ಮನೆ ಕ್ರೀಡೆ ಐಪಿಎಲ್ 2023: 5ನೇ ಟ್ರೋಫಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್

ಐಪಿಎಲ್ 2023: 5ನೇ ಟ್ರೋಫಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್

0

ಅಹ್ಮದಾಬಾದ್ : ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ನ 16ನೇ ಸೀಸನ್ ಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ.

Join Our Whatsapp Group

ಇದರೊಂದಿಗೆ ಐಪಿಎಲ್ನಲ್ಲಿ 5 ಬಾರಿ ಟ್ರೋಫಿ ಗೆದ್ದ 2ನೇ ತಂಡ ಎನಿಸಿಕೊಂಡಿದೆ.

ಅಂತಿಮ 2 ಎಸೆತಗಳಲ್ಲಿ 10 ರನ್ಗಳ ಅಗತ್ಯವಿದ್ದಾಗ ಅನುಭವಿ ವೇಗದ ಬೌಲರ್ ಮೋಹಿತ್ ಶರ್ಮಾ ಎದುರು ಸಿಕ್ಸ್ ಮತ್ತು ಫೋರ್ ಬಾರಿಸಿದ ರವೀಂದ್ರ ಜಡೇಜಾ, ಸಿಎಸ್ಕೆ ಕೊರಳಿಗೆ ಜಯದ ಮಾಲೆ ತೊಡಿಸಿದರು.

ಸಿಎಸ್ ಕೆಗೆ 15 ಓವರ್ ಗಳಲ್ಲಿ 171 ರನ್ ಗುರಿ

ಗೆಲುವಿಗೆ 215 ರನ್ ಗಳ ಅಸಾಧ್ಯದ ಗುರಿ ಬೆನ್ನತ್ತಿದ ಸಿಎಸ್ಕೆ ಬ್ಯಾಟಿಂಗ್ ಆರಂಭಿಸಿ 3 ಎಸೆತಗಳನ್ನು ಎದುರಿಸುತ್ತಿದ್ದಂತೆಯೇ ಧಾರಾಕಾರ ಮಳೆ ಶುರುವಾಗಿ ಆಟಕ್ಕೆ ಅಡಚಣೆ ಎದುರಾಯಿತು. 2 ಗಂಟೆಗಳ ಕಾಲ ಆಟ ಸ್ಥಗಿತಗೊಂಡು 12:10ಕ್ಕೆ ಮರಳಿ ಶುರುವಾದಾಗ ಸಿಎಸ್ ಕೆಗೆ 15 ಓವರ್ ಗಳಲ್ಲಿ 171 ರನ್ ಗಳ ಕಠಿಣ ಗುರಿ ಪಡೆದಿತ್ತು.

ಗೆಲ್ಲಲು ಓವರ್ ಗೆ 12 ರನ್ ಗಳಿಸುವ ಒತ್ತಡಕ್ಕೆ ಸಿಲುಕಿದ್ದ ಸಿಎಸ್ ಕೆ, ಆರಂಭದಿಂದಲೂ ಹೊಡಿಬಡಿ ಆಟಕ್ಕೆ ಕೈ ಹಾಕಿತ್ತು. ಋತುರಾಜ್ ಗಾಯಕ್ವಾಡ್ (26), ಡೆವೋನ್ ಕಾನ್ವೇ (47), ಶಿವಂ ದುಬೇ (32*), ಅಜಿಂಕ್ಯ ರಹಾನೆ (27), ರವೀಂದ್ರ ಜಡೇಜಾ (15*) ಮತ್ತು ಅಂಬಾಟಿ ರಾಯುಡು (19) ಬೌಲರ್ಗಳನ್ನು ಬೆಂಡೆತ್ತಿದ ಪರಿಣಾಮ ಸಿಎಸ್ಕೆಗೆ ಗೆಲುವು ಸಾಧ್ಯವಾಯಿತು. ಟೈಟನ್ಸ್ ಪರ ನೂರ್ ಅಹ್ಮದ್ (17ಕ್ಕೆ 2) ಮತ್ತು ಮೋಹಿತ್ ಶರ್ಮಾ (36ಕ್ಕೆ 3) ವಿಕೆಟ್ ಪಡೆದು ಒತ್ತಡ ಹೇರಿದರೂ, ಅದೃಷ್ಟ ಸಿಎಸ್ಕೆ ಕೈಹಿಡಿದಿತ್ತು. ಈ ಜಯದೊಂದಿಗೆ ಸಿಎಸ್ ಕೆ ಐಪಿಎಲ್ನಲ್ಲಿ ಅತಿ ಹೆಚ್ಚು (5) ಟ್ರೋಫಿ ಗೆದ್ದು, ಮುಂಬೈ ಇಂಡಿಯನ್ಸ್ ದಾಖಲೆಯನ್ನು ಸರಿಗಟ್ಟಿದೆ.

ಟೈಟನ್ಸ್ ಬೃಹತ್ ಮೊತ್ತ

ಟಾಸ್ ಸಾತು ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟನ್ಸ್ ಸ್ಪೋಟಕ ಆರಂಭ ಪಡೆಯಿತು. ಆರಂಭದಲ್ಲೇ ಸಿಕ್ಕ ಜೀವದಾನ ಬಳಸಿಕೊಂಡ ಶೂಭಮನ್ ಗಿಲ್, 28 ಎಸೆತಗಳಲ್ಲಿ 37 ರನ್ ಸಿಡಿಸಿದರು. ಮತ್ತೊಂದು ದೊಡ್ಡ ಇನಿಂಗ್ಸ್ ಆಡುವ ಸುಳಿವು ನೀಡಿದ್ದರಾದರೂ, ರವೀಂದ್ರ ಜಡೇಜಾ ಬೌಲಿಂಗ್ ನಲ್ಲಿ ಎಂಎಸ್ ಧೋನಿ ಅವರ ವಿಕೆಟ್ಕೀಪಿಂಗ್ ಕಲೆಗಾರಿಕೆಯ ಎದುರು ಸ್ಟಂಪ್ ಔಟ್ ಆಗಿ ನಿರಾಶೆ ಅನುಭವಿಸಿದರು. ಟೈಟನ್ಸ್ ಮೊದಲ ವಿಕೆಟ್ ಗೆ 7 ಓವರ್ ಗಳಲ್ಲಿ 66 ರನ್ ಕಲೆಹಾಕಿತ್ತು. ಮತ್ತೊಬ್ಬ ಓಪನರ್ ವೃದ್ಧಿಮಾನ್ ಸಹಾ (54) ಬಿರುಸಿನ ಅರ್ಧಶತಕ ಬಾರಿಸಿದರು.

ತಂಡಗಳ ವಿವರ

ಗುಜರಾತ್ ಟೈಟನ್ಸ್

ವೃದ್ಧಿಮಾನ್ ಸಹಾ (ಕೀಪರ್), ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ದಸುನ್ ಶನಕ, ರಾಹುಲ್ ತೆವಾಟಿಯ, ರಶೀದ್ ಖಾನ್, ದರ್ಶನ್ ನಾಲ್ಕಂಡೆ, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ಸಾಯ್ ಸುದರ್ಶನ್, ಶ್ರೀಕರ್ ಭರತ್, ಜಯಂತ್ ಯಾದವ್ , ಶಿವಂ ಮಾವಿ, ಜೋಶುವಾ ಲಿಟಲ್, ಪ್ರದೀಪ್ ಸಾಂಗ್ವಾನ್, ಮ್ಯಾಥ್ಯೂ ವೇಡ್, ಅಭಿನವ್ ಮನೋಹರ್, ಓಡಿಯನ್ ಸ್ಮಿತ್, ಅಲ್ಜಾರಿ ಜೋಸೆಫ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಉರ್ವಿಲ್ ಪಟೇಲ್, ಯಶ್ ದಯಾಳ್.

ಚೆನ್ನೈ ಸೂಪರ್ ಕಿಂಗ್ಸ್

ಋತುರಾಜ್ ಗಾಯಕ್ವಾಡ್, ಡೆವೋನ್ ಕಾನ್ವೇ, ಶಿವಂ ದುಬೇ, ಅಜಿಂಕ್ಯ ರಹಾನೆ, ಅಂಬಾಟಿ ರಾಯುಡು, ಎಂಎಸ್ ಧೋನಿ (ಕೀಪರ್/ ನಾಯಕ), ರವೀಂದ್ರ ಜಡೇಜಾ, ಮೊಯೀನ್ ಅಲಿ, ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಮಥೀಶ ಪತಿರಣ, ಮಿಚೆಲ್ ಸ್ಯಾಂಟ್ನರ್, ಸುಬ್ರಾಂನ್ಶು ಸೇನಾಪತಿ, ಶೇಖ್ ರಶೀದ್, ಆಕಾಶ್ ಸಿಂಗ್, ಬೆನ್ ಸ್ಟೋಕ್ಸ್, ಡ್ವೇಯ್ನ್ ಪ್ರಿಟೋರಿಯಸ್, ಸಿಸಂದಾ ಮಗಾಲ, ಅಜಯ್ ಜಾದವ್ ಮಂಡಲ್, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ರಾಜವರ್ಧನ್ ಹಂಗರ್ಗೇಕರ್, ಭಗತ್ ವರ್ಮಾ, ನಿಶಾಂತ್ ಸಿಂಧು.

ಹಿಂದಿನ ಲೇಖನಟಿ.ನರಸೀಪುರ ಅಪಘಾತ: ಮೃತಪಟ್ಟ 10 ಜನರ ಕುಟುಂಬಗಳಿಗೆ ಪ್ರಧಾನಿ ಕಾರ್ಯಾಲಯದಿಂದ ತಲಾ 2 ಲಕ್ಷ ರೂ. ಪರಿಹಾರ
ಮುಂದಿನ ಲೇಖನವಾರೆಂಟ್ ಇಲ್ಲದೆ ಮನೆಗೆ ಪ್ರವೇಶಿಸಿ ಗಲಾಟೆ: ಪೊಲೀಸ್ ಇನ್ಸ್​ ಪೆಕ್ಟರ್ ವಿರುದ್ಧ ಎಫ್ ಐಆರ್ ದಾಖಲು