ಮನೆ ಅಪರಾಧ ವಾರೆಂಟ್ ಇಲ್ಲದೆ ಮನೆಗೆ ಪ್ರವೇಶಿಸಿ ಗಲಾಟೆ: ಪೊಲೀಸ್ ಇನ್ಸ್​ ಪೆಕ್ಟರ್ ವಿರುದ್ಧ ಎಫ್ ಐಆರ್ ದಾಖಲು

ವಾರೆಂಟ್ ಇಲ್ಲದೆ ಮನೆಗೆ ಪ್ರವೇಶಿಸಿ ಗಲಾಟೆ: ಪೊಲೀಸ್ ಇನ್ಸ್​ ಪೆಕ್ಟರ್ ವಿರುದ್ಧ ಎಫ್ ಐಆರ್ ದಾಖಲು

0

ಬೆಂಗಳೂರು: ಪುಲಿಕೇಶಿನಗರ ಪೊಲೀಸ್​ ಠಾಣೆಯ ಇನ್ಸ್​ ಪೆಕ್ಟರ್ ಕಿರಣ್ ಅವರ ವಿರುದ್ಧ ಎಫ್ ಐಆರ್ ದಾಖಲಾಗಿದೆ.

Join Our Whatsapp Group

ಹರೀಶ್ ಫರ್ನಾಂಡೀಸ್ ಎಂಬುವರು ಇನ್ಸ್​ ಪೆಕ್ಟರ್ ಕಿರಣ್ ಅವರು ವಾರೆಂಟ್ ಇಲ್ಲದೆ ಮನೆಗೆ ಪ್ರವೇಶಿಸಿ ಗಲಾಟೆ ಮಾಡಿದ್ದಾರೆ ಎಂದು 2016ರಲ್ಲಿ ನ್ಯಾಯಾಲಯಕ್ಕೆ ಪಿಸಿಆರ್ ಸಲ್ಲಿದ್ದರು. ಈ ಹಿನ್ನೆಲೆ ಕೋರ್ಟ್ ಸೂಚನೆ ಮೇರೆಗೆ ಇದೀಗ ಅಶೋಕನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

2016ರಲ್ಲಿ ಮನೆ ಖಾಲಿ ಮಾಡುವ ವಿಚಾರಕ್ಕೆ ಸಹೋದರರಾದ ಹರೀಶ್ ಫರ್ನಾಂಡೀಸ್ ಮತ್ತು ವಸಂತ್ ಫರ್ನಾಂಡೀಸ್ ಎಂಬವರ ನಡುವೆ ಜಗಳ ನಡೆದಿತ್ತು. ಈ ಗಲಾಟೆಯಲ್ಲಿ ಇನ್ಸ್​ ಪೆಕ್ಟರ್ ಕಿರಣ್ ಮಧ್ಯಪ್ರವೇಶಿಸಿದ್ದಾರೆ ಎಂದು ನ್ಯಾಯಾಲಯದಲ್ಲಿ ಪಿಸಿಆರ್ ಸಲ್ಲಿಸಿದ್ದರು.

ಇದೀಗ ನ್ಯಾಯಾಲಯದ ಸೂಚನೆ ಮೇರೆಗೆ 2023ರ ಮೇ 19ರಂದು ಆಶೋಕ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಅಲ್ಲದೇ ಹರೀಶ್​​ ಫರ್ನಾಂಡೀಸ್​​ ಸಹೋದರ ವಸಂತ್ ಫರ್ನಾಂಡೀಸ್ ಹಾಗೂ ಪತ್ನಿ ಮೆರಿಟೋ ವಿರುದ್ಧವೂ ದೂರ ದಾಖಲಾಗಿದೆ.

ಹಿಂದಿನ ಲೇಖನಐಪಿಎಲ್ 2023: 5ನೇ ಟ್ರೋಫಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್
ಮುಂದಿನ ಲೇಖನವೈಷ್ಣೋದೇವಿ ದರ್ಶನಕ್ಕೆ ಬರುತ್ತಿದ್ದ ಬಸ್ ಕಂದಕಕ್ಕೆ ಉರುಳಿ ಬಿದ್ದು 10 ಮಂದಿ ದುರ್ಮರಣ