನಗೆ ಕೆಲಸವಿಲ್ಲ ಮತ್ತು ಬಾಡಿಗೆ ಪಾವತಿಸಲು ಹಣದ ಕೊರತೆಯಿದೆ ಎಂದು ಹೇಳಿದ್ದಾರೆ. ಆದರೂ ಮದ್ಯಕ್ಕೆ ಹೆಚ್ಚುವರಿ ಶುಲ್ಕ ವಿಧಿಸಲಾಗಿದೆ. ಪೊಲೀಸರಿಗೆ ದೂರು ನೀಡಿದರೂ ಏನು ಪ್ರಯೋಜನವಾಗಿಲ್ಲ. ಅದರಿಂದಲೇ ಆತ್ಮಹತ್ಯೆಗೆ ನಿರ್ಧರಿಸಿದೆ ಎಂದು ಸ್ಥಳೀಯ ಮಾಧ್ಯಮಗಳ ಮುಂದೆ ನೋವನ್ನು ಹಂಚಿಕೊಂಡಿದ್ದಾನೆ.

ಫೆಬ್ರವರಿಯಲ್ಲಿ,ಬ್ರಿಜ್‌ಮೋಹನ್ ಮುಖ್ಯಮಂತ್ರಿಗಳ ಸಹಾಯವಾಣಿ, ಸ್ಥಳೀಯ ಪೊಲೀಸ್ ಠಾಣೆ, ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ ಡಿಎಂ), ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಅವರಿಗೆ ಬಿಯರ್​​ ಬಾಟಲಿಯ ದರ ಹೆಚ್ಚಳದ ಕುರಿತು ಹಲವು ಅಧಿಕಾರಿಗಳಿಗೆ ದೂರು ನೀಡಿದರೂ ಮದ್ಯದಂಗಡಿ ನಡೆಸುವವರ ಅವ್ಯವಹಾರದ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿಕೊಂಡಿದ್ದಾರೆ.

ಹಿಂದಿನ ಲೇಖನಎನ್‌ ಇಪಿ ಮತ್ತು ಎಸ್‌ ಇಪಿ ಬಗ್ಗೆ ಗೊಂದಲ ಬೇಡ. ರಾಜ್ಯಪಠ್ಯವೇ ಅಂತಿಮ: ಮಧು ಬಂಗಾರಪ್ಪ
ಮುಂದಿನ ಲೇಖನಮೈಸೂರು: ಶಾರ್ಟ್ ಸರ್ಕ್ಯೂಟ್ ನಿಂದ 2 ಬೈಕ್, ಒಂದು ಕಾರು ಸುಟ್ಟು ಭಸ್ಮ