ಮನೆ ಕ್ರೀಡೆ ಐಪಿಎಲ್-2023: ಟಾಸ್ ಗೆದ್ದ ಎಲ್’ಎಸ್’ಜಿ ಚೇಸಿಂಗ್ ಆಯ್ಕೆ

ಐಪಿಎಲ್-2023: ಟಾಸ್ ಗೆದ್ದ ಎಲ್’ಎಸ್’ಜಿ ಚೇಸಿಂಗ್ ಆಯ್ಕೆ

0

ಚೆನ್ನೈ : ಗುಜರಾತ್ ಟೈಟನ್ಸ್ ಎದುರು ಆಡಿದ ಮೊದಲ ಪಂದ್ಯದಲ್ಲಿ 5 ವಿಕೆಟ್ಗಳ ಸೋಲುಂಡು ಗಾಯಗೊಂಡ ಹುಲಿಯಂತಾಗಿರುವ ಎಂ.ಎಸ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇದೀಗ ಗೆಲುವಿನ ಹಾದಿ ಹಿಡಿಯಲು ಯೋಜನೆ ರೂಪಿಸಿದೆ. ಇಲ್ಲಿನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ತಾಯ್ನಾಡಿನ ಪ್ರೇಕ್ಷಕರ ಬೆಂಬಲದೊಂದಿಗೆ ಪ್ರವಾಸಿ ಲಖನೌ ಸೂಪರ್ ಜಯಂಟ್ಸ್ ತಂಡವನ್ನು ಬೇಟೆಯಾಡಿ ಅಂಕಪಟ್ಟಿಯಲ್ಲಿ ಖಾತೆತೆರೆಯಲು ಎದುರು ನೋಡುತ್ತಿದೆ. ಆದರೆ ಟಾಸ್ ಗೆದ್ದ ಎಲ್’ಎಸ್’ಜಿ ಚೇಸಿಂಗ್ ಆಯ್ಕೆ ಮಾಡಿಕೊಂಡಿದೆ.

210 ರನ್ ಚೇಸ್ ಮಾಡಿದ್ದ ಎಲ್’ಎಸ್’ಜಿ

ಐಪಿಎಲ್ 2022 ಟೂರ್ನಿಯಲ್ಲಿ ಸಿಎಸ್ಕೆ ಎದುರು ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಆಡಿದ್ದ ಏಕೈಕ ಪಂದ್ಯದಲ್ಲಿ ಎಲ್’ಎಸ್’ಜಿ ತಂಡ ಜಯ ದಾಖಲಿಸಿತ್ತು. ಕ್ವಿಂಟನ್ ಡಿ’ಕಾಕ್ ಮತ್ತು ಎವಿನ್ ಲೂಯಿಸ್ ಬಾರಿಸಿದ ಅರ್ಧಶತಕಗಳ ಬಲದಿಂದ ಸಿಎಸ್ಕೆ ನೀಡಿದ್ದ 210 ರನ್’ಗಳ ಗುರಿಯನ್ನು ಎಲ್’ಎಸ್’ಜಿ ಮೆಟ್ಟಿನಿಂತಿತ್ತು. ಆದರೆ, ಇದೀಗ ತಾಯ್ನಾಡಿನಲ್ಲಿ ಸಿಎಸ್’ಕೆ ತಂಡವನ್ನು ಮಣಿಸುವುದು ಅಷ್ಟು ಸುಲಭದ ಮಾತಲ್ಲ.

ಇತ್ತಂಡಗಳ ಪ್ಲೇಯಿಂಗ್ XI ವಿವರ

ಸಿಎಸ್ ಕೆ  XI

ಋತುರಾಜ್ ಗಾಯಕ್ವಾಡ್, ಡೆವೋನ್ ಕಾನ್ವೇ, ಬೆನ್ ಸ್ಟೋಕ್ಸ್, ಮೊಯೀನ್ ಅಲಿ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಶಿವಂ ದುಬೇ, ಎಂ.ಎಸ್ ಧೋನಿ (ನಾಯಕ, ವಿಕೆಟ್ ಕೀಪರ್), ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹರ್, ರಾಜವರ್ಧನ್ ಹಂಗಾರ್ಗೇಕರ್.

ಎಲ್’ಎಸ್’ಜಿ XI

ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡ, ಕೃಣಾಲ್ ಪಾಂಡ್ಯ, ಮಾರ್ಕಸ್ ಸ್ಟೋಯ್ನಿಸ್, ನಿಕೋಲಸ್ ಪೂರನ್ (ವಿಕೆಟ್ಕೀಪರ್), ಕೃಷ್ಣಪ್ಪ ಗೌತಮ್, ಮಾರ್ಕ್ ವುಡ್, ರವಿ ಬಿಷ್ಣೋಯ್, ಯಶ್ ಠಾಕೂರ್, ಅವೇಶ್ ಖಾನ್.

ತಂಡಗಳ ವಿವರ

ಚೆನ್ನೈ ಸೂಪರ್ ಕಿಂಗ್ಸ್

ಎಂ.ಎಸ್ ಧೋನಿ (ವಿಕೆಟ್ಕೀಪರ್/ ಕ್ಯಾಪ್ಟನ್), ಡೆವೊನ್ ಕಾನ್ವೇ, ಋತುರಾಜ್ ಗಾಯಕ್ವಾಡ್, ಅಂಬಾಟಿ ರಾಯುಡು, ಮೊಯೀನ್ ಅಲಿ, ಬೆನ್ ಸ್ಟೋಕ್ಸ್, ಶಿವಂ ದುಬೇ, ರವೀಂದ್ರ ಜಡೇಜಾ, ಡ್ವೇಯ್ನ್ ಪ್ರಿಟೋರಿಯಸ್, ದೀಪಕ್ ಚಾಹರ್, ಸಿಮರ್ ಜೀತ್ ಸಿಂಗ್, ಅಜಿಂಕ್ಯ ರಹಾನೆ, ಸುಭ್ರಾಂಶು ಸೇನಾಪತಿ, ಶೇಖ್ ರಶೀದ್, ನಿಶಾಂತ್ ಸಿಧು, ಮಿಚೆಲ್ ಸ್ಯಾಂಟ್ನರ್, ಭಗತ್ ವರ್ಮಾ, ತುಷಾರ್ ದೇಶಪಾಂಡೆ, ರಾಜವರ್ಧನ್ ಹಂಗಾರ್ಗೇಕರ್, ಅಜಯ್ ಜಾದವ್ ಮಂಡಲ್, ಪ್ರಶಾಂತ್ ಸೋಲಂಕಿ, ಆಕಾಶ್ ಸಿಂಗ್.

ಲಖನೌ ಸೂಪರ್ ಜಯಂಟ್ಸ್

ಕೆ.ಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡ, ಕೃಣಾಲ್ ಪಾಂಡ್ಯ, ಮಾರ್ಕಸ್ ಸ್ಟೊಯ್ನಿಸ್, ನಿಕೋಲಸ್ ಪೂರನ್ (ವಿಕೆಟ್ಕೀಪರ್), ಆಯುಷ್ ಬಡೋನಿ, ಮಾರ್ಕ್ ವುಡ್, ಜಯದೇವ್ ಉನಾದ್ಕಟ್, ರವಿ ಬಿಷ್ಣೋಯ್, ಅವೇಶ್ ಖಾನ್, ಕೃಷ್ಣಪ್ಪ ಗೌತಮ್, ಪ್ರೇರಕ್ ಮಂಕಡ್, ಸ್ವಪ್ನಿಲ್ ಸಿಂಗ್, ನವೀನ್- ಉಲ್-ಹಕ್, ಯಶ್ ಠಾಕೂರ್, ಡೇನಿಯಲ್ ಸ್ಯಾಮ್ಸ್, ರೊಮಾರಿಯೋ ಶೆಫರ್ಡ್, ಯಧುವೀರ್ ಸಿಂಗ್ ಚರಕ್, ಕರಣ್ ಶರ್ಮಾ, ಮಯಾಂಕ್ ಯಾದವ್, ಅಮಿತ್ ಮಿಶ್ರಾ, ಮನನ್ ವೋಹ್ರ.