ಮನೆ ಕ್ರೀಡೆ ರೋಚಕಘಟ್ಟದತ್ತಐಪಿಎಲ್ 2023:

ರೋಚಕಘಟ್ಟದತ್ತಐಪಿಎಲ್ 2023:

0

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್​ ಲೀಗ್ (IPL 2023) ಟೂರ್ನಿಯಲ್ಲಿ 52 ಪಂದ್ಯಗಳು ಮುಕ್ತಾಯಗೊಂಡಿದೆ. ಕೆಲ ತಂಡಗಳಿಂದ ಊಹಿಸಲಾಗದ ಪ್ರದರ್ಶನ ಬರುತ್ತಿದೆ. ಎದುರಾಳಿಗೆ 200+ ಟಾರ್ಗೆಟ್ ನೀಡಿದರೂ ಸುಲಭವಾಗಿ ಚೇಸ್ ಮಾಡಿ ಗೆಲುವು ಸಾಧಿಸುವುದು ಈ ಬಾರಿಯ ಟೂರ್ನಿಯಲ್ಲಿ ಹೆಚ್ಚಾಗುತ್ತಿವೆ. ಇದಕ್ಕೆ ಮತ್ತೊಂದು ಸಾಕ್ಷಿ ಭಾನುವಾರ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ನಡುವಣ ಪಂದ್ಯ. ಈ ರೋಚಕ ಪಂದ್ಯದಲ್ಲಿ ಹೈದರಾಬಾದ್ 4 ವಿಕೆಟ್​ಗಳ ಗೆಲುವು ಸಾಧಿಸಿತು. ಇಂದು ಐಪಿಎಲ್ 2023ರಲ್ಲಿ ಕೆಕೆಆರ್ ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿ ಆಗಲಿದೆ.

Join Our Whatsapp Group

ಗುಜರಾತ್ ಟೈಟಾನ್ಸ್ ತಂಡ ಭರ್ಜರಿ ಪ್ರದರ್ಶನ ತೋರಿ ಅಗ್ರಸ್ಥಾನದಲ್ಲಿ ಭದ್ರವಾಗಿದ್ದು ಪ್ಲೇ ಆಫ್​ಗೆ ಬಹುತೇಕ ಕಾಲಿಟ್ಟಿದೆ. ಆಡಿದ 11 ಪಂದ್ಯಗಳಲ್ಲಿ ಎಂಟು ಗೆಲುವು, ಮೂರು ಸೋಲುಂಡು +0.951 ರನ್​ರೇಟ್​ನೊಂದಿಗೆ 16 ಅಂಕ ಸಂಪಾದಿಸಿದೆ.

ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎರಡನೇ ಸ್ಥಾನದಲ್ಲಿದೆ. ಆಡಿದ 11 ಪಂದ್ಯಗಳ ಪೈಕಿ ಆರರಲ್ಲಿ ಗೆಲುವು ನಾಲ್ಕರಲ್ಲಿ ಸೋಲು ಕಂಡು ಒಟ್ಟು 13 ಅಂಕ ಸಂಪಾದಿಸಿದೆ. +0.409 ರನ್​ರೇಟ್ ಹೊಂದಿದೆ.

ಲಖನೌ ಸೂಪರ್ ಜೇಂಟ್ಸ್ ತಂಡ ತೃತೀಯ ಸ್ಥಾನದಲ್ಲಿದೆ. ಆಡಿದ ಹನ್ನೊಂದು ಪಂದ್ಯಗಳಲ್ಲಿ ಐದು ಗೆಲುವು, ಐದು ಸೋಲು ಕಂಡು 11 ಅಂಕ ಸಂಪಾದಿಸಿ +0.294 ರನ್​ರೇಟ್​ ಹೊಂದಿದೆ.

ರಾಜಸ್ಥಾನ್ ರಾಯಲ್ಸ್ ತಂಡ ಪಾಯಿಂಟ್ ಟೇಬಲ್​ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆಡಿದ 11 ಪಂದ್ಯಗಳಲ್ಲಿ ಐದು ಗೆಲುವು, ಆರು ಸೋಲುಂಡು +0.388ರನ್​ರೇಟ್​ನೊಂದಿಗೆ 10 ಅಂಕ ಸಂಪಾದಿಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಐದನೇ ಸ್ಥಾನದಲ್ಲಿದೆ. ಆಡಿದ ಹತ್ತು ಪಂದ್ಯಗಳ ಪೈಕಿ ಐದರಲ್ಲಿ ಗೆಲುವು ಐದರಲ್ಲಿ ಸೋಲು ಕಂಡು 10 ಅಂಕ ಸಂಪಾದಿಸಿ -0.209 ರನ್​ರೇಟ್ ಹೊಂದಿದೆ.

ಮುಂಬೈ ಇಂಡಿಯನ್ಸ್ ಆರನೇ ಸ್ಥಾನದಲ್ಲಿದೆ. ಇವರು ಕೂಡ ಆಡಿದ 10 ಪಂದ್ಯದಲ್ಲಿ 5 ಸೋಲು, ಐದು ಗೆಲುವು ಕಂಡು 10 ಅಂಕ ಸಂಪಾದಿಸಿ -0.454 ರನ್​ರೇಟ್ ಹೊಂದಿದೆ.

ಪಂಜಾಬ್ ಕಿಂಗ್ಸ್ ಆಡಿದ ಹತ್ತು ಪಂದ್ಯಗಳಲ್ಲಿ ಐದು ಸೋಲು- ಐದು ಜಯ ಕಂಡು 10 ಅಂಕ ಹೊಂದಿ -0.472 ರನ್​ರೇಟ್​ನೊಂದಿಗೆ ಏಳನೇ ಸ್ಥಾನಕ್ಕೆ ಕುಸಿದಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಎಂಟನೇ ಪ್ಲೇಸ್​ನಲ್ಲಿದೆ. ಆಡಿದ 10 ಪಂದ್ಯಗಳಲ್ಲಿ ನಾಲ್ಕು ಗೆಲುವು, ಆರರಲ್ಲಿ ಸೋಲುಂಡು -0.103 ರನ್​ ರೇಟ್​ನೊಂದಿಗೆ 8 ಅಂಕ ಸಂಪಾದಿಸಿದೆ.

ಸನ್​ರೈಸರ್ಸ್ ಹೈದರಾಬಾದ್ ತಂಡ ಒಂಬತ್ತನೇ ಸ್ಥಾನದಲ್ಲಿದೆ. ಆಡಿದ 10 ಪಂದ್ಯದಲ್ಲಿ ಆರರಲ್ಲಿ ಸೋಲು ನಾಲ್ಕರಲ್ಲಿ ಜಯ ಕಂಡು 8 ಅಂಕ ಸಂಪಾದಿಸಿ -0.472 ರನ್​ರೇಟ್ ಹೊಂದಿದೆ.

ಡೆಲ್ಲಿ ಕ್ಯಾಪಿಟಲ್ಸ್ ಕೊನೆಯ ಸ್ಥಾನದಲ್ಲಿದೆ. ಆಡಿದ 10 ಪಂದ್ಯಗಳ ಪೈಕಿ ನಾಲ್ಕರಲ್ಲಿ ಜಯ ಸಾಧಿಸಿ, ಆರು ಪಂದ್ಯಗಳಲ್ಲಿ ಸೋಲುಂಡು 8 ಅಂಕ ಸಂಪಾದಿಸಿ -0.529 ರನ್​ರೇಟ್ ಹೊಂದಿದೆ.

ಆರೆಂಜ್ ಕ್ಯಾಪ್:

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್  ಡುಪ್ಲೆಸಿಸ್ ಆರೆಂಜ್ ಕ್ಯಾಪ್ ತೊಟ್ಟಿದ್ದಾರೆ. ಇವರು ಆಡಿದ ಹತ್ತು ಪಂದ್ಯಗಳಲ್ಲಿ ಐದು ಅರ್ಧಶತಕ ಸಿಡಿಸಿ ಒಟ್ಟು 511 ರನ್ ಗಳಿಸಿದ್ದಾರೆ. ರಾಜಸ್ಥಾನ್ ತಂಡದ ಯಶಸ್ವಿ ಜೈಸ್ವಾಲ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಇವರು ಆಡಿದ 11 ಪಂದ್ಯಗಳಲ್ಲಿ ಮೂರು ಅರ್ಧಶತಕ, 1 ಶತಕ ಸಿಡಿಸಿ ಒಟ್ಟು 477 ರನ್ ಕಲೆಹಾಕಿದ್ದಾರೆ. ಗುಜರಾತ್ ತಂಡದ ಶುಭ್​ಮನ್ ಗಿಲ್ ಮೂರನೇ ಸ್ಥಾನಕ್ಕೆ ಜಿಗಿದಿದ್ದು 11 ಪಂದ್ಯಗಳಿಂದ 469 ರನ್ ಗಳಿಸಿದ್ದಾರೆ.

ಪರ್ಪಲ್ ಕ್ಯಾಪ್:

ಗುಜರಾತ್ ಟೈಟಾನ್ಸ್ ತಂಡದ ಮೊಹಮ್ಮದ್ ಶಮಿ ಪರ್ಪಲ್ ಕ್ಯಾಪ್ ತೊಟ್ಟಿದ್ದಾರೆ. ಇವರು ಆಡಿರುವ ಹನ್ನೊಂದು ಪಂದ್ಯಗಳಲ್ಲಿ 19 ವಿಕೆಟ್ ಪಡೆದುಕೊಂಡಿದ್ದಾರೆ. ಇದೇ ತಂಡದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಕೂಡ 11 ಪಂದ್ಯಗಳಿಂದ 19 ವಿಕೆಟ್ ಕಿತ್ತು ದ್ವಿತೀಯ ಸ್ಥಾನದಲ್ಲಿದ್ದಾರೆ. ಸಿಕೆಸ್​ಕೆ ತಂಡದ ತುಷಾರ್ ದೇಶಪಾಂಡೆ ಆಡಿರುವ 11 ಪಂದ್ಯಗಳಲ್ಲಿ 19 ವಿಕೆಟ್ ಗಳಿಸಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಹಿಂದಿನ ಲೇಖನಕರ್ನಾಟಕವನ್ನು ಭಾರತದಿಂದ ಬೇರ್ಪಡಿಸಲು ಕಾಂಗ್ರೆಸ್ ಹುನ್ನಾರ: ನಂಜನಗೂಡಲ್ಲಿ ಪ್ರಧಾನಿ ಮೋದಿ ಗಂಭೀರ ಆರೋಪ
ಮುಂದಿನ ಲೇಖನಸಲಿಂಗ ಮದುವೆ: ಆರ್‌ಎಸ್‌ಎಸ್‌ ಅಂಗ ಸಂಸ್ಥೆಯ ಸಮೀಕ್ಷೆಗೆ ವಿರೋಧ