ಲಕ್ನೋ: ಆರಂಭಿದಲ್ಲಿ ವಿಕೆಟ್ ಕಳೆದುಕೊಂಡು ಆಘಾತ ಸಿಲುಕಿದ ತಂಡಕ್ಕೆ ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಕಸ್ ಸ್ಟೋಯಿನಿಸ್ ತಂಡಕ್ಕೆ ಆಸರೆಯಾದರು.
ಪ್ಲೇ ಆಫ್ ಪ್ರವೇಶದ ಕನಸಿನ ಹಿನ್ನೆಲೆಯಲ್ಲಿ ಮಂಗಳವಾರದ ಐಪಿಎಲ್ ಮುಖಾಮುಖಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 3 ವಿಕೆಟ್ ಗೆ 177 ರನ್ ಗಳಿಸಿತ್ತು.
ಲಕ್ನೋ ಕೈಲ್ ಮೇಯರ್ ಗೈರಲ್ಲಿ ಆಟ ಆರಂಭವಾಗಿದ್ದು, ಜೇಸನ್ ಬೆಹ್ರೆಂಡರ್ಫ್ ತಮ್ಮ ದ್ವಿತೀಯ ಓವರ್ ನಲ್ಲಿ ಮೊದಲೆರಡು ಎಸೆತಗಳಲ್ಲಿ ದೀಪಕ್ ಹೂಡಾ (5) ಮತ್ತು ಪ್ರೇರಕ್ ಮಂಕಡ್ (0)ವಿಕೆಟ್ ಪೆಡದರು.ಪವರ್ ಪ್ಲೇ ಅಂತ್ಯಕ್ಕೆ ಲಕ್ನೋ 2 ವಿಕೆಟಿಗೆ 35 ರನ್ ಗಳಿಸಿತು.
7ನೇ ಓವರ್ ನ ಮೊದಲ ಎಸೆತದಲ್ಲೇ ಪೀಯೂಷ್ ಚಾವ್ಲಾ. ಕ್ವಿಂಟನ್ ಡಿ ಕಾಕ್ (16)ಗಳಿಸಿ ಪೆವಿಲಿಯನ್ ಕೆಡೆ ಮುಖ ಮಾಡಿದರು. 35ಕ್ಕೆ 3 ವಿಕೆಟ್ ಬಿತ್ತು. ಸಂಕಷ್ಟಕ್ಕೆ ಸಿಲುಕಿದ ತಂಡಕ್ಕೆ ನಾಯಕ ಕೃಣಾಲ್ ಪಾಂಡ್ಯ ಮತ್ತು ಮಾರ್ಕಸ್ ಸ್ಟೋಯಿನಿಸ್ ಜೊತೆಯಾಟದಲ್ಲಿ ಲಕ್ನೋ ತಂಡವನ್ನು 117ಕ್ಕೆ ತಲುಪಿಸಿದರು.
ನಾಯಕನಾಗಿ ಕಣಕ್ಕಿಳಿದ ಅವರು 42 ಎಸೆತಗಳಿಂದ 49 ರನ್ ಸಿಡಿಸಿದರು. ಆಗ ಕ್ರುನಾಲ್ ಪಾಂಡ್ಯ ಇಂಜೂರಿಯಾಗಿ ಹೊರ ಹೋದರು.
3 ಓವರ್ ಗಳಲ್ಲಿ. ಈ ಅವಧಿಯಲ್ಲಿ 54 ರನ್ ಹರಿದು ಬಂತು. ಇದಕ್ಕೆ ಕಾರಣ, ಸ್ಟೋಯಿನಿಸ್ ಅವರ ಸಿಡಿಲಬ್ಬರದ ಬ್ಯಾಟಿಂಗ್. ಕ್ರಿಸ್ ಜೋರ್ಡನ್ ಅವರ 18ನೇ ಓವರ್ನಲ್ಲಿ ಸ್ಟೋಯಿನಿಸ್ 24 ರನ್ ಚಚ್ಚಿದರು. 2 ಸಿಕ್ಸರ್ ಹಾಗೂ 3 ಬೌಂಡರಿಗಳನ್ನು ಇದು ಒಳಗೊಂಡಿತ್ತು. ಬೆಹ್ರೆಂಡರ್ಫ್ ಅವರ 19ನೇ ಓವರ್ನಲ್ಲಿ ಮತ್ತು ಆಕಾಶ್ ಮಧ್ವಾಲ್ ಅವರ ಅಂತಿಮ ಓವರ್ ನಲ್ಲಿ ತಲಾ 15 ರನ್ ಹರಿದು ಬಂತು. ಆರಂಭದಲ್ಲಿ ಅಮೋಘ ಹಿಡಿತ ಸಾಧಿಸಿದ್ದ ಮುಂಬೈ ಬೌಲರ್ ಕೊನೆಯ ಹಂತದಲ್ಲಿ ಪಂದ್ಯವನ್ನು ಕೈಚೆಲ್ಲಿದರು.