ಮನೆ ಕ್ರೀಡೆ ಟೆಸ್ಟ್ ಕ್ರಿಕೆಟ್: ಉತ್ತಮ ಮೊತ್ತ ಕಲೆ ಹಾಕಿದ ಆಸ್ಟ್ರೇಲಿಯಾ

ಟೆಸ್ಟ್ ಕ್ರಿಕೆಟ್: ಉತ್ತಮ ಮೊತ್ತ ಕಲೆ ಹಾಕಿದ ಆಸ್ಟ್ರೇಲಿಯಾ

0

ಸಿಡ್ನಿ : ದ್ವಿಶತಕದತ್ತ ಹೆಜ್ಜೆಯಿಟ್ಟಿರುವ ಉಸ್ಮಾನ್‌ ಖ್ವಾಜಾ (ಬ್ಯಾಟಿಂಗ್‌ 195) ಮತ್ತು ಸ್ಟೀವ್‌ ಸ್ಮಿತ್‌ (104) ಅವರ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಕ್ರಿಕೆಟ್‌ ಟೆಸ್ಟ್‌ನಲ್ಲಿ ಉತ್ತಮ ಮೊತ್ತ ಪೇರಿಸಿದೆ.

ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ (ಎಸ್‌’ಸಿಜಿ) ನಡೆಯುತ್ತಿರುವ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಆತಿಥೇಯ ತಂಡ 131 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 475 ರನ್‌ ಗಳಿಸಿದೆ.

ಪ್ಯಾಟ್‌ ಕಮಿನ್ಸ್‌ ಬಳಗ 2 ವಿಕೆಟ್‌’ಗೆ 147 ರನ್‌’ಗಳಿಂದ ಗುರುವಾರ ಆಟ ಮುಂದುವರಿಸಿತ್ತು. ಖ್ವಾಜಾ 54 ರನ್‌ಗಳಿಂದ ಇನಿಂಗ್ಸ್‌ ಮುಂದುವರಿಸಿದ್ದರು. ಸ್ಮಿತ್‌– ಖ್ವಾಜಾ ಮೂರನೇ ವಿಕೆಟ್‌ಗೆ 209 ರನ್‌ ಸೇರಿಸಿದರು.

368 ಎಸೆತಗಳನ್ನು ಎದುರಿಸಿರುವ ಖ್ವಾಜಾ 19 ಬೌಂಡರಿ ಹಾಗೂ ಒಂದು ಸಿಕ್ಸರ್‌ ಹೊಡೆದರು. ಎಸ್‌ಸಿಜಿಯಲ್ಲಿ ಸತತ ಮೂರನೇ ಶತಕ ಸಾಧನೆಯನ್ನು ಈ ಆರಂಭಿಕ ಬ್ಯಾಟರ್‌ ಮಾಡಿದರು.

ಈ ಹಿಂದೆ ಇಂಗ್ಲೆಂಡ್‌ ವಿರುದ್ಧ ಅವರು ಇಲ್ಲಿ ಎರಡು ಶತಕ ಗಳಿಸಿದ್ದರು.ಟೆಸ್ಟ್‌ನಲ್ಲಿ ಖ್ವಾಜಾ ಅವರ ವೈಯಕ್ತಿಕ ಶ್ರೇಷ್ಠ ಸ್ಕೋರ್‌ ಇದು. 2015 ರಲ್ಲಿ ನ್ಯೂಜಿಲೆಂಡ್‌ ವಿರುದ್ಧ ಬ್ರಿಸ್ಬೇನ್‌’ನಲ್ಲಿ ನಡೆದಿದ್ದ ಪಂದ್ಯದಲ್ಲಿ 174 ರನ್‌ ಗಳಿಸಿದ್ದು ಈವರೆಗಿನ ಉತ್ತಮ ಸಾಧನೆಯಾಗಿತ್ತು.

ಟ್ರ್ಯಾವಿಸ್‌ ಹೆಡ್‌ (70 ರನ್‌, 59 ಎ.) ಅವರು ಬಿರುಸಿನ ಆಟವಾಡಿ ತಂಡದ ಮೊತ್ತ ಹಿಗ್ಗಿಸಿದರು. ಖ್ವಾಜಾ ಮತ್ತು ಹೆಡ್‌ ನಾಲ್ಕನೇ ವಿಕೆಟ್‌ಗೆ 112 ರನ್‌ ಸೇರಿಸಿದರು.

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್‌ ಆಸ್ಟ್ರೇಲಿಯಾ 131 ಓವರ್‌’ಗಳಲ್ಲಿ 4 ವಿಕೆಟ್‌ಗಳಿಗೆ 475 (ಉಸ್ಮಾನ್‌ ಖ್ವಾಜಾ ಬ್ಯಾಟಿಂಗ್‌ 195, ಮಾರ್ನಸ್‌ ಲಾಬುಷೇನ್‌ 79, ಸ್ಟೀವ್‌ ಸ್ಮಿತ್‌ 104, ಟ್ರ್ಯಾವಿಸ್‌ ಹೆಡ್‌ 70, ಎನ್ರಿಚ್‌ ನಾರ್ಕಿಯಾ 55ಕ್ಕೆ 2)

ಹಿಂದಿನ ಲೇಖನ‘ಸ್ವದೇಶ ದರ್ಶನ್‌’ 2.0 ಯೋಜನೆಗೆ ಹಂಪಿ, ಮೈಸೂರು ಆಯ್ಕೆ
ಮುಂದಿನ ಲೇಖನರೈತರಿಗೆ ಅನುಕೂಲವಾಗುವಂತೆ ಶೂನ್ಯ ಬಡ್ಡಿ ದರದಲ್ಲಿ ಸಾಲ:  ಡಾ. ಕೆ.ವಿ ರಾಜೇಂದ್ರ